Sullia: ಕಲ್ಲುಮುಟ್ಲು; ಹೂಳೆತ್ತುವ ಕಾರ್ಯ ಆರಂಭ
8 ಕಾರ್ಮಿಕರಿಂದ ಕೆಲಸ | ನಗರದಲ್ಲಿ ನೀರು ವ್ಯತ್ಯಯ
Team Udayavani, Jan 16, 2025, 1:31 PM IST
ಸುಳ್ಯ: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಕಲ್ಲುಮುಟ್ಲು ರೇಚಕ ಸ್ಥಾವರದ ಹೂಳೆತ್ತುವ ಕಾಮಗಾರಿ ಬುಧವಾರ ಆರಂಭವಾಗಿದ್ದು ಎಂಟು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.
ಸುಳ್ಯ ನಗರಕ್ಕೆ ನೀರು ಸರಬರಾಜಿಗೆ ನಾಗಪಟ್ಟಣದಲ್ಲಿ ಪಯಸ್ವಿನಿ ನದಿಗೆ ಡ್ಯಾಂ ನಿರ್ಮಿಸಲಾಗಿದ್ದು ಕಳೆದ ವರ್ಷ ಮೊದಲ ಬಾರಿಗೆ ಗೇಟ್ ಅಳವಡಿಸಿ ನೀರು ಸಂಗ್ರಹಿಸಿ ಬೇಸಗೆಯಲ್ಲಿ ನಗರಕ್ಕೆ ನೀರು ಒದಗಿಸಲಾಗಿತ್ತು.
ಕಳೆದ ವರ್ಷ ಬೇಸಗೆ ಆರಂಭಕ್ಕೆ ಮೊದಲೇ ಡ್ಯಾಂಗೆ ಗೇಟ್ ಅಳವಡಿಸಿದ್ದರಿಂದ ಸ್ಥಾವರದ ಬಳಿ ಹೂಳೆತ್ತುವ ಕೆಲಸ ನಡೆದಿರಲಿಲ್ಲ.
ಕಲ್ಲುಮುಟ್ಲು ರೇಚಕ ಸ್ಥಾವರ 40 ಅಡಿ ಆಳವಿದ್ದು, ಇದೀಗ ಇಲ್ಲಿ ಹೂಳು ತುಂಬಿರುವುದರಿಂದ ತೆರವಿಗೆ ನ.ಪಂ. ಯೋಜನೆ ರೂಪಿಸಿದ್ದು, ಕಾರ್ಮಿಕರು ಹೂಳೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ರೇಚಕ ಸ್ಥಾವರದಲ್ಲಿ ಬಕೆಟ್‌ನಲ್ಲಿ ಹೂಳು ತುಂಬಿಸಿ, ಅದನ್ನು ಹಗ್ಗದ ಮೂಲಕ ಮೇಲೆತ್ತಿ ತೆರವು ಕಾರ್ಯ ನಡೆಸಲಾಗುತ್ತಿದೆ. ಸ್ಥಾವರದೊಳಗೆ ಇಬ್ಬರು, ಮೇಲ್ಭಾಗದಲ್ಲಿ ಮೂವರು, ಹಗ್ಗ ಎಳೆಯುವ ಕಾರ್ಯದಲ್ಲಿ ಮತ್ತೆ ಮೂವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಬುಧವಾರ ಆರಂಭಗೊಂಡಿರುವ ಹೂಳೆತ್ತುವ ಕಾರ್ಯ ಗುರುವಾರವೂ ನಡೆಯಲಿದ್ದು ಗುರುವಾರ ಹೂಳೆತ್ತುವ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರೇಚಕ ಸ್ಥಾವರದ ಸಂಪರ್ಕದ ಹಾದಿಯಲ್ಲಿ ಸೇರಿರುವ ಕೆಸರು ತೆರವು ಕಾರ್ಯವೂ ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ.
ನೀರು ಸರಬರಾಜಿನಲ್ಲಿ ವ್ಯತ್ಯಯ
ನಗರಕ್ಕೆ ನೀರು ಸರಬರಾಜು ಮಾಡುವ ಕಲ್ಲುಮುಟ್ಲು ರೇಚಕ ಸ್ಥಾವರದ ಹೂಳೆತ್ತುವ ಕೆಲಸ ನಡೆಯುವ ಹಿನ್ನೆಲೆಯಲ್ಲಿ ಗುರುವಾರವೂ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ನ.ಪಂ. ತಿಳಿಸಿದೆ. ಬುಧವಾರ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Just Married: ಮಚ್ಚನಿಗೆ ಕಿಚ್ಚನ ಸಾಥ್; ʼಜಸ್ಟ್ ಮ್ಯಾರೀಡ್ʼನಿಂದ ಹಾಡು ಬಂತು
800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್ ಅಲಿ ಆಸ್ತಿ ಎಷ್ಟು?
Team India: ಹೊಸ ಕೋಚ್ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್ ನಲ್ಲಿ ಪೀಟರ್ಸನ್
Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!
ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.