ಬೀದಿ ದೀಪಗಳು ಉರಿಯುತ್ತಿಲ್ಲ: ಸದಸ್ಯರ ಅಳಲು
Team Udayavani, Oct 5, 2018, 12:19 PM IST
ಸುಳ್ಯ : ನ.ಪಂ.ಗೆ ಯಾವುದೇ ಮಾಹಿತಿ ನೀಡದೆ ನಗರದಲ್ಲಿ ವಿದ್ಯುತ್ ಸಂಬಂಧಿ ಕಾಮಗಾರಿ ನಡೆಸಿದ ಕಾರಣ ಅರ್ಧಕ್ಕರ್ಧ ಬೀದಿ ದೀಪಗಳು ಉರಿಯುತ್ತಿಲ್ಲ ಎಂದು ನ.ಪಂ. ಸದಸ್ಯರು ಅಳಲು ತೋಡಿಕೊಂಡರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಗುರುವಾರ ನ.ಪಂ.ನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾವಗೊಂಡು ಚರ್ಚಾ ವಸ್ತುವಾಯಿತು. ಸದಸ್ಯರಾದ ಗೋಪಾಲ ನಡುಬೈಲು, ಪ್ರೇಮಾ ಟೀಚರ್, ಮೋಹಿನಿ, ಮೀನಾಕ್ಷಿ ಮೊದಲಾದವರು ಬೀದಿ ದೀಪದ ಸಮಸ್ಯೆಯ ಕುರಿತು ಗಮನ ಸೆಳೆದರು.
ಎಂಜಿನಿಯರ್ ಶಿವಕುಮಾರ್ ಮಾಹಿತಿ ನೀಡಿ, ನಗರದಲ್ಲಿ 3,849 ಬೀದಿ ದೀಪಗಳು ಇವೆ. ತಿಂಗಳಿಗೆ 1.24 ಲಕ್ಷ ರೂ. ವೆಚ್ಚದಲ್ಲಿ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದೆ. ಆದರೆ ಕೆಲ ದಿನಗಳಿಂದ ನಗರದಲ್ಲಿ ವಿದ್ಯುತ್ ಕಂಬ, ತಂತಿ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಹಾನಿಯಾಗಿದೆ. ಈ ಕಾಮಗಾರಿ ಯಾರು ನಡೆಸುತ್ತಿದ್ದಾರೆ ಎಂಬ ಬಗ್ಗೆ ನ.ಪಂ. ಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಯನ್ನು ಸಭೆಗೆ ಕರೆಯಿಸಿದರು. ಉತ್ತರ ನೀಡಿದ ಅಧಿಕಾರಿ, ಇದು ಕೇಂದ್ರ ಸರಕಾರದ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ. ನಗರದ ವೋಲ್ಟೇಜ್ ವ್ಯವಸ್ಥೆ ಸುಧಾರಣೆಗೆ ಹಳೆ ತಂತಿ, ವಿದ್ಯುತ್ ಕಂಬ ಬದಲಾವಣೆ, ಟಿ.ಸಿ. ಅಳವಡಿಕೆ ನಡೆಯುತ್ತಿದೆ. ಏಜೆನ್ಸಿ ಸಮೀಕ್ಷೆ ಪ್ರಕಾರ ಎಂಟು ಬೀದಿ ದೀಪಕ್ಕೆ ಹಾನಿ ಉಂಟಾಗಿದೆ. ಹೊಸ ಬೀದಿ ದೀಪ ನಿರ್ವಹಣೆಯನ್ನು ಏಜೆನ್ಸಿಗೆ ವಹಿಸಬೇಕು ಎಂಬ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದ್ದು, ಬೀದಿದೀಪಗಳನ್ನು ನ.ಪಂ.ಗೆ ಹಸ್ತಾಂತರಿ ಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಹಿತಿ ನೀಡಬೇಕು
ಇಲ್ಲಿ ಎಂಟಕ್ಕಿಂತ ಅಧಿಕ ಬೀದಿ ದೀಪಗಳಿಗೆ ಹಾನಿ ಉಂಟಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ. ನಗರದಲ್ಲಿ ಕಾಮಗಾರಿ ನಡೆಸುವಾಗ ಸ್ಥಳೀಯಾಡಳಿತದ ಗಮನಕ್ಕೆ ತರಬೇಕು. ಇದನ್ನು ಏಜೆನ್ಸಿ ಸಂಸ್ಥೆಗೆ ತಿಳಿಸಬೇಕು. ತತ್ ಕ್ಷಣ ಹೊಸ ಬೀದಿ ದೀಪ ಅಳವಡಿಸಬೇಕು ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಗೆ ಸೂಚಿಸಿದರು.
ಮಂಜೂರಾತಿ ಸಿಗುತ್ತಿಲ್ಲ
ಕಸಾಪ ಸಮ್ಮೇಳನ, ದಸರಾಕ್ಕೆ ಸ್ವಂತ ನಿಧಿಯಿಂದ ಪ್ರತಿ ವರ್ಷವೂ ನ.ಪಂ. ಅನುದಾನ ನೀಡುತ್ತದೆ. ಆದರೆ ಕಳೆದ ವರ್ಷದಿಂದ ಬೇಡಿಕೆ ಇಟ್ಟಿರುವ ಹಣ ಒದಗಿಸಲು ಜಿಲ್ಲಾಡಳಿತ ಮಂಜೂರಾತಿ ಕೊಟ್ಟಿಲ್ಲ ಎಂದು ಸದಸ್ಯ ಗೋಕುಲ್‌ದಾಸ್ ಗಮನಕ್ಕೆ ತಂದರು.
ಶಾಶ್ವತ ಕುಡಿಯುವ ನೀರಿನ ಯೋಜನೆ
ನಗರದ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿ ಇರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಪ್ರಸ್ತಾವಿಸಿದರು. ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ 66 ಕೋಟಿ ರೂ. ಪ್ರಸ್ತಾವನೆ ಸರಕಾರದ ಹಂತದಲ್ಲಿ ಬಾಕಿ ಇರುವ ಬಗ್ಗೆ ಮಾಹಿತಿ ಪಡೆದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರ ಮೂಲಕ ಸರಕಾರದ ಹಂತದಲ್ಲಿ ಚರ್ಚಿಸುವ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.