Sullia; ಬಟ್ಟೆ ವ್ಯಾಪಾರಿಯಿಂದ ಅನುಚಿತ ವರ್ತನೆ ಆರೋಪ
Team Udayavani, Apr 7, 2024, 12:27 AM IST
ಸುಳ್ಯ: ಯುವಕನೊಬ್ಬ ಬಟ್ಟೆ ಮಾರಾಟಕ್ಕೆಂದು ಮನೆಗೆ ಬಂದು ಮನೆಯಲ್ಲಿನ ಯುವತಿಯರ ಜತೆ ಅನುಚಿತವಾಗಿ ವರ್ತಿಸಿದ್ದು ಆತನಿಗೆ ಥಳಿಸಿದ ಘಟನೆ ಅಮರಪಟ್ನೂರಿನ ಜೋಗಿಯಡ್ಕ ಎಂಬಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ.
ಹಿಂದಿ ಭಾಷೆಯಲ್ಲಿ ಮಾತನಾಡುವ ಯುವಕರ ತಂಡ ಬಟ್ಟೆಗಳನ್ನು ಬೈಕಿನಲ್ಲಿರಿಸಿಕೊಂಡು ಮನೆ ಮನೆಗೆ ಬಂದು ವ್ಯಾಪಾರ ಮಾಡುತ್ತಿದ್ದರು. ಯುವಕನೊಬ್ಬ ಜೋಗಿಯಡ್ಕ ಪರಿಸರದಲ್ಲಿ ಇರುವ ಮನೆಗೆ ಬಂದು ಬಟ್ಟೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಮನೆಯಲ್ಲಿ ಯುವತಿ ಓರ್ವಳೇ ಇರುವುದನ್ನು ಗಮನಿಸಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಯುವತಿ ಬಳಿಕ ಮನೆಯವರಿಗೆ ತಿಳಿಸಿದ್ದು, ಅದೇ ಯುವಕರ ತಂಡ ಮತ್ತೊಮ್ಮೆ ಚೊಕ್ಕಾಡಿ ರಸ್ತೆಯಲ್ಲಿ ಬಂದಾಗ ಸ್ಥಳೀಯ ಯುವಕರು ಸೇರಿ ಅವರಲ್ಲಿ ವಿಚಾರಿಸಿ ಮೂರು ಮಂದಿಗೂ ಥಳಿಸಿದ್ದು, ಯುವಕರು ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸಿರುವುದಾಗಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್?
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.