Sulya: ಜಾಲ್ಸೂರು ಸಮೀಪದ ಟ್ಯಾಂಕರ್ ಪಲ್ಟಿ – ಡೀಸೆಲ್ ಸೋರಿಕೆ
Team Udayavani, Oct 30, 2024, 3:11 PM IST
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಸಾಗಾಟ ಟ್ಯಾಂಕರ್ ರಸ್ತೆ ಮದ್ಯೆ ಪಲ್ಟಿಯಾದ ಘಟನೆ ಮಾಣಿ – ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಅ.30ರ ಬುಧವಾರ ಸಂಭವಿಸಿದೆ.
ಮಂಗಳೂರಿನಿಂದ ಮಡಿಕೇರಿ ಕಡೆಗೆ ಡೀಸೆಲ್ ಹೊತ್ತೊಯ್ಯತ್ತಿದ್ದ ಟ್ಯಾಂಕರ್ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು, ಘಟನೆಯಿಂದ ಟ್ಯಾಂಕರ್ ನಲ್ಲಿ ಡೀಸಲ್ ಸೋರಿಕೆಯಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯಿಂದ ಚಾಲಕನಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Resolution: ಝಾರ್ಖಂಡ್ನಲ್ಲಿ ಸಿಎಎ, ಎನ್ಆರ್ಸಿ, ಯುಸಿಸಿ ತಿರಸ್ಕರಿಸಿ ನಿರ್ಣಯ
ಆಕ್ಷೇಪಾರ್ಹ ಹೇಳಿಕೆ: ಸೋನಿಯಾ ಗಾಂಧಿ, ರಾಹುಲ್ ವಿರುದ್ಧ ಹಕ್ಕುಚ್ಯುತಿ?
Ayodhya: ರಾಮಮಂದಿರದ ಪ್ರಧಾನ ಅರ್ಚಕರಿಗೆ ಪಾರ್ಶ್ವವಾಯು
Toll Fee: ಪ್ರಯಾಣಿಕರ ಅನುಕೂಲಕ್ಕೆ ಏಕರೂಪ ಟೋಲ್ ಜಾರಿ ಚಿಂತನೆ: ಕೇಂದ್ರ ಸಚಿವ ಗಡ್ಕರಿ
Compliant: ಸುಳ್ಳು ಮಾಹಿತಿ ಪ್ರಸಾರ: ವೆಬ್ಸೈಟ್ಗಳ ವಿರುದ್ಧ ಆರಾಧ್ಯಾ ಬಚ್ಚನ್ ದೂರು