“ಅಪರಾಧಗಳ ನಿಖರ ಮಾಹಿತಿ ನೀಡಿದರೆ ಕಟ್ಟುನಿಟ್ಟಿನ ಕ್ರಮ’
ಜನಜಾಗೃತಿ ವೇದಿಕೆಯಿಂದ ಶಾಸಕ ಪೂಂಜ ನೇತೃತ್ವದಲ್ಲಿ ಇಲಾಖಾಧಿಕಾರಿಗಳ ಜತೆ ಸಂವಾದ
Team Udayavani, Sep 19, 2019, 5:00 AM IST
ಜನಜಾಗೃತಿ ವೇದಿಕೆಯಿಂದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಇಲಾಖಾಧಿಕಾರಿಗಳ ಜತೆ ಸಂವಾದ ನಡೆಯಿತು.
ಬೆಳ್ತಂಗಡಿ: ತಾ|ನಲ್ಲಿ ಅಪರಾಧ ಚಟುವಟಿಕೆ, ಗಾಂಜಾ ಮಾರಾಟ ಸಹಿತ ಇತ್ಯಾದಿ ಪ್ರಕರಣ ಕುರಿತು ನಿಖರ ಮಾಹಿತಿ ಒದಗಿಸಿದಲ್ಲಿ ಸಂಬಂಧಪಟ್ಟ ಇಲಾಖೆ ಮೂಲಕ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.
ಜನಜಾಗೃತಿ ವೇದಿಕೆ ವತಿಯಿಂದ ಸೆ. 17ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ನಡೆದ ಇಲಾಖಾ ಅಧಿಕಾರಿಗಳ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿದರು. ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಮಾತನಾಡಿ, ಜಿಲ್ಲೆಯ ಪ್ರತಿ ಠಾಣೆಗಳಲ್ಲೂ ಮೂರು ತಿಂಗಳಿಗೊಮ್ಮೆ ಸಭೆ ನಡೆದಾಗ ಅಕ್ರಮಗಳ ನಿಯಂತ್ರಣ ಸಾಧ್ಯವಾಗಲಿದೆ. ಇಲಾಖೆಗಳು ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ನಿಖರತೆ ಮತ್ತು ಅಪರಾಧ ನಿಯಂತ್ರಣಕ್ಕೆ ತತ್‌ಕ್ಷಣ ಪ್ರತಿಕ್ರಿಯಿಸಿದರೆ ಅಪರಾಧ ತಡೆಗೆ ಸಹಕಾರಿಯಾಗಲಿದೆ ಎಂದರು.
ಪುರುಷೋತ್ತಮ ಆಚಾರ್ಯ ಮಾತನಾಡಿ, ಶಾಲಾ – ಕಾಲೇಜು ಪರಿಸರದಲ್ಲಿ ಸಿಗರೇಟ್, ಮದ್ಯ ಮಾರಾಟ ತಡೆಯಬೇಕಿದೆ. ಸಾಂಪ್ರದಾಯಿಕ ಕೋಳಿ ಅಂಕಗಳು ಇಲಾಖೆ ಅಧಿಕಾರಿಗಳ ಸುಪರ್ದಿಯಲ್ಲೇ ನಡೆದರೆ ಜೂಜು ತಪ್ಪಿಸಬಹುದು ಎಂದರು.
ಗೂಡಂಗಡಿಗಳು ತಡರಾತ್ರಿವರೆಗೆ ತೆರೆದಿರುವ ಬಗ್ಗೆ ಡಿ.ಎ. ರಹಿಮಾನ್ ಕಕ್ಕಿಂಜೆ ಗಮನ ಸೆಳೆದು, ಅಕ್ರಮಗಳಿಗೆ ಇದು ಆಸ್ಪದ ನೀಡುತ್ತಿದೆ. ಆದ್ದರಿಂದ ಮಾಲಕರಿಗೆ ಸೂಕ್ತ ಸಮಯ ನಿಗದಿಗೊಳಿಸಬೇಕು ಎಂದರು.
ಅಬಕಾರಿ ಇಲಾಖೆಯಿಂದ ಚುನಾವಣೆ ಸಮಯ ಮಾತ್ರ ಅಕ್ರಮ ಮದ್ಯದ ಪ್ರಕರಣ ಪತ್ತೆಹಚ್ಚಲಾಗುತ್ತದೆ. ಬಳಿಕ ಇಲಾಖೆಯಿಂದ ಗಂಭೀರ ಪ್ರಕರಣ ದಾಖಲಾಗುತ್ತಿಲ್ಲವೇಕೆ ಎಂದು ಗಿರೀಶ್ ಕುಮಾರ್ ವೇಣೂರು ಪ್ರಶ್ನಿಸಿದರು.
ಧರ್ಮಸ್ಥಳ ಗ್ರಾಮ ಮದ್ಯಮುಕ್ತ ಗ್ರಾಮ ವಾಗಿದ್ದರೂ ಕೆಲವೆಡೆ ಅಕ್ರಮದ ಅನುಮಾನವಿದೆ. ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ಶ್ರೀನಿವಾಸ ರಾವ್ ಕನ್ಯಾಡಿ ಆಗ್ರಹಿಸಿದರು.
ಮದ್ಯದಂಗಡಿಗಳು ಪೇಟೆಯಿಂದ ತೆರವಾಗಿ ಗ್ರಾಮಾಂತರ ಭಾಗಕ್ಕೆ ಹೋಗಿ ಇದೀಗ ಮತ್ತೆ ಪಟ್ಟಣಕ್ಕೇ ಮರಳುತ್ತಿದೆ. ಸ್ಥಳೀಯ ಸಂಸ್ಥೆಯಾಗಿ ಸುಪ್ರಿಂ ಅಧಿಕಾರ ಹೊಂದಿರುವ ಗ್ರಾ.ಪಂ.ಗಳ ಮಹತ್ವವೇ ಪ್ರಶ್ನಾರ್ಹವಾಗಿದೆ ಎಂದು ನಾಮದೇವ ರಾವ್ ಮುಂಡಾಜೆ ಆಕ್ಷೇಪಿಸಿದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿಜೆ ಬಳಕೆ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆಜ್ಞೆ ತರುತ್ತಿದೆ. ಆದರೆ ಮನೆಯಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಲ್ಲಿ ಅನಿಯಮಿತ ಡಿಜೆ ಮತ್ತು ಮುಕ್ತ ಮದ್ಯಪಾನ ನಿಲ್ಲಿಸುವವರ್ಯಾರು ಎಂದು ಪ್ರಭಾಕರ ಗೌಡ ಪೊಸೊಂದೋಡಿ ಪ್ರಶ್ನಿಸಿದರು.
ಕೋಳಿ ಅಂಕ
ಪುರಾತನ ದೇವಾಲಯಗಳಲ್ಲಿ ಧಾರ್ಮಿಕ ಪದ್ಧತಿ ಯಂತೆ ಕೋಳಿ ಅಂಕಗಳು ನಡೆಯುತ್ತಿತ್ತೇ ವಿನಾ ಇತರೆಡೆ ಇರಲಿಲ್ಲ. ಆದರೆ ಈಗ ಎಲ್ಲ ಕೇಂದ್ರಗಳಲ್ಲೂ ಇದು ಸಾಮಾನ್ಯವಾಗಿದೆ. ಇಲ್ಲೇ ಅತೀ ಹೆಚ್ಚು ಅಕ್ರಮ, ಮದ್ಯ ಮಾರಾಟ ನಡೆಯುತ್ತಿವೆ ಎಂದು ವೆಂಕಟ್ರಾಯ ಅಡೂರು ದೂರಿದರು. ಎಂ.ಎ. ಕಾಸಿಂ ಮಲ್ಲಿಗೆಮನೆ, ಪಿ.ಕೆ. ರಾಜು ಪೂಜಾರಿ, ಕಿಶೋರ್ ಹೆಗ್ಡೆ ಮತ್ತಿತರರು ಅಕ್ರಮ ಮದ್ಯ ನಿಯಂತ್ರಣ ವಿಚಾರವಾಗಿ ಅನಿಸಿಕೆ ವ್ಯಕ್ತಪಡಿಸಿದರು.
ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಾರದಾ ಆರ್. ರೈ., ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಗ್ರಾ. ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಶ್ನೆಗಳಿಗೆ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಕುಮಾರ್ ಪ್ರತಿಕ್ರಿಯಿಸಿ, ಯಾವುದೇ ರೀತಿಯ ಅಕ್ರಮಕ್ಕೆ ಇಲಾಖೆ ಆಸ್ಪದ ನೀಡುತ್ತಿಲ್ಲ. ಅಕ್ರಮ ಎಂದು ಕಂಡ ಕೂಡಲೇ ಕಾನೂನು ಚೌಕಟ್ಟಿನೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನಜಾಗೃತಿ ಸಭೆ ಆಯೋಜಿಸಿ
ಪ್ರತೀ ಗ್ರಾಮಗಳಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ವತಿಯಿಂದ ಜನಜಾಗೃತಿ ಸಭೆಗಳು ಆಯೋಜನೆಯಾಗಲಿ. ಗ್ರಾಮಸಭೆಗಳು ಅಧಿಕಾರಿಗಳಿಂದಲೇ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದು, ಇಲ್ಲಾದರೂ ಈ ವಿಚಾರವಾಗಿ ಪ್ರಸ್ತಾವಗಳು ಆಗಲಿ ಎಂದು ಅಂಚೆ ಇಲಾಖೆ ನಿವೃತ್ತ ಸಿಬಂದಿ ಪ್ರಮೋದ್ ಕುಮಾರ್ ತಿಳಿಸಿದರು.
ಸಭೆಗಳು ನಡೆಯಲಿ
ಮದ್ಯ ಅಕ್ರಮ ಮಾರಾಟ ಹಾಗೂ ಶಾಲಾ-ಕಾಲೇಜಿನ ಆವರಣದ ಸಮೀಪ ತಂಬಾಕು ಉತ್ಪನ್ನ ಮಾರಾಟ ಕುರಿತು ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿ¨ªಾರೆ. ಜೂಜು ಸಹಿತ ಕೋಳಿ ಅಂಕಗಳ ಕಡಿವಾಣಕ್ಕೆ ನನ್ನ ಬೆಂಬಲ ಇದೆ. ಇಂತಹ ಸಭೆಗಳು ನಡೆಯುತ್ತಿರಬೇಕು.
- ಹರೀಶ್ ಪೂಂಜ, ಶಾಸಕರು
ನಿಯಂತ್ರಣ ಆಗಲಿ
ಸಂಪ್ರದಾಯದ ಹೆಸರಿನಲ್ಲಿ ಕೋಳಿ ಅಂಕಗಳು ನಡೆದು ಅಲ್ಲಿ ಜೂಜು, ಮದ್ಯ ಅಕ್ರಮ ಮಾರಾಟ ಹಾಗೂ ಇತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ. ಇದರ ನಿಯಂತ್ರಣ ಆಗಲೇಬೇಕು.
- ವಿವೇಕ್ ವಿನ್ಸೆಂಟ್ ಪಾಯಿಸ್
ಕಾರ್ಯದರ್ಶಿ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ
ಜನಜಾಗೃತಿ
ಮದ್ಯ ನಿಷೇಧದ ಬಗ್ಗೆ ಜನಜಾಗೃತಿ ಮೂಡಿಸಬಹುದಾಗಿದ್ದು, ಅಕ್ರಮ ಮದ್ಯ ಮಾರಾಟದ ನಿಖರ ಮಾಹಿತಿಗಳು ಲಭಿಸಿದರೆ ದಂಡಾಧಿಕಾರಿಯಾಗಿ ಕ್ರಮ ಜರಗಿಸುತ್ತೇನೆ.
- ಗಣಪತಿ ಶಾಸ್ತ್ರಿ, ತಹಶೀಲ್ದಾರ್
ಸಿಬಂದಿ ಕೊರತೆ
ಮದ್ಯ ಮಾರಾಟ ಅಧಿಕೃತ ಕೇಂದ್ರಗಳಿಂದ ಮದ್ಯದ ಬಾಟಲ್‌ಗಳನ್ನು ಖರೀದಿಸಿ ಮಾರಾಟ ಮಾಡುವ ಕೆಲಸ ನಡೆಯುತ್ತಿದೆ. ಇಲಾಖೆ ದಾಳಿ ಮಾಡಿದಾಗ ಪ್ರಮಾಣಕ್ಕಿಂತ ಕಡಿಮೆ ಇದ್ದಾಗ ಕೇಸು ದಾಖಲಿಸಲು ಸಾಧ್ಯವಾಗುತ್ತಿಲ್ಲ. ಪ್ರಮಾಣಕ್ಕಿಂತ ಹೆಚ್ಚಿದ್ದಾಗ ಅಕ್ರಮವೆಂದು ದೃಢಪಟ್ಟಲ್ಲಿ ಕ್ರಮ ಕೈಗೊಂಡಿದ್ದೇವೆ. ಇಲಾಖೆಯಲ್ಲಿ ಸಿಬಂದಿ ಕೊರತೆ ಇದ್ದು ಗ್ರಾಮಸಭೆ, ಇತರ ವೇದಿಕೆ ಗಳಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತಿಲ್ಲ.
- ಸೌಮ್ಯಲತಾ, ಅಬಕಾರಿ ಇನ್ಸ್‌ಪೆಕ್ಟರ್, ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.