Sullia: ಬಸ್ ತಂಗುದಾಣ ನಿರ್ವಹಣೆಗೆ ನಿರಾಸಕ್ತಿ
ಸುಳ್ಯ ತಾಲೂಕಿನ ಹಲವು ತಂಗುದಾಣಗಳ ಸುತ್ತ ಗಿಡಗಂಟಿ, ಪೊದೆಗಳದೇ ಅಬ್ಬರ; ಸ್ವತ್ಛತೆ ಇಲ್ಲ, ಶಿಥಿಲ ಕಟ್ಟಡಗಳ ರಿಪೇರಿಯೂ ಇಲ್ಲ, ವ್ಯವಸ್ಥೆಗಳಂತೂ ಇಲ್ಲವೇ ಇಲ್ಲ
Team Udayavani, Nov 29, 2024, 7:44 PM IST
ಸುಳ್ಯ: ಬಸ್ ತಂಗುದಾಣಗಳು ಒಂದು ಊರಿನ ಅಸ್ಮಿತೆ. ಪ್ರಯಾಣಿ ಕರನ್ನು ಮಳೆ, ಬಿಸಿಲಿನಿಂದ ರಕ್ಷಿಸುವ ತಾಣಗಳು. ಬೀದಿ ಬದಿಯಲ್ಲಿ ಸುರಕ್ಷತೆಯ ಭಾವ ನೀಡುವ ಜಾಗಗಳು. ಆದರೆ ದುರಂತವೆಂದರೆ ಅವುಗಳ ನಿರ್ವಹಣೆ ಸರಿ ಇಲ್ಲದೆ ಅವೇ ಅನಾಥವಾಗಿವೆ. ಸಾರ್ವ ಜನಿಕರಿಗೆ ಅಶ್ರಯ ನೀಡಬೇಕಾದ ಇವು ಪೊದೆ, ಗಿಡಗಂಟಿಗಳಿಂದ ತುಂಬಿವೆ.
ಸುಳ್ಯ ತಾಲೂಕಿನಲ್ಲೂ ಅದೆಷ್ಟೋ ಬಸ್ ತಂಗುದಾಣಗಳು ನಿರ್ವಹಣೆ ಇಲ್ಲದೇ, ಅಭಿವೃದ್ಧಿ ಕಾಣದೆ ಸಾರ್ವಜನಿಕರ ಪ್ರಯೋಜ ನದಿಂದ ದೂರ ಉಳಿದಿದೆ. ಹಲವೆಡೆ ಬಸ್ ತಂಗುದಾಣಗಳ ಕಟ್ಟಡಗಳು ಶಿಥಿಲಗೊಂಡಿವೆ, ಸ್ವತ್ಛತೆಯೂ ಇಲ್ಲ.
ದೇರಂಪಾಲು ನಿಲ್ದಾಣ: ನಿಂತಿಕಲ್ಲು- ಬೆಳ್ಳಾರೆ ಸಂಪರ್ಕ ರಸ್ತೆಯ ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಂಪಾಲು ಬಸ್ ತಂಗುದಾಣದ ಒಂದು ಬದಿಯ ಮೇಲ್ಛಾವಣಿ ಸಿಮೆಂಟ್ ಸೀಟ್ ಮುರಿದು ಶಿಥಿಲಾವಸ್ಥೆಯಲ್ಲಿದ್ದು, ಬೀಳುವಂತಿದೆ. ಇದೇ ಬಸ್ ತಂಗುದಾಣದಲ್ಲಿ ಮದ್ಯದ ಬಾಟಲಿಗಳು ಸಹಿತ ಕಸಗಳು ಬಿದ್ದುಕೊಂಡು ಬಸ್ ತಂಗುದಾಣದ ಅಂದಗೆಡಿಸಿದೆ.
ಮರ್ಕಂಜ ಕ್ರಾಸ್ ನಿಲ್ದಾಣ: ಸುಬ್ರಹ್ಮಣ್ಯ- ಜಾಲ್ಸೂರು ಹೆದ್ದಾರಿಯ ಎಲಿಮಲೆ ಪೇಟೆಯ ಮರ್ಕಂಜ ಕ್ರಾಸ್ ಬಳಿಯ ಬಸ್ ತಂಗುದಾಣದ ಮೇಲ್ಛಾವಣಿಯ ಹಂಚು ಕೆಲವೆಡೆ ಹೊಡೆದಿದೆ. ತಂಗುದಾಣದಲ್ಲಿ ಕಸದ ರಾಶಿ ಬಿದ್ದಿಕೊಂಡಿದೆ. ಬಸ್ ತಂಗುದಾಣ ಪ್ರದೇಶದಲ್ಲೇ ಕಾಡು-ಹುಲ್ಲು ಬೆಳೆದು ನಿರ್ವಹಣೆ ಇಲ್ಲದಂತೆ ಕಾಣುತ್ತಿದೆ.
ಗುತ್ತಿಗಾರು ಸಮೀಪದ ಬಾಕಿಲ: ಸುಬ್ರಹ್ಮಣ್ಯ-ಜಾಲ್ಸೂರು ರಸ್ತೆಯ ಗುತ್ತಿಗಾರು ಪೇಟೆಯ ಸಮೀಪದ ಬಾಕಿಲ ಎಂಬಲ್ಲಿರುವ ತಂಗುದಾಣದಲ್ಲಿ ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ, ತಂಗುದಾಣದಲ್ಲಿ ಹುಲ್ಲು ಬೆಳೆದು ಅದರೊಳಗೆ ಕಾಲಿಡದ ಸ್ಥಿತಿಯಲ್ಲಿದೆ.
ಮೆಟ್ಟಿನಡ್ಕ ಕ್ರಾಸ್: ಸುಬ್ರಹ್ಮಣ್ಯ- ಜಾಲ್ಸೂರು ರಸ್ತೆಯ ಮೆಟ್ಟಿನಡ್ಕ ಕ್ರಾಸ್‌ನಲ್ಲಿ ಎಲ್ಲೆಂದರಲ್ಲಿ ಹುಲ್ಲು ಬೆಳೆದು ತಂಗುದಾಣಕ್ಕೆ ತೆರಳದ ಸ್ಥಿತಿ ಇದೆ. ಮಳೆಗಾಲದಲ್ಲಿ ಕಟ್ಟಡದ ಹಿಂಬದಿಯ ದರೆ ಕುಸಿದು, ಇನ್ನಷ್ಟು ಕುಸಿಯುವ ಭೀತಿ ಇದೆ. ಇದೇ ರಸ್ತೆಯ ನಡುಗಲ್ಲಿನ ಉತ್ರಂಬೆ ಎಂಬಲ್ಲಿನ ಬಸ್ ತಂಗುದಾಣದ ಬಳಿಯೂ ಹುಲ್ಲು-ಕಾಡು ಬೆಳೆದಿದ್ದು ತೆರವಾಗಿಲ್ಲ.
ಮರಕತ ಕ್ರಾಸ್: ಸುಬ್ರಹ್ಮಣ್ಯ- ಜಾಲ್ಸೂರು ರಸ್ತೆಯ ಮರಕತ ಕ್ರಾಸ್ ಬಳಿಯ ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳುವ ಒಂದು ಬದಿಯ ಸ್ಲ್ಯಾಬ್ ಮುರಿದು ಬಿದ್ದಿದ್ದು, ದುರಸ್ತಿ ಆಗಬೇಕಾಗಿದೆ.
-ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guttigar: ಯುವಕನಿಗೆ ಜೀವ ಬೆದರಿಕೆ; ದೂರು ದಾಖಲು
Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ
Bantwal: ಸಾಮಾನ್ಯ ಸೈಕಲನ್ನೇ ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಬಾಲಕ!
Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!
ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ
Karnataka: “ಆರೋಗ್ಯ ಸಂಜೀವಿನಿ’ ತ್ವರಿತ ಅನುಷ್ಠಾನಕ್ಕೆ ಸಿಎಸ್‌ಗೆ ಮನವಿ
CM Siddaramaiah: ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ
Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ
Siddapura: ಬೈಕಿಗೆ ಕಾರು ಡಿಕ್ಕಿ; ಬೈಕ್ ಸವಾರ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.