ಸಂತ್ರಸ್ತರ ಮನೆಗೆ ಭೇಟಿ ನೀಡಿದ ತಹಶೀಲ್ದಾರ್
ಪಡಿತರ ಸಿಗದಿರುವ ಬಗ್ಗೆ ಉದಯವಾಣಿ ವರದಿ ಹಿನ್ನೆಲೆ
Team Udayavani, Apr 17, 2020, 5:13 AM IST
ಸುಳ್ಯ: ಬುಟ್ಟಿ ಹೆಣೆದು ಬದುಕುವ ಪೆರುವಾಜೆ ಜಾಲ್ಪಣೆಯ ಹುಕ್ರು ಮತ್ತು ಬಟ್ಯ ಅವರಿಗೆ ಒಂದು ವರ್ಷದಿಂದ ಪಡಿತರ ಸೌಲಭ್ಯ ದೊರೆಯದಿರುವ ಬಗ್ಗೆ ಎ.16ರಂದು “ಆಧಾರ್ ಗೊಂದಲ: ಕುಟುಂಬಕ್ಕೆ ಸಿಗದ ಪಡಿತರ’ ತಲೆಬರಹದಲ್ಲಿ ಉದಯವಾಣಿ ಸುದಿನ ವರದಿ ಪ್ರಕಟಿಸಿದ ಬೆನ್ನಲ್ಲೇ ತಾಲೂಕು ಆಡಳಿತ ಗುರುವಾರ ಸಂತ್ರಸ್ತರ ಮನೆಗೆ ಭೇಟಿ ನೀಡಿದೆ.
ತಹಶೀಲ್ದಾರ್ ನೇತೃತ್ವದಲ್ಲಿ
ಮನೆಗೆ ಭೇಟಿ : ಸ್ಪಂದನೆ
ವರದಿ ಗಮನಿಸಿದ ತಾಲೂಕು ಆಡಳಿತ ಎ.16ರಂದು ತಹಶೀಲ್ದಾರ್ ಅನಂತಶಂಕರ, ಕಂದಾಯ ನಿರೀಕ್ಷಕರಾದ ಆರ್.ಶಂಕರ್, ಕೊರಗಪ್ಪ, ಗ್ರಾಮಕರಣಿಕೆ ನೇತೃತ್ವದಲ್ಲಿ ಬಟ್ಯ ಅವರ ಮನೆಗೆ ಭೇಟಿ ನೀಡಿ ಮೊದಲ ಹಂತದಲ್ಲಿ ಅಕ್ಕಿ ವಿತರಿಸಿತು. ಆಹಾರ ನಿರೀಕ್ಷಕಿ ವಸಂತಿ, ಆಹಾರ ಶಿರಸ್ತೇದಾರೆ ಕಮಲಾ ಅವರು ತುರ್ತು ಸಹಕಾರಕ್ಕೆ ಸಹಯೋಗ ನೀಡಿದರು. ಜತೆಗೆ ಪಡಿತರ ಸಿಗದಿರಲು ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕೋವಿಡ್ 19 ಲಾಕ್‌ಡೌನ್ ಮುಗಿದ ತತ್‌ಕ್ಷಣ ಆಧಾರ್ ಸಮಸ್ಯೆ ಸರಿಪಡಿಸಿ ಈ ಎರಡು ಕುಟುಂಬಗಳಿಗೆ ಸರಕಾರದಿಂದ ಪಡಿತರ ಸೌಲಭ್ಯ ಒದಗಿಸುವ ಬಗ್ಗೆ ತಹಶೀಲ್ದಾರ್ ಭರವಸೆ ನೀಡಿದರು.
ಆಧಾರ್ ಕಾರ್ಡ್ ಸಮಸ್ಯೆಯಿದ್ದಲ್ಲಿ ತಮ್ಮ ಇಲಾಖೆ ಮೂಲಕ ಅದಕ್ಕೆ ಸ್ಪಂದನೆ ನೀಡ ಲಾಗುವುದು ಎಂದು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನ
ಉದಯವಾಣಿ ವರದಿ ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕರಿಗೆ ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಎಂ.ಕೆ.ಮಂಜುನಾಥ ಅವರು ತಹಶೀಲ್ದಾರ್ ಅನಂತಶಂಕರ ಅವರ ನೇತೃತ್ವದಲ್ಲಿ ಅಗತ್ಯ ಕ್ರಮಕ್ಕೆ ಮುಂದಾದರು. ಪತ್ರಿಕಾ ವರದಿ ಕುರಿತು ಆಡಳಿತ ವ್ಯವಸ್ಥೆಯ ತುರ್ತು ಸ್ಪಂದನೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.