ಭತ್ತದ ಗದ್ದೆಯ ಕೆಸರಲ್ಲಿ ಮಿಂದೆದ್ದ ವಿದ್ಯಾರ್ಥಿಗಳು
Team Udayavani, Aug 27, 2019, 5:43 AM IST
ಈಶ್ವರಮಂಗಲ: ಭತ್ತ ಕೃಷಿ ಕ್ಷೀಣಿಸುತ್ತಿದೆ. ಕೋಣ, ಎತ್ತುಗಳಿಂದ ಗದ್ದೆಯನ್ನು ಉಳುಮೆ ಮಾಡುತ್ತಿದ್ದ ಕಾಲ ಮೆರೆಗೆ ಸರಿಯುತ್ತಿದೆ. ಯಾಂತ್ರೀಕೃತ ವಿಧಾನದಿಂದ ಉಳುಮೆ ಮಾಡುತ್ತಿದ್ದರೂ ಕಾರ್ಮಿಕರ ಕೊರತೆಯಿಂದಾಗಿ ಹಲವರು ಭತ್ತದ ಕೃಷಿ ಕೈಬಿಟ್ಟಿದ್ದಾರೆ.
ಗಡಿಭಾಗದ ಕೆಲವು ಕಡೆಗಳಲ್ಲಿ ಮಾತ್ರ ಪಾರಂಪರಿಕ ವಿಧಾನದ ಭತ್ತದ ಕೃಷಿ ಉಳಿದಿದೆ. ಮುಂದಿನ ಪೀಳಿಗೆಗೆ ಭತ್ತದ ಬೇಸಾಯದ ಮಹತ್ವವನ್ನು ಪರಿಚಯಿಸುವ ಸಲುವಾಗಿ ಶಾಲಾ ಮಕ್ಕಳಿಗೆ ಕೆಸರ್ ಒಂಜಿ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಳೆಯ ಕಾಲದ ನೇಗಿಲು, ನೊಗ, ಭತ್ತದ ಕಳಸಿಗೆ, ಅಕ್ಕಿಮುಡಿ, ಸೌಟುಗಳು ಇತ್ಯಾದಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
200 ವಿದ್ಯಾರ್ಥಿಗಳು
ಕೇರಳ ಕರ್ನಾಟಕ ಗಡಿಭಾಗದ ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಆಜಡ್ಕ ಹೊಸಮನೆ ವೀರೇಂದ್ರ ಗೌಡ ಅವರ ಗದ್ದೆಯಲ್ಲಿ ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಯ 200 ವಿದ್ಯಾರ್ಥಿಗಳು ನೇಜಿ ನಾಟಿ ಮಾಡಿದರು. ಹಿರಿಯರು ನಾಟಿಯ ವಿಧಾನವನ್ನು ವಿವರಿಸಿದರು. ಸಾಂಪ್ರದಾಯಿಕ ಹಾಡುಗಳನ್ನು ಹಾಡಿದರು. ಶಿಕ್ಷಕರು ಸಾಥ್ ನೀಡಿದರು.
ಬೆಳ್ಳೂರು ಗ್ರಾ.ಪಂ. ಸದಸ್ಯೆ ಮಾಲತಿ ಜೆ. ರೈ, ಗದ್ದೆ ಮಾಲಕ ವೀರೇಂದ್ರ ಗೌಡ ಮಾತನಾಡಿದರು. ನಾಲ್ಕು ಗೋಡೆಗಳ ಮಧ್ಯೆ ಪ್ರತಿ ದಿನ ಕಳೆಯುವ ವಿದ್ಯಾರ್ಥಿಗಳಿಗೆ ನೇಜಿನ ಪಾಠ ಹೊಸ ಅನುಭವ ನೀಡಿತ್ತು. ಇಂದಿನ ಕಾಲದಲ್ಲಿ ಭತ್ತ ಬೇಸಾಯದ ಅನುಭವ ಇಲ್ಲ.
ಆಟೋಟ ಸ್ಪರ್ಧೆ
ನೇಜಿ ನಾಟಿಯ ಪಾಠ ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಆಟೋಟಗಳು ನಡೆದವು. ಕೆಸರು ಗದ್ದೆಯಲ್ಲಿ ವಿದ್ಯಾರ್ಥಿಗಳು ಮೈಯೆಲ್ಲ ಕೆಸರು ಮಾಡಿಕೊಂಡು ಸಂತೋಷ ಪಟ್ಟರು. ಆಟೋಟ ಸ್ಪರ್ಧೆ ಇಟ್ಟಿರುವುದರಿಂದ ವಿದ್ಯಾರ್ಥಿಗಳಲ್ಲಿ ಪೈಪೋಟಿ ನಡೆಯುವುದು ಸಾಮಾನ್ಯವಾಗಿತ್ತು. ಐದು ಕಾಲಿನ ಓಟ, ಕೆಸರಿನಲ್ಲಿ ನಿಧಿ ಹುಡುಕುವುದು, ಕಬಡ್ಡಿ, ಓಟ, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಕುಟುಂಬಶ್ರೀ ಸ್ವಸಹಾಯ ಸಂಘ, ಸಂಘ ಸಂಸ್ಥೆಗಳು ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಲು ಸಹಕರಿಸಿದ್ದವು. ಗೆಳೆಯರ ಬಳಗ ಕಾಯರ್‌ಪದವು, ಈಶ್ವರಿ ಕುಟುಂಬಶ್ರೀ ಹೊಸಮನೆ ವಿಜೇತರಿಗೆ ಬಹುಮಾನವನ್ನು ನೀಡಿ ಸಹಕರಿಸಿದರು.
ಶಿಕ್ಷಕರಾದ ಅನಂತಗಣಪತಿ, ಸುಖೇಶ್ ರೈ, ಪ್ರಶಾಂತಿ ರೈ, ಸುಹಾಸ್ ಬಿ., ಕರುಣಾಕರ, ದಿವ್ಯಶ್ರೀ ಕಾರ್ಯಕ್ರಮಗಳ ಜವಾಬ್ದಾರಿ ವಹಿಸಿದ್ದರು.
ಕೃಷಿ ಪ್ರಜ್ಞೆ ಮೂಡಿಸುವ ಕಾರ್ಯ
ಭತ್ತ ಕೃಷಿಯ ಅರಿವು ಮತ್ತು ಕಷ್ಟಗಳನ್ನು ಮಕ್ಕಳಲ್ಲಿ ಮೂಡಿಸುವ ಸಲುವಾಗಿ ಕೆಸರ್‌ಡೊಂಜಿ ದಿನ ಮಾಡಿದ್ದೇವೆ. ಕೆಸರಿನ ಬದುಕು ಯಾವ ರೀತಿಯಲ್ಲಿ ರೈತನನ್ನು ಆರೋಗ್ಯವಂತನಾಗಿ ಮಾಡುತ್ತದೆ ಎನ್ನುವ ಪ್ರಜ್ಞೆ ಮಕ್ಕಳಿಗೆ ಬರಬೇಕು. ಜತೆಗೆ ಮನೋರಂಜನೆ ಸಲುವಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದೇವೆ. ಇದು ವಿದ್ಯಾರ್ಥಿಗಳ ಮೇಲೆ ಹೆಚ್ಚು ಪ್ರಭಾವ ಬೀರಿದೆ.
– ಸತ್ಯಶಂಕರ ಭಟ್, ಮುಖ್ಯ ಶಿಕ್ಷಕ, ಸರ್ವೋದಯ ಪ್ರೌಢಶಾಲೆ, ಸುಳ್ಯಪದವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.