ಸುಳ್ಯ ತಾ| ಕ್ರೀಡಾಂಗಣಕ್ಕೆ 1 ಕೋಟಿ ರೂ. ಮಂಜೂರು
Team Udayavani, Feb 5, 2020, 12:14 AM IST
ಸುಳ್ಯ : ಹದಿಮೂರು ವರ್ಷಗಳ ಹಿಂದೆ ಬರೋಬ್ಬರಿ 60 ಲಕ್ಷ ರೂ. ವ್ಯಯಿಸಿ ಕಾಮಗಾರಿ ಆರಂಭಿಸಿ ಅರ್ಧದಲ್ಲೇ ಮೊಟಕುಗೊಂಡು ಪಾಳುಬಿದ್ದ ಸ್ಥಿತಿಯಲ್ಲೇ ಇರುವ ಶಾಂತಿನಗರದಲ್ಲಿರುವ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ಮಂಜೂರಾಗಿದೆ. ಮಂಜೂರಾಗಿರುವ 1 ಕೋಟಿ ರೂ. ಜತೆಗೆ ಅಗತ್ಯ ಇರುವ ಮೂಲ ಸೌಕರ್ಯ ಜೋಡಣೆಗೆ ಬೇಕಾಗ ಬಹುದಾದ ಹೆಚ್ಚುವರಿ ಅನು ದಾನಕ್ಕೂ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕರು ಸೂಚಿಸಿದ್ದಾರೆ ಎಂದು ಯುವಜನ ಕ್ರೀಡಾ ಇಲಾಖಾಧಿಕಾರಿಗಳು ತಿಳಿಸಿದ್ದು, ದಶಕದ ಪಾಳುಸ್ಥಿತಿಗೆ ಮುಕ್ತಿ ಸಿಗುವ ಲಕ್ಷಣವೊಂದು ಗೋಚರಿಸಿದೆ.
ಕ್ರೀಡಾಂಗಣದ ಕಥೆ
2006-07ರಲ್ಲಿ ರಾಜ್ಯ ಸರಕಾರ ತಾಲೂಕು ಕ್ರೀಡಾಂಗಣ ನಿರ್ಮಾಣ ಕ್ಕೆಂದು 60 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು. ನಗರದಿಂದ 4 ಕಿ.ಮೀ. ದೂರದಲ್ಲಿರುವ ಶಾಂತಿನಗರದಲ್ಲಿ 5.85 ಎಕ್ರೆ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಲಾಯಿತು. 60 ಲಕ್ಷ ರೂ. ವೆಚ್ಚದಲ್ಲಿ ಭೂಮಿ ಸಮತಟ್ಟು, ಕ್ರೀಡಾ ಪಟುಗಳ ವಿಶ್ರಾಂತಿ ಗೆಂದು ಎರಡು ಕಟ್ಟಡ ಗಳನ್ನು ನಿರ್ಮಿಸ ಲಾಯಿತು. ಅನಂತರ ಅನುದಾನ ಬಾರದೆ ಕಾಮಗಾರಿ ಮುಂದು ವರಿಯಲಿಲ್ಲ. 2 ಆರ್‌ಸಿಸಿ ಕಟ್ಟಡಗಳ ಕಿಟಕಿ ಗಾಜು, ಶೌಚಾಲಯದ ಬಾಗಿಲು ಒಡೆದು ಹೋಗಿವೆ. ಸೂಕ್ತ ರಕ್ಷಣೆ ಇಲ್ಲದ ಕಾರಣ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ ಎಂಬ ಆರೋಪಗಳಿವೆ.
ಸುಸಜ್ಜಿತ ಕ್ರೀಡಾಂಗಣದ ಬೇಡಿಕೆ
ಮಲೆನಾಡಿನ ಸುಳ್ಯದಲ್ಲಿ ಕ್ರೀಡಾ ಪಟುಗಳಿಗೆ ಬರವಿಲ್ಲ. ಆದರೆ ತರಬೇತಿಗೆ ಕ್ರೀಡಾಂಗಣದ ಕೊರತೆ ಇದೆ. ತಾತ್ಕಾಲಿಕ ನೆಲೆಯಲ್ಲಿ ಸ.ಪ.ಪೂ. ಕಾಲೇಜಿನ 200 ಮೀಟರ್ ಮೈದಾನದಲ್ಲಿ ತಾಲೂಕಿಗೆ ಸಂಬಂಧಿಸಿದ ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ. ಕೊನೆಗೂ ದಶಕಗಳ ಹಿಂದೆ ಹೊಸ ತಾಲೂಕು ಕ್ರೀಡಾಂಗಣಕ್ಕೆ ಯುವಜನ ಇಲಾಖೆ ಮುಖಾಂತರ ಅನುದಾನ ಬಿಡುಗಡೆ ಗೊಳಿಸಲಾಯಿತು. ಅನುದಾನದಲ್ಲಿ ಮೈದಾನವನ್ನು 200 ಮೀ. ಮಾತ್ರ ವಿಸ್ತರಿಸಲು ಪ್ರಯತ್ನಿಸಲಾಯಿತಾದರೂ ಅದೂ ವ್ಯವಸ್ಥಿತವಾಗಿ ಪೂರ್ಣಗೊಂಡಿಲ್ಲ.
ತಡೆಗೋಡೆ ನಿರ್ಮಿಸಬೇಕಿದೆ
ಏರು-ತಗ್ಗಿನ ಗುಡ್ಡದಂತಿರುವ ಈ ಸ್ಥಳವನ್ನು ಸಮತಟ್ಟುಗೊಳಿಸಿ, ಕ್ರೀಡಾಂಗಣದ ಸುತ್ತಲೂ ತಡೆಗೋಡೆ ನಿರ್ಮಿಸ ಬೇಕಿದೆ. ಗ್ಯಾಲರಿ, ರಸ್ತೆ, ಇತರ ಮೂಲ ಸೌಕರ್ಯ ಒದಗಿಸಲು ಕನಿಷ್ಠ 2ರಿಂದ 3 ಕೋಟಿ ರೂ. ಅಗತ್ಯವಿದೆ.
ಅನುದಾನ ಮಂಜೂರು
ತಾಲೂಕು ಕ್ರೀಡಾಂಗಣಕ್ಕೆ 1 ಕೋಟಿ ರೂ. ಅನುದಾನ ಮಂಜೂ ರಾಗಿದೆ. ಉಳಿದ ಅನುದಾನಕ್ಕಾಗಿ ಮೈದಾನದ ಮೂಲ ಅಗತ್ಯ ಹಾಗೂ ಸಂಪರ್ಕ ರಸ್ತೆ ಸಹಿತ ಅಗತ್ಯ ಇರುವ ಕಾಮಗಾರಿ ಬಗ್ಗೆ ಪಟ್ಟಿ ತಯಾರಿಸಿ ನೀಡುವಂತೆ ಶಾಸಕರು ಸೂಚಿಸಿದ್ದಾರೆ. ಆ ಪಟ್ಟಿ ತಯಾರಿ ಪ್ರಗತಿಯಲ್ಲಿದೆ.
– ದೇವರಾಜ್ ಮುತ್ಲಾಜೆ , ಸ.ಯುವ ಸಬಲೀಕರಣ ಕ್ರೀಡಾಧಿಕಾರಿ, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.