ಶಿಸ್ತು, ದೃಢತೆ ಬೆಳೆಸಿಕೊಂಡರೆ ಯಶಸ್ಸು: ದಿನಕರ ಶೆಟ್ಟಿ
ಕೊಂಬೆಟ್ಟು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಉದ್ಘಾಟಿಸಿ ಡಿವೈಎಸ್ಪಿ
Team Udayavani, Aug 3, 2019, 5:38 AM IST
ಪುತ್ತೂರು: ಜೀವನದಲ್ಲಿ ಶಿಸ್ತು ಹಾಗೂ ದೃಢತೆಯನ್ನು ಬೆಳೆಸಿಕೊಂಡರೆ ಯಶಸ್ಸು ಸಾಧಿಸಬಹುದು. ಇಂದಿನ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಿ ರೂಪುಗೊಂಡು ದೇಶ ಸೇವೆಯಲ್ಲಿ ತೊಡಗಿಕೊಳ್ಳಲು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಸಹಕಾರಿಯಾಗಬಲ್ಲದು ಎಂದು ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಹೇಳಿದರು.
ಶನಿವಾರ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಪೀಳಿಗೆಯನ್ನು ಉತ್ತಮ ನಾಗರಿಕರನ್ನಾಗಿ ರೂಪುಗೊಳಿಸುವುದೇ ಸ್ಟೂಡೆಂಟ್ ಕೆಡೆಟ್‌ನ ಮುಖ್ಯ ಉದ್ದೇಶ. ಡಾ| ಎಪಿಜೆ ಅಬ್ದುಲ್ ಕಲಾಂ ಅವರ ಕನಸಿನ ಸಂಸ್ಥೆ ಇದಾಗಿದೆ. ಜತೆಗೆ ದೇಶ ಕಟ್ಟಲು ಬಹಳಷ್ಟು ಕೊಡುಗೆಗಳನ್ನು ನೀಡಿದ ಸಂಸ್ಥೆಯಾಗಿದೆ ಎಂದ ಅವರು, ಪ್ರತಿಯೊಬ್ಬ ತನ್ನ ಗುರಿಯನ್ನು ಮೊದಲೇ ನಿರ್ಧಾರ ಮಾಡಬೇಕು. ಅದು ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಕ್ಕಿದೆ ಎಂದರು.
ವಿವೇಚಿಸುವ ಗುಣ
ಮುಖ್ಯ ಅತಿಥಿಯಾಗಿದ್ದ ಪುತ್ತೂರು ನಗರ ಠಾಣಾ ಮಹಿಳಾ ಎಸ್‌ಐ ಓಮನಾ ಮಾತನಾಡಿ, ಶಿಸ್ತನ್ನು ಅಳವಡಿಸಿಕೊಂಡು ಬೆಳೆಯುವ ವಿದ್ಯಾರ್ಥಿಗಳಲ್ಲಿ ತಪ್ಪು, ಸರಿಗಳನ್ನು ವಿವೇಚಿಸುವ ಗುಣ ಇರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಧೈರ್ಯ, ಸಾಹಸ ಪ್ರವೃತ್ತಿ, ಶಿಸ್ತು ಅಳವಡಿಸಿಕೊಂಡು ದೇಶ ಕಟ್ಟುವಲ್ಲಿ ತಮ್ಮದೇ ಪಾಲು ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಮಾತನಾಡಿ, ತಮ್ಮ ಮಕ್ಕಳು ಎಂಜಿನಿಯರ್, ಡಾಕ್ಟರ್ ಆಗಬೇಕೆನ್ನುವ ಕನಸನ್ನು ಹೆತ್ತವರು ಬದಿಗಿಟ್ಟು, ಸ್ಟೂಡೆಂಟ್ ಪೊಲೀಸ್ ವ್ಯವಸ್ಥೆಗಳ ಮೂಲಕ ದೇಶ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹ ನೀಡಿ ಎಂದರು.
ನಗರ ಠಾಣಾ ಪ್ರೊಬೆಷನರಿ ಪಿಎಸ್‌ಐ ರಾಜ್‌ಕುಮಾರ್, ತಾಲೂಕು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಎಂ. ಮಾಮಚ್ಚನ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್, ಎನ್‌ಸಿಸಿ ಅಧಿಕಾರಿ, ಎಸ್‌ಪಿಸಿಯ ಎಡಿ ವಸಂತ, ಶಾಲಾ ಎನ್‌ಸಿಸಿ ಅಧಿಕಾರಿ ಗ್ರೆಗೋರಿ ಶುಭಹಾರೈಸಿದರು.
ಉಪ ಪ್ರಾಂಶುಪಾಲೆ ಮರ್ಸಿ ಮಮತಾ, ಲೋನಿ ಪಾಯಸ್ ಉಪಸ್ಥಿತರಿದ್ದರು. ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನ ಸಿಪಿಒ ಗೀತಾಮಣಿ ಸ್ವಾಗತಿಸಿ, ಚಿತ್ರಕಲಾ ಶಿಕ್ಷಕ ಜಗನ್ನಾಥ ವಂದಿಸಿದರು. ಮಮತಾ ರೈ ನಿರೂಪಿಸಿದರು.
ಕಿಟ್ ವಿತರಣೆ
ಉಪ ಪ್ರಾಂಶುಪಾಲೆ ಮರ್ಸಿ ಮಮತಾ ಹಾಗೂ ಎಸ್‌ಪಿಸಿ ಸಿಪಿಒ ಗೀತಾಮಣಿ ಅವರಿಗೆ ಪೊಲೀಸ್ ಇಲಾಖೆಯಿಂದ ನೀಡಿದ ಕಿಟ್ ಅನ್ನು ವಿತರಿಸಲಾಯಿತು.
ಆಕರ್ಷಕ ಪಥ ಸಂಚಲನ
ಕಾರ್ಯಕ್ರಮದ ಮೊದಲು ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನ ಸದಸ್ಯರು ಸಮವಸ್ತ್ರ ಧರಿಸಿ ಶಾಲಾ ಆವರಣದಿಂದ ಅತಿಥಿಗಳನ್ನು ಆಕರ್ಷಕ ಪಥಸಂಚಲನದ ಮೂಲಕ ಸ್ವಾಗತಿಸಿ ಕರೆತಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.