ಮಾಡಾವು, ಕೈಕಾರ ಸಬ್‌ಸ್ಟೇಷನ್ ಕಾಮಗಾರಿ ಶೀಘ್ರ ಮುಗಿಸಿ
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಕ್ಕೊರಲ ಆಗ್ರಹ
Team Udayavani, Jul 17, 2019, 5:00 AM IST
ಈಶ್ವರಮಂಗಲ: ಬೆಟ್ಟಂಪಾಡಿ ಗ್ರಾ.ಪಂ. ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ಬೇಬಿ ಜಯರಾಮ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಪಂಚಾಯತ್ ಕಾರ್ಯದರ್ಶಿ ಬಾಬು ನಾಯ್ಕ ಎಂ. ಸಭೆಯಲ್ಲಿ ಸುತ್ತೋಲೆ ಮಂಡಿಸಿದರು.
ಮಾಡಾವು ವಿದ್ಯುತ್ ಸಬ್‌ಸ್ಟೇಶನ್ ಕೇಂದ್ರದ ಅಗತ್ಯದ ಬಗ್ಗೆ ನಿರ್ಣಯ ಕೈಗೊಂಡು ವರದಿ ಕಳಿಹಿಸುವಂತೆ ಸುತ್ತೋಲೆ ಬಂದಿದೆ ಎಂದು ಹೇಳಿದರು. ಸದಸ್ಯರು ಮಾಡಾವು ಸಬ್ ಸ್ಟೇಷನ್ ಕಾಮಗಾರಿಯನ್ನು ಮೆಸ್ಕಾಂ ಶೀಘ್ರ ಮುಗಿಸಿ ಕೊಡಬೇಕು. ಕೈಕಾರ ಸಬ್ ಸ್ಟೇಷನ್ ಕಾಮಗಾರಿಯನ್ನೂ ತ್ವರಿತಗೊಳಿಸುವಂತೆ ಸದಸ್ಯರು ಆಗ್ರಹಿಸಿದರು. ಕೂಡಲೇ ಎರಡು ಕಾಮಗಾರಿಗಳ ವೇಗ ಹೆಚ್ಚಿಸಲು ಮೆಸ್ಕಾಂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಗ್ರಂಥಾಲಯ ಕಟ್ಟಡ ದುರಸ್ತಿ ಮಾಡಿ
ಪಂಚಾಯತ್ ಸಮೀಪದ ಗ್ರಂಥಾಲಯದ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಗ್ರಂಥಾಲಯದ ಮೇಲ್ವಿಚಾರಕಿ ಪಂಚಾಯತ್‌ಗೆ ಮನವಿ ನೀಡಿದ್ದಾರೆ ಎಂದು ಕಾರ್ಯದರ್ಶಿ ಹೇಳಿದರು. ಕಟ್ಟಡವನ್ನು ನೆಲಸಮ ಮಾಡುವುದು ಒಳಿತು ಎಂದು ಸದಸ್ಯ ಪ್ರಕಾಶ್ ರೈ ಬೈಲಾಡಿ ಸಲಹೆ ನೀಡಿದರು. ಒಂದೇ ಕಟ್ಟಡದಲ್ಲಿ ಗ್ರಂಥಾಲಯ ಮತ್ತು ಗ್ರಾಮ ಲೆಕ್ಕಿಗರ ಕಚೇರಿ ಇರುವುದರಿಂದ ಅವರಿಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯಿತು. ಕೊನೆಗೆ ಜಿ.ಪಂ. ಎಂಜಿನಿಯರ್ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಎಂದು ಕಾರ್ಯದರ್ಶಿ ರಾಮ ನಾಯ್ಕ ಹೇಳಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ನಿಯುಕ್ತಿಗೊಂಡ ಶಾಂತಾರಾಮ ಎನ್. ಕರ್ತವ್ಯಕ್ಕೆ ಹಾಜರಾದರು.
ಉಪಾಧ್ಯಕ್ಷೆ ಭವಾನಿ ಕಜೆ, ಸದಸ್ಯರಾದ ರಮೇಶ್ ಶೆಟ್ಟಿ, ಮೊದು ಕುಂಞಿ, ಭವಾನಿ, ಜಗನ್ನಾಥ ರೈ, ದಿವ್ಯಾ, ಪಾರ್ವತಿ ಎಂ., ಐತ್ತಪ್ಪ ವೈ.ಜಿ., ಪ್ರೇಮಲತಾ, ವಿನೋದ್ ಕುಮಾರ್ ರೈ, ಪ್ರಕಾಶ್ ರೈ, ದಿನೇಶ್ ಜಿ., ಉಮಾವತಿ, ಪುಷ್ಪಲತಾ ಎಂ., ರಕ್ಷಣ್ ರೈ, ಪದ್ಮಾವತಿ, ಶಾಲಿನಿ, ಆಶಾ ಕಾರ್ಯಕರ್ತೆಯರಾದ ಪುಷ್ಪಲತಾ, ಮಮತಾ, ಭವಾನಿ ಉಪಸ್ಥಿತರಿದ್ದರು.
ಪಂಚಾಯತ್ ಸಿಬಂದಿ ರಾಮ ನಾಯ್ಕ, ಸಂದೀಪ್ ಟಿ., ಕವಿತಾ ಜಿ.ಟಿ., ಚಂದ್ರಾವತಿ ಎಂ., ಸವಿತಾ ಬಿ. ಮುಂತಾದವರು ಸಹಕಾರ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.