Sullia: ಬೆಂಕಿ ಆರಿಸುವವರು ಬೇಕಾಗಿದ್ದಾರೆ!; ಸುಳ್ಯ ಅಗ್ನಿ ಶಾಮಕ ಠಾಣೆಯಲ್ಲಿ ಸಿಬಂದಿ ಕೊರತೆ

ಎರಡು ವಾಹನಗಳಿದ್ದರೂ ತುರ್ತು ಸೇವೆಗೆ ಲಭ್ಯವಿರುವುದು ಒಂದು ಮಾತ್ರ

Team Udayavani, Jan 16, 2025, 1:27 PM IST

1

ಸುಳ್ಯ: ಅಗ್ನಿ ಆಕಸ್ಮಿಕಗಳು ಸಂಭವಿಸಿದಾಗ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಸುಳ್ಯದಲ್ಲಿ ಸುಸಜ್ಜಿತ ಅಗ್ನಿಶಾಮಕ ಠಾಣೆಯನ್ನು 2009ರಲ್ಲೇ ಸ್ಥಾಪಿಸಲಾಗಿದೆ.

ಆದರೆ, ಠಾಣೆಯಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ಸಹಿತ 11 ಹುದ್ದೆಗಳು ಖಾಲಿಯಿದ್ದು, ಸಿಬ್ಬಂದಿ ಕೊರತೆಯಿಂದ ತುರ್ತು ಸಂದರ್ಭದಲ್ಲಿ ಸಿಬಂದಿಗಳು ಹರಸಾಹಸ ಪಡಬೇಕಾಗಿದೆ.

24ರಲ್ಲಿ 11 ಹುದ್ದೆ ಖಾಲಿ
2009ರ ವರೆಗೆ ಸಣ್ಣ ಶೆಡ್‌ನ‌ಲ್ಲಿದ್ದ ಠಾಣೆಯನ್ನು ಓಡಬಾಯಿಯ ತೂಗುಸೇತುವೆ ಸನಿಹದಲ್ಲಿ ಸುಸಜ್ಜಿತ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿ ಸ್ಥಳಾಂತರ ಮಾಡಲಾಗಿತ್ತು. ಅಗ್ನಿಶಾಮಕ ಠಾಣೆಗೆ 24 ಹುದ್ದೆಗಳು ಮಂಜೂರಾಗಿದ್ದರೂ ಭರ್ತಿಯಾಗಿದ್ದು 13 ಮಾತ್ರ. 11 ಹುದ್ದೆಗಳು ಖಾಲಿಯಾಗಿದೆ. ಅಗ್ನಿಶಾಮಕ ಠಾಣಾಧಿಕಾರಿ – 1 ಹುದ್ದೆ ಖಾಲಿ, ಅಗ್ನಿಶಾಮಕ ಚಾಲಕ ಹುದ್ದೆಗಳು 5ರಲ್ಲಿ 3 ಖಾಲಿ, ಅಗ್ನಿಶಾಮಕರಲ್ಲಿ 12ರಲ್ಲಿ 7 ಖಾಲಿಯಾಗಿದ್ದು, ಒಟ್ಟು 11 ಹುದ್ದೆಗಳು ಖಾಲಿಯಾಗಿದೆ.

ಠಾಣಾಧಿಕಾರಿ ಹುದ್ದೆಯೇ ಖಾಲಿ
ಸುಳ್ಯದ ಅಗ್ನಿಶಾಮಕ ಠಾಣೆಯಲ್ಲಿ ಪ್ರಮುಖ ಹುದ್ದೆಯೇ ಖಾಲಿಯಾಗಿದೆ. ಅಗ್ನಿ ಶಾಮಕ ಠಾಣಾಧಿಕಾರಿ ಹುದ್ದೆ ಕಳೆದ ಹಲವು ವರ್ಷಗಳಿಂದ ಖಾಲಿಯಾಗಿಯೇ ಉಳಿದಿದೆ.

ಸುಳ್ಯಕ್ಕೆ ತುರ್ತು ಅಗತ್ಯವೇನು
– ಸುಳ್ಯ ತಾಲೂಕು ವ್ಯಾಪ್ತಿ ಗ್ರಾಮೀಣ ಹಾಗೂ ಗುಡ್ಡ-ಗಾಡು, ಅರಣ್ಯ ಪ್ರದೇಶವನ್ನು ಹೊಂದಿಕೊಂಡಿರುವುದರಿಂದ ಇಲ್ಲಿನ ತುರ್ತು ಕಾರ್ಯಾಚರಣೆಗಳಿಗೆ ಅಗ್ನಿ ಶಾಮಕ ಠಾಣೆಗಳಿಗೆ ಎಲ್ಲ ಸೌಲಭ್ಯಗಳು ಸಹಿತ ಸಿಬಂದಿ ಬೇಕಾಗಿದೆ.
– ಸಿಬಂದಿ ಸಮಸ್ಯೆ ಇರುವುದರಿಂದ ಇರುವ ಸಿಬಂದಿ ತ್ರಾಸದಾಯಕವಾಗಿ ಕೆಲಸ ನಿರ್ವಹಿಸಬೇಕಾಗಿದೆ.
– ಬೇಸಗೆ ಆರಂಭಗೊಂಡಿರುವುದರಿಂದ ಆಕಸ್ಮಿಕ ಬೆಂಕಿ ಅವಘಡ ಘಟನೆಗಳು ಸಂಭವಿಸಲು ಆರಂಭಿಸುತ್ತವೆ. ಈ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದವರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ವೇಳೆ ಅವರಿಗೆ ಸಿಬಂದಿ ಬಲ ಅಗತ್ಯವಾಗಿರುತ್ತದೆ.

ವರ್ಷಕ್ಕೆ 68 ಪ್ರಕರಣ ದಾಖಲು
2024ಕ್ಕೆ ಸಂಬಂಧಿಸಿದಂತೆ 68 ಪ್ರಕರಣಗಳು ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ದಾಖಲಾಗಿದೆ. ಸುಮಾರು 21 ರಕ್ಷಣ ಕಾರ್ಯಾಚರಣೆಯನ್ನು ಸುಳ್ಯ ತಾ| ವ್ಯಾಪ್ತಿಯಲ್ಲಿ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಪುತ್ತೂರು ಸಹಿತ ವಿವಿಧ ಭಾಗಗಳಿಗೂ ಕಾರ್ಯಾಚರಣೆಗೆ ಸುಳ್ಯದ ಅಗ್ನಿಶಾಮಕ ದಳದ ತಂಡ ಭಾಗವಹಿಸಿದೆ. ಸುಬ್ರಹ್ಮಣ್ಯ, ಕಡಬ ಭಾಗದ ಕಾರ್ಯಾಚರಣೆಯಲ್ಲೂ ಭಾಗವಹಿಸಲಾಗಿದೆ.

ಕಟ್ಟಡ ಸುಸಜ್ಜಿತ, ಸವಲತ್ತಿಲ್ಲ
ಸುಳ್ಯದ ಅಗ್ನಿಶಾಮಕ ಠಾಣೆ ಸುಸಜ್ಜಿತ ಕಟ್ಟಡ ಹೊಂದಿದೆ. ಠಾಣೆಯಲ್ಲಿ 2 ಅಗ್ನಿಶಾಮಕ ತುರ್ತು ವಾಹನಗಳಿರಬೇಕಾಗಿದ್ದರೂ, ಇಲ್ಲಿ 1 ವಾಹನ ಮಾತ್ರವೇ ಇದೆ. ಇಲ್ಲಿದ್ದ ಇನ್ನೊಂದು ವಾಹನ 15 ವರ್ಷ ಹಳೆಯ ವಾಹನವಾಗಿದ್ದರಿಂದ ಅದನ್ನು ಬಳಸುವಂತಿಲ್ಲ ಎಂಬ ಹಿನ್ನೆಲೆಯಲ್ಲಿ ಇಲಾಖೆ ಹಿಂಪಡೆದಿದ್ದು, ಇದೀಗ ಠಾಣೆ ವ್ಯಾಪ್ತಿಯ ತುರ್ತು ಕಾರ್ಯಾಚರಣೆಗಳ ಸಂದರ್ಭದ ಬಳಕೆಗೆ ಒಂದೇ ವಾಹನ ಇಲ್ಲಿ ಲಭ್ಯವಿದೆ.

ಸುಳ್ಯ ಸೇರಿದಂತೆ ದ.ಕ. ಜಿಲ್ಲೆಯ ಹಲವು ಅಗ್ನಿ ಶಾಮಕ ಠಾಣೆಗಳಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ಹುದ್ದೆ ಖಾಲಿ ಇದೆ. ಸಿಬಂದಿ ನೇಮಕ ವಾಗುವ ನಿರೀಕ್ಷೆ ಇದೆ. ಇರುವ ಸಿಬಂದಿ ಹೊಂದಿಸಿಕೊಂಡು ಕರ್ತವ್ಯ ನಿರ್ವಹಿಸುವ, ಕಾರ್ಯಾಚರಣೆ ನಡೆಸಲಾಗುತ್ತಿದೆ.
– ಭರತ್‌ ಕುಮಾರ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ದ.ಕ.

-ದಯಾನಂದ ಕಲ್ನಾರ್‌

ಟಾಪ್ ನ್ಯೂಸ್

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

Team India: BCCI moves to appoint new coach

Team India: ಹೊಸ ಕೋಚ್‌ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್‌ ನಲ್ಲಿ ಪೀಟರ್ಸನ್

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ

Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ

6-Udupi-Bidar

Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ

Hubli: Vice President Dhankar inaugurated Mount Sumeru at the Varuri Navagraha Theertha site

ವರೂರಿ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಸುಮೇರು ಪರ್ವತ ಉದ್ಘಾಟಿಸಿದ ಉಪರಾಷ್ಟ್ರಪತಿ ಧನಕರ್

Video: ಎಷ್ಟು ಲಂಚ ತಿನ್ನುತ್ತೀಯಾ ತಿನ್ನು; ಅಧಿಕಾರಿಯ ಮೇಲೆ ಹಣ ಎಸೆದು ಆಕ್ರೋಶ ಹೊರಹಾಕಿದ ಜನ

Video: ಎಷ್ಟು ಲಂಚ ತಿನ್ನುತ್ತೀಯಾ ತಿನ್ನು; ಅಧಿಕಾರಿಯ ಮೇಲೆ ಹಣ ಎಸೆದು ಆಕ್ರೋಶ ಹೊರಹಾಕಿದ ಜನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Sullia: ಕಲ್ಲುಮುಟ್ಲು; ಹೂಳೆತ್ತುವ ಕಾರ್ಯ ಆರಂಭ

Puttur; ಕಾರು ಢಿಕ್ಕಿ: ಯುವಕ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Puttur:ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ:”ಬಿ’ ರಿಪೋರ್ಟ್‌ ತಿರಸ್ಕರಿಸಿದ ನ್ಯಾಯಾಲಯ

Puttur:ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ:”ಬಿ’ ರಿಪೋರ್ಟ್‌ ತಿರಸ್ಕರಿಸಿದ ನ್ಯಾಯಾಲಯ

Belthangady: ಹಲವೆಡೆ ಕಾಡಾನೆ ಸಂಚಾರ

Belthangady: ಹಲವೆಡೆ ಕಾಡಾನೆ ಸಂಚಾರ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

Team India: BCCI moves to appoint new coach

Team India: ಹೊಸ ಕೋಚ್‌ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್‌ ನಲ್ಲಿ ಪೀಟರ್ಸನ್

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ

ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ

Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ

Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.