“ಸ್ವಚ್ಛ ಭಾರತ’ಕ್ಕೊಬ್ಬ ರಾಯಭಾರಿ ಅಬ್ದುಲ್ ಖಾದರ್ ಗೂನಡ್ಕ ಅವರಿಂದ ಸ್ವಚ್ಛತೆಯ ಪಾಠ
Team Udayavani, Apr 9, 2021, 6:20 AM IST
ಅರಂತೋಡು: ಇವರೊಬ್ಬ ಸ್ವಚ್ಛತಾ ರಾಯಭಾರಿ. ಇದು ಸರಕಾರವಾಗಲೀ ಯಾವುದೇ ಸಂಸ್ಥೆಯಾಗಲೀ ನೀಡಿದ ಹುದ್ದೆಯಲ್ಲ. ಸ್ವಯಂಪ್ರೇರಣೆಯಿಂದ ಸ್ವಚ್ಛ ಭಾರತ ಪರಿಕಲ್ಪನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವವರು ಇವರು.
ಸಂಪಾಜೆ ಗ್ರಾಮದ ಗೂನಡ್ಕ ಮುಖ್ಯರಸ್ತೆಯ ಬಳಿ ನೆಲೆಸಿರುವ ಅಬ್ದುಲ್ ಖಾದರ್ ಎಳೆಯ ವಯಸ್ಸಿನಲ್ಲಿಯೇ ಅಪಘಾತದಿಂದ ಕಾಲು ಕಳೆದುಕೊಂಡು ಶಿಕ್ಷಣ ವಂಚಿತರಾದರು. ಬಳಿಕ ಹೊಟ್ಟೆಪಾಡಿಗಾಗಿ ಬೀದಿಬದಿ ವ್ಯಾಪಾರ ಆರಂಭಿಸಿದರು. ಸರಕಾರದಿಂದ ತ್ರಿಚಕ್ರ ವಾಹನ ಸಿಕ್ಕಿದ ಮೇಲೆ ಸುಳ್ಯದಿಂದ ಸಂಪಾಜೆ ವರೆಗೆ ಹಸಿ ಮೀನು ಹಾಗೂ ಬಟ್ಟೆ ವ್ಯಾಪಾರ ನಡೆಸಿದರು.
ಪ್ರತಿದಿನ ಊರು ಸುತ್ತುವ ಸಂದರ್ಭ ಕಂಡುಬರುತ್ತಿದ್ದ ಎಲ್ಲೆಂದರಲ್ಲಿ ಕಸ ಎಸೆಯುವ ಜನರ ಪ್ರವೃತ್ತಿಯಿಂದ ರೋಸಿಹೋದ ಅವರಲ್ಲಿ ಪರಿಸರ ರಕ್ಷಣೆಗೆ ಏನಾದರೂ ಕೊಡುಗೆ ನೀಡಬೇಕೆಂಬ ತುಡಿತ ಉಂಟಾಯಿತು. ಆ ನಿಟ್ಟಿನಲ್ಲಿ ಬಿಡುವಿನ ವೇಳೆಯಲ್ಲಿ ರಸ್ತೆ ಬದಿ ಫಲಕ ನೆಟ್ಟು, ಸ್ವಚ್ಛ ಭಾರತ ಯೋಜನೆಯ ಲಾಂಛನ ಅಳವಡಿಸಿ ಸ್ವತ್ಛತೆಯ ಪಾಠ ಹೇಳಿಕೊಟ್ಟಿದ್ದಾರೆ.
ಪರಿಸರದಲ್ಲಿ ಜಾಗೃತಿಯ ಬ್ಯಾನರ್ ಅಳವಡಿಸಿದ್ದಲ್ಲದೆ ಕಸದ ಬುಟ್ಟಿಗಳನ್ನು ಇರಿಸಿ ಎಲ್ಲೆಂದರಲ್ಲಿ ಕಸ ಎಸೆಯುವ ಜನರಿಗೆ ಶುಚಿತ್ವದ ಪಾಠ ಮಾಡಿದ್ದಾರೆ.ಸ್ವತ್ಛ ಭಾರತ ಕಲ್ಪನೆಯ ಗಾಂಧೀಜಿಯ ಕನ್ನಡಕದ ಮಾದರಿಯನ್ನು ಗೂನಡ್ಕದಲ್ಲಿ ಅಳವಡಿಸಿ ಪ್ರವಾಸಿಗರು ಒಮ್ಮೆ ನಿಂತು ನೋಡುವಂತೆ ಮಾಡಿದ್ದಾರೆ.
ಇಲ್ಲಿ ಪ್ರವಾಸಿಗರು ಎಸೆದು ಹೋಗುವ ಪ್ಲಾಸ್ಟಿಕ್ ಹಾಗೂ ಕಸಗಳನ್ನು ಕಂಡು ಅದಕ್ಕೆ ಏನಾದರೂ ಪರಿಹಾರ ಮಾಡಬೇಕೆಂದು ಆಲೋಚಿಸುತ್ತಿದ್ದೆ. ಆಗ ಈ ಯೋಚನೆ ಬಂದಿದ್ದು ಅನುಷ್ಠಾನ ಮಾಡಿದ್ದೇನೆ. ಪರಿಸರಕ್ಕೆ ನನ್ನದೊಂದು ಚಿಕ್ಕ ಕೊಡುಗೆ ಇದು. – ಅಬ್ದುಲ್ ಖಾದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು
Bantwal: ಸಾಹಿತ್ಯವನ್ನು ಮಕ್ಕಳ ಮನ ಮುಟ್ಟುವಂತೆ ಬೋಧಿಸುವ ಶಿಕ್ಷಕರು ಬೇಕು
Shimoga: ರಿಪ್ಪನ್ ಪೇಟೆ ಸಮೀಪ ಹಿಟ್ ಅಂಡ್ ರನ್; ಬೈಕ್ ಸವಾರ ಸಾವು
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್ ಸ್ಟಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.