ಬೆಳ್ತಂಗಡಿ: ತಾ.ಪಂ. ಕಟ್ಟಡ ಸಿದ್ಧ
3.50 ಕೋ.ರೂ. ವೆಚ್ಚ, ಶೀಘ್ರ ಉದ್ಘಾಟನೆ ಸಾಧ್ಯತೆ
Team Udayavani, Jan 12, 2021, 2:40 AM IST
ಬೆಳ್ತಂಗಡಿ: ಶಿಥಿಲಾವಸ್ಥೆಗೆ ತಲುಪಿದ್ದ ಬೆಳ್ತಂಗಡಿ ತಾ.ಪಂ. ಹಳೆ ಕಟ್ಟಡ ಕೆಡವಿ ಜಿ.ಪಂ. ಅನುದಾನದಡಿ 3.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳು ತ್ತಿರುವ ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಾಣ ಅಂತಿಮ ಹಂತದಲ್ಲಿ ಇದ್ದು ಉದ್ಘಾಟನೆಗೆ ಸಜ್ಜಾಗುತ್ತಿದೆ.
ತಾಲೂಕಿನ ಶತಮಾನ ಕಂಡ ಅನೇಕ ಇಲಾಖೆ ಕಟ್ಟಡಗಳು ಒಂದೊಂದಾಗಿ ಆಧುನಿಕ ಸ್ಪರ್ಶ ತಾಳುತ್ತಿರುವುದರಲ್ಲಿ ತಾ.ಪಂ. ಕಟ್ಟಡವೂ ಒಂದು. ಬಹು ವರ್ಷಗಳ ಬೇಡಿಕೆಯ ಫಲವಾಗಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ 2019 ಅಕ್ಟೋಬರ್ 19ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಎರಡು ವರ್ಷಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದ ಲಾಗಿತ್ತು. ಕೋವಿಡ್ 19ರ ನಡುವೆಯೂ ಒಂದು ವರ್ಷ ಮೂರು ತಿಂಗಳೊಳಗಾಗಿ ಕಾಮಗಾರಿ ಶೇ. 90 ಪೂರ್ಣಗೊಂಡಿದೆ.
10 ದಿನಗಳಲ್ಲಿ ಪೂರ್ಣ? :
ವಿದ್ಯುತ್ ಸಲಕರಣೆ ಜೋಡಣೆ, ಇಂಟರ್ ಲಾಕ್ ಅಳವಡಿಕೆ, ಪ್ರವೇಶ ದ್ವಾರದ ಕೆಲವು ಮರಮಟ್ಟಗಳ ಜೋಡಣೆ ಹೊರತು ಪಡಿಸಿ ಉಳಿದ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ 10 ದಿನಗಳ ಒಳಗಾಗಿ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೀಟಿಂಗ್ ಹಾಲ್ :
ತಾ.ಪಂ. ಸಾಮಾನ್ಯ ಸಭೆ ಸೇರಿದಂತೆ ತುರ್ತು ಸಭೆ ನಡೆಸುವ ಸಲುವಾಗಿ 150 ಆಸನಗಳ ವ್ಯವಸ್ಥೆ ಯುಳ್ಳ ಮೀಟಿಂಗ್ ಹಾಲ್ ಸಿದ್ಧ ಪಡಿಸಲಾಗುತ್ತಿದೆ. ಜತೆಗೆ 3ನೇ ಮಹಡಿಯಲ್ಲಿ ಪ್ರತ್ಯೇಕ ಕಾರ್ಯ ಕ್ರಮ ಆಯೋಜಿಸುವ ಸಲು ವಾಗಿ ಹಾಲ್ ಸಿದ್ಧವಾಗಲಿದೆ.
ಪ್ರತೀ ಅಂತಸ್ತು 6,800 ಚದರಡಿ :
ಒಟ್ಟು 3.50 ಕೋಟಿ ರೂ.ನಲ್ಲಿ ಪೀಠೊಪಕರಣ, ವಿದ್ಯುತ್ ಸಂಪರ್ಕ ಅಳವಡಿಕೆ ಸೇರಿದಂತೆ ಕಟ್ಟಡ ಸಂಪೂರ್ಣ ಕಾಮಗಾರಿ ಒಳಗೊಂಡಿದೆ. ಪ್ರತಿ ಅಂತಸ್ತು 6,800 ಚದರಡಿ ಹೊಂದಿದ್ದು, ಒಟ್ಟು 3 ಮಹಡಿಗಳು ಸೇರಿ 20,400 ಚದರಡಿ ಒಳ ಗೊಂಡಿದೆ. ಲಿಫ್ಟ್ ಅಳ ವಡಿಸುವ ಸಲು ವಾಗಿ ಪ್ರತ್ಯೇಕ ಸ್ಥಳ ಕಾಯ್ದಿರಿಸಲಾಗಿದೆ.
ಕೊಠಡಿ ವಿಶೇಷತೆ :
ನೆಲ ಅಂತಸ್ತಿನಲ್ಲಿ ತಾ.ಪಂ. ಇಒ ಗೆ ಪ್ರತ್ಯೇಕ ಕೊಠಡಿ ಇರಲಿದೆ. ಜತೆಗೆ ವೀಡಿಯೋ ಕಾನ್ಫರೆನ್ಸ್, ನೋಂದಣಿ ಕೇಂದ್ರ, ನರೇಗಾ ಅಧಿಕಾರಿಗಳಿಗಾಗಿ ಕೊಠಡಿ ಮೀಸಲಿರಿಸಲಾಗಿದೆ. ಮೊದಲ ಮಹಡಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸ್ಥಾಯೀ ಸಮಿತಿ ಅಧ್ಯಕ್ಷರು, ಅಕ್ಷರ ದಾಸೋಹ ಇಲಾಖೆ, ಇತರ ಸಿಬಂದಿಗೆ ನಿಯೋಜಿಸಲಾಗಿದೆ. ಗೃಹರಕ್ಷಕ ದಳದ ಸಿಬಂದಿಗೂ ಅವಶ್ಯ ಸ್ಥಳವಕಾಶ ಲಭ್ಯ ವಾಗಲಿದೆ. ಕಟ್ಟಡವನ್ನು ಆಧುನಿಕ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮುಂಭಾಗದಲ್ಲಿ ಅಲ್ಯೂಮಿನಿಯಂ ಸಂಯೋಜಿತ ಫಲಕಗಳನ್ನು ಅತ್ಯಾ ಕರ್ಷಕವಾಗಿ ಅಳವಡಿಸಲಾಗಿದೆ.
ಬಹುದಿನಗಳ ಬೇಡಿಕೆಯ ತಾ.ಪಂ. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಒಳ ವಿನ್ಯಾಸವನ್ನು ಇನ್ನುಷ್ಟು ವಿಭಿನ್ನವಾಗಿ ತರುವ ದೃಷ್ಟಿ ಯಿಂದ ಕಟ್ಟಡ ಪರಿಶೀಲನೆ ನಡೆಸಿ ದ್ದೇನೆ. ಆದಷ್ಟು ಶೀಘ್ರದಲ್ಲಿ ಲೋಕಾ ರ್ಪಣೆಗೊಳಿಸಲಾಗುವುದು. –ಹರೀಶ್ ಪೂಂಜ, ಶಾಸಕರು
ಹಳೆ ಕಟ್ಟಡವಿದ್ದಲ್ಲಿ ಎರಡು ವರ್ಷಗಳೊಳಗೆ ನೂತನ ಕಟ್ಟಡ ನಿರ್ಮಾಣ ಗುರಿ ಹೊಂದ ಲಾಗಿತ್ತು. ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ವಿಸ್ತೃತ ಕೊಠಡಿಗಳು, ಸುಸಜ್ಜಿತ ಸೌಕರ್ಯಗಳಿದ್ದು, ಉತ್ತಮ ವಾಗಿ ಕಟ್ಟಡ ವಿನ್ಯಾಸಗೊಂಡಿದೆ. –ಸೂರ್ಯನಾರಾಯಣ ಭಟ್, ಎಇಇ, ಪಂಚಾಯತ್ ರಾಜ್ ಎಂ.ಉಪ ವಿಭಾಗ, ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.