Sullia ಹಲ್ಲೆ ಪ್ರಕರಣ: ಶಿಕ್ಷೆ ವಿಧಿಸಿದ ನ್ಯಾಯಾಲಯ
Team Udayavani, Dec 10, 2023, 9:44 PM IST
ಸುಳ್ಯ: ನಿವೃತ್ತ ಯೋಧ, ಸುಳ್ಯ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು, ಪ್ರಕರಣದ ಆರೋಪಿಗೆ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2018ರ ನ. 20ರಂದು ಬೆಳಗ್ಗೆ ಮಂಡೆಕೋಲು ಗ್ರಾಮದ ಪೇರಾಲು ಎಂಬಲ್ಲಿ ಮಾಜಿ ಸೈನಿಕ ಅಡ್ಡಂತಡ್ಕ ದೇರಣ್ಣ ಗೌಡರು ಪೇರಾಲು ಅಂಚೆ ಕಚೇರಿಯ ಬಳಿ ರಸ್ತೆಯಲ್ಲಿ ನಿಂತುಕೊಂಡಿದ್ದ ಸಮಯ ನಾಗೇಶ ಅವರು ಹಿಂಬದಿಯಿಂದ ಬಂದು ಏಕಾಏಕಿ ಅವ್ಯಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ದೇರಣ್ಣ ಗೌಡರ ತಲೆಗೆ ಹೊಡೆದು, ಜೀವ ಬೆದರಿಕೆ ಒಡ್ಡಿದ್ದು ಹಲ್ಲೆಯ ಪರಿಣಾಮ ದೇರಣ್ಣ ಗೌಡರಿಗೆ ಗಾಯವಾಗಿತ್ತು. ದೇರಣ್ಣ ಗೌಡರು ಪಂಚಾಯತ್ ಸದಸ್ಯರಾಗಿದ್ದ ಸಮಯದಲ್ಲಿ ಮಂಡೆಕೋಲು ಪಂಚಾಯತ್‌ಗೆ ಕಾಯ್ದಿರಿಸಿದ ಜಾಗವನ್ನು ನಾಗೇಶರು ತನ್ನ ಹೆಸರಿಗೆ ಅಕ್ರಮವಾಗಿ ಮಾಡಿಸಿಕೊಂಡಿರುವುದಾಗಿ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ನಿರಂತರ ಹೋರಾಟ ನಡೆಸಿದ ಕಾರಣಕ್ಕೆ ದ್ವೇಷಗೊಂಡು ಈ ಕೃತ್ಯ ನಡೆಸಿದ್ದಾಗಿದೆ ಎಂದು ಆರೋಪಿಯ ವಿರುದ್ಧ ದೋಷಾರೋಪಣ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಇದರ ವಿಚಾರಣೆ ನಡೆಸಿದ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಬಿ.ಮೋಹನ್ ಬಾಬುರವರು ಕಲಂ 504, 506 ರಲ್ಲಿ ಆರೋಪ ಸಾಬೀತಾಗದೆ ಆ ಆರೋಪದಿಂದ ದೋಷಮುಕ್ತಗೊಳಿಸಿ, ಕಲಂ 324 ರಡಿಯಲ್ಲಿ ಅಪರಾಧ ಎಸಗಿರುವುದು ಸಾಬೀತಾಗಿರುತ್ತದೆ ಎಂದು ಶಿಕ್ಷೆ ವಿಧಿಸಿರುತ್ತಾರೆ.
ಕಲಂ 324ರ ಅಪರಾಧಕ್ಕೆ ನ್ಯಾಯಾಲಯವು 10,000 ರೂ. ಜುಲ್ಮಾನೆ ವಿಧಿಸಿ, ಜುಲ್ಮಾನೆ ಕಟ್ಟದ ಪಕ್ಷದಲ್ಲಿ 6 ತಿಂಗಳ ಸಾಧಾರಣ ಶಿಕ್ಷೆ ಅನುಭವಿಸಬೇಕೆಂದು ಆದೇಶ ಮಾಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ವಾದ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.