ಬರಡು ನೆಲವಾಗುತ್ತಿದೆ ನದಿಗಳ ಒಡಲು

Team Udayavani, Mar 11, 2019, 6:17 AM IST

11-march-6.jpg

ಸುಳ್ಯ : ಉಭಯ ತಾಲೂಕಿನ ಪ್ರಕೃತಿದತ್ತ ನೀರಿನ ಮೂಲಗಳು ಬತ್ತಿ ಬರಡು ನೆಲವಾಗಿ ಬದಲಾಗುತ್ತಿವೆ. ಹೀಗಾಗಿ ಬೇಸಗೆ ಬಿಸಿ ಆರಂಭದ ಹೊತ್ತಿನಲ್ಲೇ ನೀರಿನ ಅಭಾವದ ಆತಂಕ ಮೂಡಿದೆ.

ಬೇಸಗೆ ಆರಂಭದಲ್ಲೇ ಕೆರೆ, ಬಾವಿ, ಹೊಳೆ, ತೋಡುಗಳು ನೀರಿಲ್ಲದೆ ಬರಿದಾಗಿವೆ. ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ ಹಾಗೂ ಪಯಸ್ವಿನಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದರಿಂದ ಕೃಷಿ ಮತ್ತು ದಿನ ಬಳಕೆಗೆ ನೀರಿನ ಅಭಾವ ಕಾಡುವ ಭೀತಿ ಉಂಟಾಗಿದೆ.

ಉಕ್ಕೇರಿದ್ದ ನದಿ ಬತ್ತಿದೆ!
ಕಳೆದ ಆಗಸ್ಟ್‌, ಸೆಪ್ಟಂಬರ್‌ನಲ್ಲಿ ಸುರಿದ ಮಳೆ, ಪ್ರಾಕೃತಿಕ ವಿಕೋಪದಿಂದ ಉಕ್ಕೇರಿದ್ದ ಕುಮಾರಧಾರಾ, ಪಯಸ್ವಿನಿ ನದಿಗಳಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಕಳೆದ ಮಳೆಗಾಲದಲ್ಲಿ 30 ವರ್ಷಗಳಲ್ಲೇ ಗರಿಷ್ಠ ನೀರಿನ ಹರಿವು ಕಂಡಿದ್ದ ಈ ನದಿಗಳಲ್ಲಿ ಈಗ ಜಲಚರಗಳು ನೀರಿಗಾಗಿ ಹಾಹಾಕಾರ ಪಡುವ ದಿನಗಳು ಸನ್ನಿಹಿತವಾಗಿವೆ.

ಭಾಗಮಂಡಲದಿಂದ ಜೋಡುಪಾಲ ಮೂಲಕ ಸುಳ್ಯ ಪ್ರವೇಶಿಸುವ ಪಯಸ್ವಿನಿ, ಸುಳ್ಯ ತಾಲೂಕಿನ ಮೂಲಕ ಉಪ್ಪಿನಂಗಡಿ ಬೆಸೆಯುವ ಕುಮಾರಧಾರೆ ನದಿಗಳಲ್ಲಿ ನೀರಿನ ಆಳ ಪ್ರದೇಶ ಬತ್ತಿ, ಬಂಡೆಗಳು ಕಾಣುತ್ತಿವೆ. ಈ ಎರಡು ನದಿಗಳಲ್ಲಿ ಹಲವು ಕಿ.ಮೀ. ದೂರದ ತನಕ ಪ್ರಾಕೃತಿಕ ವಿಕೋಪದ ಪರಿಣಾಮ ಗುಡ್ಡದ ಅಪಾರ ಮಣ್ಣು ನದಿ ನೀರಿನೊಂದಿಗೆ ಹರಿದು ಆಳ ಪ್ರದೇಶವನ್ನು ಮುಚ್ಚಿದೆ. ಸುಳ್ಯ ನಗರದಲ್ಲಿ ನಾಗಪಟ್ಟಣ ಬಳಿ ಮರಳು ಕಟ್ಟದಲ್ಲಿ ನೀರು ಸಂಗ್ರಹಿಸಲಾಗಿದ್ದು, ಅದರ ಕೆಳ ಭಾಗವಂತೂ ನೀರಿಲ್ಲದೆ ಬಂಡೆ ಕಾಣುವ ಸ್ಥಿತಿ ಉಂಟಾಗಿದೆ.

ನೇತ್ರಾವತಿಯೂ ಬರಿದು
ಪುತ್ತೂರು ತಾಲೂಕಿನ ಜೀವನದಿ ನೇತ್ರಾವತಿಯಲ್ಲಿ ವಾರ್ಷಿಕ 430 ಟಿಎಂಸಿ ನೀರು ಹರಿಯುತ್ತದೆ. ಸುಮಾರು 12,497 ಕ್ಯುಬಿಕ್‌ ಮೀ. ನೀರು ತುಂಬಿಕೊಂಡು 148.5 ಕಿ.ಮೀ. ಹರಿಯುವ ನೇತ್ರಾವತಿ 4,25,280 ಚದರ ಕಿ.ಮೀ. ಭೂಮಿ ಹಸುರಾಗಿಸುತ್ತದೆ. 

ಹತ್ತು ಲಕ್ಷ ರೈತರಿಗೆ ತನ್ನೊಡಲಿನಿಂದ 464.62 ಟಿಎಂಸಿ ನೀರು ಒಪ್ಪಿಸುವುದು ಲೆಕ್ಕಾಚಾರ. ಜಲ ಸಂಪನ್ಮೂಲ ಇಲಾಖೆ 1994ರಿಂದ 2010ರ ತನಕದ ಸರ್ವೇ ಆಧಾರದಂತೆ ಪ್ರತೀ ವರ್ಷ ಜೂ. 1ರಿಂದ ಅ. 30ರ ವರೆಗೆ ಒಟ್ಟು 221.856 ಟಿಎಂಸಿ (ಅಂದಾಜು 201.7ರಿಂದ 240.6 ಟಿಎಂಸಿ) ನೀರು ಸಮುದ್ರ ಸೇರುತ್ತದೆ. ಆದರೆ ಕಳೆದ 8 ವರ್ಷಗಳಿಂದ ನೇತ್ರಾವತಿ ನದಿಯಲ್ಲಿ ಹರಿದ ನೀರಿನ ಪ್ರಮಾಣ 113.5ರಿಂದ 150.19 ಟಿಎಂಸಿ ಮಾತ್ರ. ಈ ಬಾರಿ ಮಳೆ ನೀರು ಹೆಚ್ಚು ಹರಿದಿದ್ದರೂ ನದಿಯಲ್ಲಿ ನೀರಿಲ್ಲ. ತುಂಬಿದ ಪ್ರಮಾಣಕ್ಕಿಂತ ವೇಗವಾಗಿ ಬತ್ತಿರುವುದಕ್ಕೆ ಇದು ಉದಾಹರಣೆ.

ಟಾಪ್ ನ್ಯೂಸ್

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

6-madikeri-1

Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Rashmika Mandanna gave hint of Pushpa 3

Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

6-madikeri-1

Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.