ಬಿ.ಸಿ.ರೋಡ್‌-ಪಾಣೆಮಂಗಳೂರು ಹೆದ್ದಾರಿ : ಬೀದಿ ದೀಪಗಳಿದ್ದರೂ ಕತ್ತಲೆಯಲ್ಲೇ ಸಾಗಬೇಕಾದ ಸ್ಥಿತಿ


Team Udayavani, Jan 24, 2021, 2:20 AM IST

ಬಿ.ಸಿ.ರೋಡ್‌-ಪಾಣೆಮಂಗಳೂರು ಹೆದ್ದಾರಿ : ಬೀದಿ ದೀಪಗಳಿದ್ದರೂ ಕತ್ತಲೆಯಲ್ಲೇ ಸಾಗಬೇಕಾದ ಸ್ಥಿತಿ

ಬಂಟ್ವಾಳ: ಸಾಮಾನ್ಯ ಹೆದ್ದಾರಿ, ಸೇತುವೆಗಳಲ್ಲಿ ಅಪಘಾತವನ್ನು ತಪ್ಪಿಸುವ ಉದ್ದೇಶ ಹಾಗೂ ಪಾದಚಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬೀದಿದೀಪಗಳನ್ನು ಅಳವಡಿ ಸಲಾಗುತ್ತದೆ. ಆದರೆ ಬಿ.ಸಿ.ರೋಡ್‌ನಿಂದ ಪಾಣೆ ಮಂಗಳೂರುವರೆಗೆ ಅಳವಡಿಸಲಾದ 61 ಬೃಹತ್‌ ಬೀದಿದೀಪಗಳಲ್ಲಿ ಯಾವುದೂ ಕೂಡ ಉರಿಯುತ್ತಿಲ್ಲ.!

ಬಿ.ಸಿ.ರೋಡ್‌-ಮಾಣಿ-ಉಪ್ಪಿನಂಗಡಿ ಹೆದ್ದಾರಿ ಯಲ್ಲಿ ನಿತ್ಯ ಸಾವಿರಾರು ವಾಹನಗಳು ತೆರಳುತ್ತಿದ್ದು, ರಾತ್ರಿ ಹೊತ್ತು ಕೂಡ ಹೆಚ್ಚಿನ ವಾಹನಗಳು ಎರಡೂ ದಿಕ್ಕಿನಿಂದಲೂ ಸಾಗುತ್ತವೆ. ವಾಹನ ಚಾಲಕರು/ಸವಾರರ ದುಡುಕು, ಬೆಳಕಿನ ಕೊರತೆಯ ಪರಿಣಾಮ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಹೀಗಾಗಿ ಇಲ್ಲಿ ಬೆಳಕು ಅಗತ್ಯವಾಗಿದೆ.ಆದರೆ ಅದಕ್ಕಾಗಿ ಅಳವಡಿಸಿದ ಬೀದಿದೀಪ ಉರಿಯದೇ ಇರುವುದು ವಿಪರ್ಯಾಸ.

ಬಿ.ಸಿ.ರೋಡ್‌ನ‌ ನಾರಾಯಣ ಗುರು ವೃತ್ತದಿಂದ ಪಾಣೆಮಂಗಳೂರಿನ ಶ್ರೀ ಕಲ್ಲುರ್ಟಿ ಗುಡಿಯವರೆಗೆ ಹೆದ್ದಾರಿಗೆ ಸೂಕ್ತವೆನಿಸಿದ 61 ಬೀದಿದೀಪಗಳನ್ನು ಅಳವಡಿಸಲಾಗಿದೆ. ಆದರೆ ಪ್ರಸ್ತುತ ಅದರಲ್ಲಿ ಬೆರಳೆಣಿಕೆಯ ಬೀದಿದೀಪಗಳು ಉರಿಯುತ್ತಿದೆ. ಕೆಲವೊಂದು ಕೆಲವೊಮ್ಮೆ ಚಿಮಿಣಿ ದೀಪದಂತೆ ಉರಿಯುವುದು ಕಂಡುಬರುತ್ತದೆ.

ಬೀದಿದೀಪಗಳನ್ನು ಅಳವಡಿಸಿರುವ ಪ್ರದೇಶ ಬಂಟ್ವಾಳ ಪುರಸಭೆ ಹಾಗೂ ನರಿಕೊಂಬು ಗ್ರಾ.ಪಂ.ವ್ಯಾಪ್ತಿಗೆ ಬರುತ್ತಿದೆ. ಹೀಗಾಗಿ ಈ ಕುರಿತು ಹೊಂದಾಣಿಕೆಯಿಂದ ದೀಪಗಳ ದುರಸ್ತಿ ಕಾರ್ಯ ನಡೆಯಬೇಕಿದೆ.

2014ರಲ್ಲಿ ಬೀದಿದೀಪಗಳನ್ನು ಪುರಸಭೆಯ 10 ಲಕ್ಷ ರೂ.ಅನುದಾನದಲ್ಲಿ ದುರಸ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಆ ಬಳಿಕ ನಿರ್ವಹಣೆಯೂ ನಡೆದಿಲ್ಲ. ದೀಪಗಳು ದುರಸ್ತಿಯಾಗದೇ ಇದ್ದರೆ ಮುಂದೊಂದು ದಿನ ಅದರ ಕಂಬಗಳು ಕೂಡ ಯಾರ್ಯಾರ ಪಾಲಾಗುವ ಸಾಧ್ಯತೆಯೂ ಇದೆ. ಹೀಗಾಗಿ ಅದಕ್ಕಿಂತ ಮುಂಚೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ದೀಪಗಳ ದುರಸ್ತಿಗೆ ಮುಂದಾಗಬೇಕಿದೆ.

ಸೇತುವೆಗೆ ದೀಪ ಅತೀ ಅಗತ್ಯ :

ಬಿ.ಸಿ.ರೋಡ್‌-ಪಾಣೆಮಂಗಳೂರು ಮಧ್ಯೆ ನೇತ್ರಾವತಿ ಸೇತುವೆಯೂ ಇದ್ದು, ಅದಕ್ಕೂ ಬೀದಿದೀಪಗಳು ಅಗತ್ಯವಾಗಿದೆ. ಸಾಮಾನ್ಯವಾಗಿ ಸೇತುವೆಗಳಲ್ಲಿ ವಾಹನಗಳು ನಿಕಟವಾಗಿ ಆಗುವುದು, ಪಾದಚಾರಿಗಳು ಸೀಮಿತ ಸ್ಥಳದಲ್ಲಿ ಸಾಗುವುದರಿಂದ ಬೆಳಕು ಬೇಕಾಗುತ್ತದೆ. ಈಗಾಗಲೇ ಹಲವು ಮಂದಿ ಇದೇ ಸೇತುವೆಯ ಮೂಲಕ ರಾತ್ರಿ ಹೊತ್ತು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೂಕ್ತ ಬೆಳಕಿದ್ದಾಗ ಆತ್ಮಹತ್ಯೆಯ ಸಂಖ್ಯೆಗೂ ಕಡಿವಾಣ ಬೀಳುವ ಸಾಧ್ಯತೆ ಇರುತ್ತದೆ.

ಜತೆಗೆ ರಾತ್ರಿ ಹೊತ್ತು ಹೆದ್ದಾರಿ, ನದಿಗೆ ಕಸ ಹಾಕುವ ಘಟನೆಗಳು ಕೂಡ ನಡೆಯುತ್ತಿದ್ದು, ಇದರ ಮಧ್ಯೆ ಒಂದು ಕಡೆ ಕಸ ಕೂಡ ರಾಶಿ ಬಿದ್ದುಕೊಂಡಿದೆ. ಹೀಗಾಗಿ ಅದರ ನಿಯಂತ್ರಣಕ್ಕೂ ಇದು ಪೂರಕವಾಗಲಿದೆ.

ಸಂಪೂರ್ಣ ಶಿಥಿಲಗೊಂಡಿದೆ :

ಬೀದಿದೀಪಗಳನ್ನು ಅಳವಡಿಸಿದ ಬೃಹತ್‌ ಕಂಬಗಳು ಸರಿಯಾಗಿದೆ. ಆದರೆ ಬಹುತೇಕ ಕಂಬಗಳಲ್ಲಿ ಮೇಲಿರುವ ದೀಪಗಳು ಸಂಪೂರ್ಣ ಶಿಥಿಲಗೊಂಡಿವೆ. ಬಹುತೇಕ ದೀಪಗಳಲ್ಲಿ ಕೇವಲ ಅದರ ಪೆಟ್ಟಿಗೆಗಳು ಕಂಡುಬಂದರೆ ಇನ್ನು ಕೆಲವು ದೀಪಗಳಲ್ಲಿ ಬಲ್ಬ್ ಕೂಡ ಇಲ್ಲದಾಗಿದೆ. ಒಂದಷ್ಟು ಕಂಬಗಳಲ್ಲಿ ಪೆಟ್ಟಿಗೆ ಹಾಗೂ ದೀಪಗಳಲ್ಲದೆ ಬರೀ ಕಂಬ ಕಾಣುತ್ತಿದೆ.

ಮರಗಳ ರೆಂಬೆಗಳು ತುಂಬಿವೆ :

ಹಲವು ಬೀದಿದೀಪಗಳು ಹೆದ್ದಾರಿ ಬದಿಯ ಮರದ ರೆಂಬೆಗಳ ಮಧ್ಯದಲ್ಲಿದ್ದು, ಅವುಗಳು ಉರಿದರೂ ಬೆಳಕು ಕಾಣುವುದಿಲ್ಲ.  ಬಿ.ಸಿ.ರೋಡ್‌ ವೃತ್ತದ ಬಳಿ ಹಾಗೂ ಹಳೆ ಟೋಲ್‌ ಫ್ಲಾಝಾದ ಬಳಿ  ಇಂತಹ ಸಮಸ್ಯೆಗಳಿವೆ. ಬೆಳಕು ಸರಿಯಾಗಿ ಪಸರಿಸಲು ಬೇಕಾದ ಅಗತ್ಯ ಕೆಲಸಗಳನ್ನು ಮಾಡಬೇಕಾಗಿದೆ.

ಹೆದ್ದಾರಿಯಲ್ಲಿ ಅಪಘಾತಗಳನ್ನು ತಪ್ಪಿಸಲು ಬೀದಿದೀಪಗಳು ಅತಿ ಅಗತ್ಯವಾಗಿದೆ. ಇಲ್ಲಿ ಬೀದಿದೀಪ ಉರಿಯದೇ ಇರುವ ಕುರಿತು ಗಮನಕ್ಕೆ ಬಂದಿದೆ. 2014ರಲ್ಲಿ 10 ಲಕ್ಷ ರೂ.ಅನುದಾನದಲ್ಲಿ ಅವುಗಳನ್ನು ದುರಸ್ತಿ ಮಾಡಲಾಗಿತ್ತು. ಮುಂದೆ ಸಂಬಂಧಪಟ್ಟವರ ಗಮನಕ್ಕೆ ತಂದು ಬೀದಿದೀಪಗಳ ದುರಸ್ತಿಗೆ ಅನುದಾನವಿರಿಸುವ ಕಾರ್ಯ ಮಾಡಲಾಗುವುದು. -ಲೀನಾ ಬ್ರಿಟ್ಟೊ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ.

ಟಾಪ್ ನ್ಯೂಸ್

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.