Sullia: ಬಣ್ಣದ ಮಾಲಿಂಗರ ಮಹಿರಾವಣನ ಯಕ್ಷ ಪ್ರತಿಮೆ ಅನಾವರಣ
Team Udayavani, Oct 11, 2024, 4:02 PM IST
ಸುಳ್ಯ: ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಯಕ್ಷದ್ರೋಣ ಬಣ್ಣದ ಮಾಲಿಂಗ ಅವರ 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆ ಉದ್ಘಾಟನೆ, ವನಜ ರಂಗಮನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಿತು.
ಆಳ್ವಾಸ್ ಅಧ್ಯಕ್ಷ ಡಾ| ಮೋಹನ್ ಆಳ್ವ ಪ್ರತಿಮೆ ಅನಾವರಣ ಮಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಡಾ| ಶಿವರಾಮ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ರೂವಾರಿ ಡಾ| ಜೀವನ್ ರಾಮ್ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಮನೆ ಸದಸ್ಯೆ ಡಾ| ವಿದ್ಯಾಶಾರದೆ ವಂದಿಸಿದರು. ಅಚ್ಯುತ್ತ ಅಟ್ಲುರೂ ನಿರೂಪಿಸಿದರು.
ವನಜ ರಂಗಮನೆ ಪ್ರಶಸ್ತಿ
ವನಜಾಕ್ಷಿ ಜಯರಾಮ ನೆನಪಿನಲ್ಲಿ ಬಣ್ಣದ ಮಾಂತ್ರಿಕ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ವನಜ ರಂಗಮನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದ.ಕ. ಮಣ್ಣಿನಲ್ಲಿ ಕಲೆಯ ಸಾಮ್ರಾಜ್ಯ
ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಮಾತನಾಡಿ, ಈ ಭೂಮಿ ಯಕ್ಷರ ನಾಡು, ಯಕ್ಷ ಗಂಧರ್ವರ ನಾಡು. ದಕ್ಷಿಣ ಕನ್ನಡದ ಮಣ್ಣಿನಲ್ಲಿ ಕಲೆಯ ಸಾಮ್ರಾಜ್ಯವಿದೆ. ಅದು ಒಬ್ಬೊಬ್ಬರ ಮನಸ್ಸು, ದೇಹ, ಒಬ್ಬೊಬ್ಬರೊಳಗೆ ಹೇಗೆ ಮೇಲೆ ಬಂದು ನಿಂತಿದೆ ಎಂಬುದು ಇತಿಹಾಸವನ್ನು ಗಮನಿಸಿದಾಗ ತಿಳಿಯುತ್ತದೆ. ಸಹೃದಯ ಪ್ರೇಕ್ಷಕರಿದ್ದಲ್ಲಿ ಕಲೆ ಎತ್ತರಕ್ಕೆ ಬೆಳೆಯುತ್ತದೆ ಎಂದರು.
ಇದನ್ನೂ ಓದಿ: Rathan Tata: 10 ವರ್ಷ ಹಿಂದೆ ಪುತ್ತಿಗೆ ಮೂಲ ಮಠಕ್ಕೆ ಆಗಮಿಸಿದ್ದ ರತನ್ ಟಾಟಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.