ಪಾಕೆಟ್ ಮನಿ ಸಂತ್ರಸ್ತರಿಗೆ ಕೊಟ್ಟ ವಿದ್ಯಾರ್ಥಿನಿ!
Team Udayavani, Sep 2, 2018, 2:21 PM IST
ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಪಲ್ಲವಿ ಕೊಡಗು ಜಿಲ್ಲೆಯ ಸಂತ್ರಸ್ತರ ನೋವಿಗೆ ಸ್ಪಂದಿಸುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದಾಳೆ. ತನ್ನ ತಾತ, ಅಜ್ಜಿ, ಅತ್ತೆ, ಮಾವ, ಹಿರಿಯರೆಲ್ಲ ನೀಡಿದ್ದ 1,102 ರೂ. ಪಾಕೆಟ್ ಮನಿಯನ್ನು ಕೂಡಿಟ್ಟಿದ್ದ ಪಲ್ಲವಿ, ಈ ಹಣವನ್ನು ದೇಣಿಗೆ ನೀಡಿದ್ದಾಳೆ. ಶಾಲೆಯಲ್ಲಿ ಶಿಕ್ಷಕರ ಮೂಲಕ ಕೊಡಗಿನ ಪ್ರಾಕೃತಿಕ ವಿಕೋಪಗಳ ಸಂತ್ರಸ್ತರ ನೋವುಗಳನ್ನು ಅರಿತಿದ್ದ ಪಲ್ಲವಿ, ತಾನು ಕೂಡಿಟ್ಟಿದ್ದ ಹಣವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ| ಸುಧಾ ರಾವ್ ಅವರಿಗೆ ಹಸ್ತಾಂತರಿಸಿದ್ದಾಳೆ.
ಪಲ್ಲವಿ ನೀಡಿದ ನಾಣ್ಯಗಳ ಪೊಟ್ಟಣ ಸ್ವೀಕರಿಸಿದ ಡಾ| ಸುಧಾ ರಾವ್ ಮಾತನಾಡಿ, ಈ ಶಾಲೆ ಮತ್ತು ಮನೆಯವರು ನೀಡಿದ ಸಂಸ್ಕಾರ ಸಾರ್ಥಕತೆಯನ್ನು ಸಾರುತ್ತಿದೆ. ಪಲ್ಲವಿ ನಮಗೆಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು. ಪಲ್ಲವಿ ವೀರಭದ್ರಪ್ಪ ಮತ್ತು ಶರಣಮ್ಮ ದಂಪತಿಯ ಪುತ್ರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.