Sullia: ಹುಲಿಗಳಿಗೆ ಸಡ್ಡು ಹೊಡೆವ ಸಿಂಹಗಳು!; ನವರಾತ್ರಿ ಆರಂಭದಿಂದ ಕೊನೆವರೆಗೆ ಮಾತ್ರ ಸೇವೆ
ಗ್ರಾಮೀಣ ಭಾಗದಲ್ಲಿ ಹುಲಿಗಳಿಗಿಂತಲೂ ಶಾರ್ದೂಲ ಕುಣಿತದ್ದೇ ಪಾರಮ್ಯ; ಹೆಚ್ಚುತ್ತಿವೆ ತಂಡಗಳು
Team Udayavani, Oct 7, 2024, 12:49 PM IST
ಸುಳ್ಯ: ನವರಾತ್ರಿ ಸಂದರ್ಭದಲ್ಲಿ ಕರಾವಳಿ, ತುಳುನಾಡು ಭಾಗದಲ್ಲಿ ಹುಲಿ ವೇಷ ಕುಣಿತವೇ ಎಲ್ಲರ ಗಮನ ಸೆಳೆಯುತ್ತದೆ. ಆದರೆ ಸುಳ್ಯ, ಕಡಬ ಭಾಗದಲ್ಲಿ ಹುಲಿಗಳಿಗಿಂತ ಸಿಂಹಗಳ ಅಬ್ಬರವೇ ಹೆಚ್ಚು!
ದೇವಿಯನ್ನು ಸಿಂಹವಾಸಿನಿ ಎಂದೇ ಕರೆಯುತ್ತೇವೆ. ನವರಾತ್ರಿ ವೇಳೆ ಸಿಂಹಗಳು ಸಂಭ್ರಮಿಸುತ್ತವೆ ಎಂಬ ಕಾರಣಕ್ಕೆ ಶಾರ್ದೂಲ ಕುಣಿತ ಸೇವೆ ಹಿಂದಿನಿಂದಲೂ ಪ್ರಸಿದ್ಧ. ಇದು ಈಗಲೂ ಮುಂದುವರಿದಿದೆ. ಅಚ್ಚರಿ ಎಂದರೆ ಹುಲಿ ಕುಣಿತ ಎಲ್ಲೆಡೆ ವ್ಯಾಪಕತೆಯನ್ನು ಪಡೆಯುತ್ತಿರುವ ನಡುವೆ ಸಿಂಹ ನೃತ್ಯದ ತಂಡಗಳೂ ಹೆಚ್ಚುತ್ತಿವೆ.
ಸಿಂಹದ ಬಣ್ಣದ ಅಂಗಿ ಮತ್ತು ಪ್ಯಾಂಟ್ ಧರಿಸಿ, ಬಾಲ ಸಿಕ್ಕಿಸಿ, ತಲೆಗೆ ಸಿಂಹದಂತಹ ಮುಖವಾಡ ಧರಿಸಿ ಕುಣಿಯುವ ಶಾರ್ದೂಲ ನೃತ್ಯ ಹಿಂದೆ ದೇವರ ಸೇವೆಯ ಅವಿಭಾಜ್ಯ ಅಂಗವಾಗಿತ್ತು. ಶಾರ್ದೂಲ ಟೀಮ್‌ಗಳೇ ಇದ್ದವು. ಸಿಂಹದೊಂದಿಗೆ ಕೈಯಲ್ಲಿ ಕೋವಿ ಹಿಡಿದ ಬೇಟೆಗಾರ. ಸಿಂಹ ಮತ್ತು ಬೇಟೆಗಾರನ ಜುಗಲ್ಬಂದಿ ಭಾರಿ ಮನರಂಜನೆ ನೀಡುತ್ತದೆ. ಕೆಲವು ಕಡೆಗಳಲ್ಲಿ ಬೇಟೆಗಾರನ ಬದಲು ಜೋಕರ್ ವೇಷ ಧರಿಸಿದ ವ್ಯಕ್ತಿಯನ್ನೂ ಕಾಣಬಹುದಾಗಿದೆ.
ಇತ್ತೀಚೆಗೆ ಹಳದಿ ಸಿಂಹದ ಜತೆಗೆ ಬಿಳಿ ಸಿಂಹ, ಕಪ್ಪು ಸಿಂಹಗಳೂ ಇವೆ. ಕೆಲವರು ಇದೇ ಮಾದರಿಯಲ್ಲಿ ಕರಡಿ ವೇಷ ಹಾಕುತ್ತಾರೆ. ಗ್ರಾಮೀಣ ಭಾಗದಲ್ಲಿ ದಿರಸಿನ ಹುಲಿಗಳೂ ಇವೆ. ಇದಕ್ಕೆ ಬೊಂಬೆ ಮತ್ತು ಮತ್ತಿತರ ವೇಷ ಧರಿಸಿ ಸಾಥ್ ಸಿಗುತ್ತದೆ. ಕುಣಿತಕ್ಕೆ ತಾಸೆ, ಡೋಲು ನುಡಿಸುವವರು ಹಿಮ್ಮೇಳದಲ್ಲಿರುತ್ತಾರೆ.
ತಂಡಗಳ ಸಂಖ್ಯೆ ಹೆಚ್ಚಳ
- ಕೆಲವು ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ನವರಾತ್ರಿ ಸಂದರ್ಭದಲ್ಲಿ ಊರಿನಲ್ಲಿ ಒಂದು ಶಾರ್ದೂಲ ತಿರುಗಾಡುತ್ತಿದ್ದರೆ ಈಗ 4-5 ಶಾರ್ದೂಲ ತಂಡಗಳು ಭೇಟಿ ನೀಡುತ್ತಿದೆ. ಪೇಟೆಗಳಲ್ಲಿ ಸುಮಾರು 20-30 ತಂಡಗಳನ್ನು ಕಾಣಬಹುದಾಗಿದೆ.
- ಶಾರ್ದೂಲಕ್ಕೆ ಹುಲಿ ವೇಷಕ್ಕಿಂತ ಕಡಿಮೆ ಶ್ರಮ, ಕಡಿಮೆ ಖರ್ಚು. ತಂಡದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನ ಸಾಕು.
- ಯಕ್ಷಗಾನದಲ್ಲಿ ಸಿಂಹ ಮತ್ತು ಮಹಿಷಾಸುರನ ನಡುವೆ ಯುದ್ಧ ನಡೆಯುವ ಮಾದರಿಯಲ್ಲಿ ಕೆಲವು ತಂಡಗಳು ಪ್ರದರ್ಶನ ನೀಡುವುದು ಉಂಟು.
- ಇತ್ತೀಚೆಗೆ ಹುಲಿ ಕುಣಿತದ ಹಾಗೆ ಸಿಂಹಗಳೂ ಕಸರತ್ತು ಪ್ರದರ್ಶನಕ್ಕೆ ಆರಂಭಿಸಿವೆ.
ಕೆಲವು ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಸಿಂಹ ವೇಷ ಧರಿಸಿ ಕುಣಿಯುವ ತಂಡಗಳ ಸಂಖ್ಯೆ ಹೆಚ್ಚುತ್ತಿದೆ. ಈ ಮೊದಲು ಒಂದೆರಡು ತಂಡಗಳು ಮಾತ್ರವೇ ಮನೆ ಮನೆಗೆ ಭೇಟಿ ನೀಡಿ ಕುಣಿಯುತ್ತಿದ್ದರೆ ಇಂದು ತಂಡಗಳ ಸಂಖೆಯ 10-20ಕ್ಕೂ ಅಧಿಕ ಏರಿಕೆಗೊಂಡಿದೆ. ನವರಾತ್ರಿ ಸಂದರ್ಭದಲ್ಲಿ ಸಿಂಹ ವೇಷ ಧರಿಸಿ ಕುಣಿಯುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
-ಎ.ಕೇಪು ಅಜಿಲ, ಸುಳ್ಯ, ವಿದ್ವಾಂಸರು, ಅರೆಭಾಷೆ-ತುಳು ಸಾಹಿತಿ, ಜಾನಪದ ಕಲಾವಿದರು, ದೆ„ವ ನರ್ತಕರು ಸುಳ್ಯ
ಶಾರ್ದೂಲ ನವರಾತ್ರಿಗೆ ಸೀಮಿತ
ಹುಲಿ ವೇಷವನ್ನು ನವರಾತ್ರಿ, ಕೃಷ್ಣ ಜನ್ಮಾಷ್ಟಮಿ ಸೇರಿ ಹಲವು ಸಂದರ್ಭಗಳಲ್ಲಿ ಕಾಣಬಹುದು. ಆದರೆ, ಶಾರ್ದೂಲ ವೇಷ ನವರಾತ್ರಿಯ ಒಂಬತ್ತು ದಿನಗಳು ಮಾತ್ರ. ನವರಾತ್ರಿಯ ಮೊದಲ ದಿನ ಶಾರ್ದೂಲ ವೇಷ ತಂಡ ಕುಣಿತ ಆರಂಭಿಸಿದರೆ, 9ನೇ ದಿನ ದೇವಿ ಕ್ಷೇತ್ರದಲ್ಲಿ ಸೇವೆ ನೀಡುವಲ್ಲಿಗೆ ಕುಣಿತ ಆ ವರ್ಷಕ್ಕೆ ಅಂತ್ಯವಾಗುತ್ತದೆ. ಇದರಲ್ಲೂ ಹರಕೆ ಸಮರ್ಪಿಸಲು ವೇಷ ಧರಿಸಿ ಕುಣಿಯುವುದು ಇದೆ.
-ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.