Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್ ಟ್ರೀಟ್‌ಮೆಂಟ್!
ಮಂಗಗಳ ಹಾವಳಿಗೆ ತಾಂತ್ರಿಕ ಉಪಾಯ ಹುಡುಕಿದ ಕಾನೂನು ಪದವೀಧರ ಕೃಷಿಕ
Team Udayavani, Nov 29, 2024, 7:48 PM IST
ಸುಳ್ಯ: ಸದಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಕೃಷಿಕರದ್ದು. ಕಾಡು ಪ್ರಾಣಿಗಳು ಅದರಲ್ಲೂ ಕೋತಿಗಳ ಕಾಟ ಈಗ ಎಲ್ಲ ಕಡೆ ಜೋರಾಗಿದೆ. ಸುಳ್ಯದ ಕೃಷಿಕರೊಬ್ಬರು ಮಂಗಗಳ ಉಪಟಳ ತಡೆಗೆ ಶಾಕ್ ಟ್ರೀಟ್ಮೆಂಟ್ ಹೊಸ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲಿನ ಕೃಷಿಕ ಶ್ರೀಹರಿ ಅವರು ಎಳನೀರು, ತೆಂಗಿನ ಕಾಯಿಯನ್ನು ಸಂಪೂರ್ಣ ಹಾಳು ಮಾಡುತ್ತಿದ್ದ ಮಂಗ ಗಳಿಗೆ ವಿದ್ಯುತ್ ಶಾಕ್ ನೀಡುವ ತಂತ್ರ ಉಪಯೋಗಿಸಿದ್ದಾರೆ. ಫಸಲು ತುಂಬಿದ ತೆಂಗಿನ ಗೊನೆಯ ಮುಂಭಾಗದ ಮಡಲಿನ ಮೇಲೆ ಶಾಕಿಂಗ್ ಪ್ಯಾಡ್ ಅಳವಡಿಸಿ ಅದಕ್ಕೆ ಸೋಲಾರ್ ಬ್ಯಾಟರಿಯ ಮೂಲಕ ವಿದ್ಯುತ್ ಹಾಯಿಸಿ ಮಂಗಗಳಿಗೆ ಶಾಕ್ ಕೊಟ್ಟು ಓಡಿಸುವುದು ಈ ಪ್ರಯೋಗದ ಹಿಂದಿರುವ ಸೂತ್ರ.
ಬಿಎಸ್ಸಿ ಜತೆಗೆ ಕಾನೂನು ಪದವಿ ಯನ್ನೂ ಪಡೆದಿರುವ ಶ್ರೀಹರಿ ಅವರಿಗೆ ತಂತ್ರಜ್ಞಾನದಲ್ಲಿ ಆಸಕ್ತಿ. ಅನಿವಾರ್ಯವಾಗಿ ಕೃಷಿಯನ್ನೇ ಅವಲಂಬಿಸಿರುವ ಅವರು ಕಾಲೇಜಿನಲ್ಲಿ ತಯಾರಿಸುತ್ತಿದ್ದ ವಿಜ್ಞಾನ ಮಾಡೆಲ್‌ಗಳನ್ನು ಬಳಸಿ ಕೃಷಿಯಲ್ಲಿನ ಕೆಲವು ಸಮಸ್ಯೆಗಳ ಪರಿಹಾರ ಹುಡುಕುತ್ತಿದ್ದಾರೆ.
ಪತ್ನಿ ಹಾಗೂ ಓರ್ವ ಪುತ್ರನೊಂದಿಗೆ ವಾಸಿಸುತ್ತಿರುವ ಶ್ರೀಹರಿ ಅವರು ತಮ್ಮ ಜಾಗಕ್ಕೆ ಸೋಲಾರ್ ಬೇಲಿಯನ್ನೂ ಸ್ವತಃ ತಾವೇ ಅಳವಡಿಸಿದ್ದಾರೆ. ಇವರು ಮನೆಯ ವಯರಿಂಗ್, ಸ್ಲ್ಯಾಬ್‌ಗಳ ಕೆಲಸಗಳಲ್ಲೂ ಪರಿಣಿತರು.
ಏನಿದು ಮಂಕಿ ಶಾಕಿಂಗ್ ಪ್ಯಾಡ್?
40 ವ್ಯಾಟ್‌ನ ಸೋಲಾರ್ ಪ್ಯಾನಲ್, 12 ಆ್ಯಮ್ಸ್‌ಗಿಂತ ಅ ಧಿಕದ 12 ವೋಲ್ಟ್ನ ಬ್ಯಾಟರಿ, ಫೈಬರ್ ಹಾಗೂ ಅಲ್ಯುಮಿನಿಯಮ್ ಹೊದಿಕೆಯ ಪ್ಯಾನಲ್ ಹಾಗೂ 12 ಗೇಜ್‌ನ ತುಸು ಗಟ್ಟಿ ಸಾಮರ್ಥ್ಯದ ಸರಿಗೆ ಬಳಸಿ ಈ ಉಪಕರಣ ತಯಾರಿಸಿದ್ದಾರೆ. ಅದಕ್ಕೆ ಅವರಿಟ್ಟ ಹೆಸರು ಮಂಕಿ ಶಾಕಿಂಗ್ ಪ್ಯಾಡ್.
ಬಿಯರ್ ಟಿನ್‌ನ್ನು ಕತ್ತರಿಸಿ ಅದನ್ನು ಫೈಬರ್ ಶೀಟ್‌ನ ಮೇಲೆ ಹೊದಿಸಿ ಪ್ಯಾಡ್ ರಚಿಸಿದ್ದಾರೆ. ಫೈಬರ್ ಶೀಟ್‌ನ ಮೇಲೆ ಅಲ್ಯುಮಿನಿಯಮ್ ಹೊದಿಕೆಯನ್ನು ಹಾಸಿ ಅದಕ್ಕೆ ಸೋಲಾರ್ ಎನರ್ಜೈಸರ್ ಬಾಕ್ಸ್‌ನಿಂದ ಸಂಗ್ರಹಿಸಲಾಗುವ 1,200 ವೋಲ್ಟ್ ಪಲ್ಸ್ ಶಾಕ್‌ನ್ನು ತಂತಿಯ ಮೂಲಕ ಪ್ರವಹಿಸುವಂತೆ ಮಾಡಿದ್ದಾರೆ.
ಸಾಮಾನ್ಯವಾಗಿ ಮಂಗಗಳು ಸೀಯಾಳದ ಗೊನೆಗೆ ಬಾಯಿರಿಸಬೇಕಾದರೆ ಗೊನೆಯ ಮುಂಭಾಗದ ಮಡಲಿನ ಮೇಲೆಯೇ ಕುಳಿತುಕೊಳ್ಳುತ್ತವೆ. ಅದಕ್ಕಾಗಿ ಈ ಶಾಕಿಂಗ್ ಪ್ಯಾಡ್‌ನ್ನು ಗೊನೆಯ ಮುಂಭಾಗದ ಮಡಲಿಗೆ ಕಟ್ಟಲಾಗುತ್ತದೆ. ಪ್ರತೀ ಸೆಕೆಂಡ್‌ಗೊಮ್ಮೆ ಸೋಲಾರ್ ಎನರ್ಜೈಸರ್ ಬಾಕ್ಸ್‌ನಿಂದ ಶಾಕಿಂಗ್ ಪ್ಯಾಡ್‌ಗೆ ವಿದ್ಯುತ್ ಪ್ರವಹಿಸುವಂತೆ ಮಾಡಲಾಗುತ್ತದೆ. ಮಂಗಗಳು ಎಳನೀರು ಕುಡಿಯಲು ಮರವೇರಿ ಮಡಲಿನ ಮೇಲೆ ಕುಳಿತಾಗ ಅದಕ್ಕೆ ಶಾಕ್ ತಗಲುತ್ತದೆ. ಶಾಕ್‌ಗೆ ಒಳಗಾದ ಮಂಗಗಳು ಅಲ್ಲಿಂದ ಕಾಲು ಕೀಳುತ್ತವೆ. ಕಡಿಮೆ ತೀವ್ರತೆ ಇರುವುದರಿಂದ ಅಪಾಯವೇನೂ ಆಗುವುದಿಲ್ಲ. ಪ್ರತೀ ಗೊನೆಗೆ ಎದುರಾಗಿ ಒಂದೊಂದು ಪ್ಯಾಡ್ ಕಟ್ಟಬೇಕಾಗುತ್ತದೆ.
ಹಿಂದೆಲ್ಲ ತೋಟದಲ್ಲಿ ಮಂಗಗಳು ತಿಂದೆಸೆದ ಎಳನೀರಿನ ಸಿಪ್ಪೆಗಳೇ ಕಾಣಸಿಗು ತ್ತಿದ್ದವು. ಈ ಪ್ರಯೋಗದ ಬಳಿಕ ಹೊಸ ಗೊನೆಗಳು ಗೋಚರಿಸು ತ್ತಿವೆ. ಉಪಕರಣ ಅಳವಡಿಕೆಯಾ ಗದ ತೆಂಗಿನ ಮರಗಳಿಗೆ ಈಗಲೂ ಮಂಗಗಳ ಉಪಟಳ ತಪ್ಪಿಲ್ಲ. ಆರಂಭದಲ್ಲಿ ಬ್ಯಾಟರಿ, ಸೋಲಾರ್ ಉಪಕರಣ, ತಂತಿ ಹಾಗೂ ಇತರ ಸಾಧನಗಳಿಗಾಗಿ ತುಸು ಖರ್ಚಾಗಬಹುದು. ಫಸಲು ಉಳಿದರೆ ವ್ಯಯಿಸಿದ ಹಣ ಜುಜುಬಿ ಅನಿಸುತ್ತದೆ. ಬಾಳೆ ಕೃಷಿಗೂ ಇದನ್ನು ಅಳವಡಿಸುವ ಯೋಚನೆ ಇದೆ.
-ಶ್ರೀಹರಿ ಎಂ.ಬಿ. ಬೊಳುಗಲ್ಲು, ಕೃಷಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guttigar: ಯುವಕನಿಗೆ ಜೀವ ಬೆದರಿಕೆ; ದೂರು ದಾಖಲು
Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ
Bantwal: ಸಾಮಾನ್ಯ ಸೈಕಲನ್ನೇ ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಬಾಲಕ!
Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!
ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.