![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
Team Udayavani, Jan 29, 2025, 1:06 PM IST
ಸುಳ್ಯ: ತಾಲೂಕಿನ ವಿವಿಧ ಭಾಗದಲ್ಲಿ ಬಸ್ ಸಮಸ್ಯೆಗಳಿದ್ದು ಅದನ್ನು ನಿವಾರಿಸಲು ಕೆ.ಎಸ್.ಆರ್.ಟಿ.ಸಿ. ವತಿಯಿಂದ ಸಭೆ ಕರೆಯಬೇಕು ಎಂದು ಗ್ಯಾರಂಟಿ ಸಮಿತಿ ಸದಸ್ಯರು ತಾಲೂಕು ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಆಗ್ರಹಿಸಿದರು.
ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಅಧ್ಯಕ್ಷತೆಯಲ್ಲಿ ತಾ. ಪಂ. ಸಭಾಂಗಣದಲ್ಲಿ ಸಭೆ ನಡೆಯಿತು. ಸಮಿತಿ ಸದಸ್ಯ ಭವಾನಿಶಂಕರ್ ಮಾತನಾಡಿ, ತಾಲೂಕಿನ ಬಸ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ. ವತಿಯಿಂದ ಸಭೆ ನಡೆಸಬೇಕು ಎಂದು ಈ ಹಿಂದೆ ತಿಳಿಸಿದ್ದರೂ ಇನ್ನೂ ಸಭೆ ನಡೆದಿಲ್ಲ. ಕೂಡಲೇ ಸಮಸ್ಯೆ ಪರಿಹರಿಸಲು ಸಭೆ ನಡೆಸಬೇಕು. ಸುಳ್ಯಕ್ಕೆ ಬೇಡಿಕೆ ಇರುವ ಬಸ್, ಸಿಬಂದಿ, ಹೆಚ್ಚುವರಿ ಬಸ್‌ಗಳ ಬಗ್ಗೆ ತಿಳಿಸಬೇಕು. ನಾವು ಗ್ಯಾರಂಟಿ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸರಕಾರದ ಗಮನಕ್ಕೆ ತಂದು ಬೇಡಿಕೆ ಪರಿಹರಿಸುವ ಕೆಲಸ ಮಾಡುತ್ತೇವೆ ಎಂದರು. ಸಭೆ ನಡೆಸಲು ದಿನ ನಿಗದಿ ಮಾಡುತ್ತೇವೆ ಎಂದು ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ವಾಸುದೇವ ಉತ್ತರಿಸಿದರು. ಕಂದ್ರಪ್ಪಾಡಿಗೆ ಸಂಜೆ ಬರುತ್ತಿದ್ದ ಬಸ್ ಸ್ಥಗಿತಗೊಂಡಿದ್ದು, ಅದನ್ನು ಆರಂಭಿಸಬೇಕು ಎಂದು ಸದಸ್ಯರು ಆಗ್ರಹಿಸಿದಾಗ ವ್ಯವಸ್ಥೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದರು.
ಸರಕಾರಿ ಕಾರ್ಯಕ್ರಮಗಳಿಗೆ ಗ್ಯಾರಂಟಿ ಸಮಿತಿಯ ವರನ್ನೂ ಆಹ್ವಾನಿಸಿ ಎಂಬ ಬೇಡಿಕೆ ಬಂದಾಗ ಉತ್ತರಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು, ಈ ಬಗ್ಗೆ ಈಗಾಗಲೇ ಜಿಲ್ಲಾ ಸಮಿತಿ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಕೆಯಾಗಿದೆ. ಸರಕಾರದಿಂದ ಸುತ್ತೋಲೆ ಬಂದ ಕೂಡಲೆ ಶಿಷ್ಟಾಚಾರ ಪಾಲಿಸಲಾಗುವುದು ಎಂದರು.
1.14 ಕೋಟಿ ಹಣ ಜಮೆ
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿ ದಂತೆ ಅಕ್ಕಿಯ ಬದಲು ಸುಳ್ಯ ತಾಲೂಕಿಗೆ ಸೆಪ್ಟೆಂಬರ್ ತಿಂಗಳಿಗೆ ಒಟ್ಟಯ 1.14 ಕೋಟಿ ಹಣ ಪಡಿತರದಾರರ ಖಾತೆಗೆ ಜಮೆ ಆಗಿದೆ ಎಂದು ಆಹಾರ ಇಲಾಖೆ ನಿರೀಕ್ಷಕಿ ವಸಂತಿ ತಿಳಿಸಿದರು. ಜ.31ರ ವರೆಗೆ ಪಡಿತರ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಅಗತ್ಯ ಇದ್ದವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
261 ಮಂದಿಗೆ ಯುವನಿಧಿ
ಯುವನಿಧಿ ಯೋಜನೆಯ ಬಗ್ಗೆ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಮಂಜುಷಾ ಮಾಹಿತಿ ನೀಡಿ, ಸುಳ್ಯ ತಾಲೂಕಿನ 261 ಮಂದಿಗೆ ಯುವನಿಧಿ ಪಾವತಿಯಾಗಿದೆ. ಜನವರಿಯಲ್ಲಿ 49 ಅರ್ಜಿ ಸಲ್ಲಿಕೆಯಾಗಿದೆ ಎಂದರು.
ಎರಡು ಸಭೆ ನಡೆಸಿ
ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆ ತಿಂಗಳಿಗೆ ಎರಡು ಬಾರಿ ನಡೆಸಬೇಕು ಎಂದು ಸರಕಾರದಿಂದ ನಿರ್ದೇಶನ ಇದೆ. ಆದರೆ ನಮ್ಮಲ್ಲಿ ಒಂದು ಸಭೆ ಮಾತ್ರ ಮಾಡಲಾಗುತ್ತಿದೆ. ಎರಡು ಸಭೆ ನಡೆಸಿ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ನಡೆಸುವ ಬಗ್ಗೆ ಪ್ರಗತಿ ಪರಿಶೀಲನೆ, ಚರ್ಚೆ ನಡೆಸಬಹುದು ಎಂದು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಸದಸ್ಯ ಭವಾನಿಶಂಕರ್ ತಿಳಿಸಿದರು.
ತಾ.ಪಂ. ವ್ಯವಸ್ಥಾಪಕ ಹರೀಶ್, ವಿವಿಧ ಇಲಾಖೆಗಳ ಆಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಕರೆಂಟ್ ಇರುವ ದಿನ ತಿಳಿಸಿ
ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ವಿಪರೀತವಾಗುತ್ತಿದೆ ಎಂದು ಸದಸ್ಯರು ಮೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ವಾರಕ್ಕೆ ಹಲವು ಬಾರಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಇಲ್ಲ ಎಂಬ ಮಾಹಿತಿ ನೀಡುವ ಬದಲು ಯಾವಾಗ ವಿದ್ಯುತ್ ಇರುತ್ತದೆ ಎಂಬುದನ್ನು ತಿಳಿಯುವ ಸ್ಥಿತಿ ಇಲ್ಲಿದೆ ಎಂದರು. ಸಮಸ್ಯೆ ಪರಿಹರಿಸಲು ಆಗ್ರಹಿಸಿದರು.
Katapadi: ಮುಕ್ಕಾಲು ಎಕರೆಯಲ್ಲಿ 8 ಟನ್ ಸೌತೆ, ಅಂಗಳದಿಂದಲೇ ಮಾರಾಟ!
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
You seem to have an Ad Blocker on.
To continue reading, please turn it off or whitelist Udayavani.