ಸಂಪತ್ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ
Team Udayavani, Oct 11, 2020, 9:12 PM IST
ಸುಳ್ಯ: ಸಂಪಾಜೆಯ ಬಿಜೆಪಿ ಪ್ರಭಾವಿ ಮುಖಂಡ ಬಾಲಚಂದ್ರ ಕಳಗಿ ಅವರ ಕೊಲೆ ಪ್ರಕರಣದ ಆರೋಪಿ ಕಲ್ಲುಗುಂಡಿ ನಿವಾಸಿ ಸಂಪತ್ ಕುಮಾರ್ (36)ನನ್ನು ಸುಳ್ಯದ ಶಾಂತಿನಗರ ಬಳಿ ಅ. 8ರಂದು ಮುಂಜಾನೆ ಮುಸುಕುಧಾರಿಗಳ ತಂಡ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಅ.11ರಂದು ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಮುಂಗ್ಲಿಪಾದೆ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಸ್ವಿಫ್ಟ್ ಕಾರಿನಲ್ಲಿ ಸುಬ್ರಹ್ಮಣ್ಯ-ಬಿಸಿಲೆ ಘಾಟಿ ಮೂಲಕ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ಬಂಧಿಸಲಾಗಿದೆ. ನಾಪತ್ತೆಯಾಗಲು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರು, ಹತ್ಯೆ ನಡೆಸಲು ಬಳಸಿದ ಮೂರು ನಾಡ ಕೋವಿ, ಒಂದು ಕತ್ತಿ, ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ದಸ್ತಗಿರಿ ಮಾಡಿದ ಕುರಿತಂತೆ ಅ.11 ರಂದು ಸುಳ್ಯ ನಗರ ಠಾಣೆಯಲ್ಲಿ ಎಎಸ್ಪಿ ಲಖನ್‌ಸಿಂಗ್ ನೇತೃತ್ವದಲ್ಲಿ ಪತ್ತೆ ಕಾರ್ಯ ತಂಡ ಮಾಹಿತಿ ಬಿಡುಗಡೆ ಮಾಡಿತು. ಐವರು ಆರೋಪಿಗಳ ಪೈಕಿ ನಾಲ್ವರು ಸಂಪಾಜೆ ಗ್ರಾಮದ ಕಲ್ಲುಗುಂಡಿಯವರಾಗಿದ್ದು, ಓರ್ವ ಜಾಳ್ಸೂರು ಗ್ರಾಮದ ನಿವಾಸಿ ಎನ್ನುವ ಮಾಹಿತಿಯನ್ನಷ್ಟೇ ನೀಡಿದ್ದಾರೆ. ಖಚಿತ ಮಾಹಿತಿ ಪ್ರಕಾರ ಕೃತ್ಯದಲ್ಲಿ ಭಾಗಿಯಾದ ಕಲ್ಲುಗುಂಡಿಯ ಮನಮೋಹನ ಯಾನೆ ಮನು, ಮನೋಜ್ ಯಾನೆ ಮಧು, ಕಾರ್ತಿಕ್, ಬಿಪಿನ್ ಕುಮಾರ್, ಅಡ್ಕಾರಿನ ಶಿಶಿರ್‌ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಚೀನಾ, ಪಾಕ್ ಗೆ ಸೆಡ್ಡು: ಮಿಲಿಟರಿ ಸಾರಿಗೆಗೆ ಮತ್ತಷ್ಟು ಬಲ:44 ಸೇತುವೆ ಉದ್ಘಾಟಿಸಿದ ರಾಜನಾಥ್
ಆರೋಪಿಗಳ ಗುರುತು ಹಚ್ಚಲು ಕವಾಯತು ನಡೆಸಲು ಬಾಕಿ ಇರುವುದರಿಂದ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಉದಯವಾಣಿಗೆ ತಿಳಿಸಿದ್ದಾರೆ.
ಒಂದೇ ತಂಡವಾಗಿತ್ತು..!
ಶಂಕಿತ ಆರೋಪಿಗಳೆಂದು ಗುರುತಿಸಲ್ಪಟ್ಟ ವ್ಯಕ್ತಿಗಳು ಒಂದು ಕಾಲದಲ್ಲಿ ಸಂಪತ್‌ಕುಮಾರ್ ಅವರ ಆಪ್ತ ವಲಯದಲ್ಲೇ ಗುರುತಿಸಿಕೊಂಡವರು. ಹತ್ಯೆಯಾದ ವ್ಯಕ್ತಿ, ಬಂಧನದ ಆರೋಪಿಗಳು ಕೆಂಪು ಕಲ್ಲು, ಮರಳು ಮಾರಾಟ ವ್ಯವಹಾರದಲ್ಲಿ ನಿರತರಾಗಿದ್ದರು. ವ್ಯವಹಾರ ನಡುವಿನ ದ್ವೇಷ ಅಥವಾ ಬೇರೆ ಕಾರಣ ಘಟನೆಗೆ ಕಾರಣ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಕಳಗಿ ಕೊಲೆಗೆ ಪ್ರತೀಕಾರ
ವರ್ಷದ ಹಿಂದೆ ನಡೆದ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಸಂಪತ್ ಕುಮಾರ್ ಪ್ರಮುಖ ಆರೋಪಿಯಾಗಿದ್ದ. ಇದೇ ಕಾರಣದಿಂದ ಸಂಪತ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ. ಅ. 8ರಂದು ಹತ್ಯೆ ನಡೆಸಿದ ಸಂದರ್ಭದಲ್ಲಿ ಕೂಡ ಆರೋಪಿಗಳು ಕಳಗಿ ಕೊಲೆಗೆ ಪ್ರತೀಕಾರ ಎಂದು ಕೃತ್ಯ ನಡೆದ ಮನೆ ಮಂದಿಯ ಬಳಿ ಹೇಳಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.