ಬೋಳುಗುಡ್ಡೆ ಅಗೆದು ಕೃಷಿ ಮಾಡಿ ಯಶಸ್ಸು ಸಾಧಿಸಿದ ಶಿಕ್ಷಕ

ಇತರರಿಗೆ ಮಾದರಿಯಾದ ಗಿರಿಶಂಕರ ಸುಲಾಯ

Team Udayavani, Oct 9, 2020, 5:30 AM IST

ಬೋಳುಗುಡ್ಡೆ ಅಗೆದು ಕೃಷಿ ಮಾಡಿ ಯಶಸ್ಸು ಸಾಧಿಸಿದ ಶಿಕ್ಷಕ

ಶಿಕ್ಷಕ ಗಿರಿಶಂಕರ ಸುಲಾಯ ತಮ್ಮ ಗದ್ದೆಯೊಂದಿಗೆ.

ಸವಣೂರು: ವೃತ್ತಿಯಲ್ಲಿ ಶಿಕ್ಷಕ ರಾದರೂ ಮೂಲತಃ ಕೃಷಿ ಕುಟುಂಬ ದವರಾದ ಇವರು ಬೇಸಾಯದಲ್ಲಿ ಅಳವಡಿಸಿದ ಹೊಸ ಪದ್ಧತಿಯಿಂದಾಗಿ ಇಂದು ಇಡೀ ಕೃಷಿಕರಿಗೆ ಮಾದರಿ ಯಾಗಿದ್ದಾರೆ. ಪುಣಚಪ್ಪಾಡಿ ಗ್ರಾಮದ ದೇವಸ್ಯ ಎಂಬಲ್ಲಿರುವ ಶಿಕ್ಷಕ, ಕೃಷಿಕ ಗಿರಿಶಂಕರ ಸುಲಾಯ ಅವರೇ ಈ ರೂವಾರಿ.

ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯಗುರುವಾಗಿರುವ ಗಿರಿಶಂಕರ ಸುಲಾಯ ಸವಣೂರು ಗ್ರಾ.ಪಂ. ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.  ಕಲ್ಲು ಬಂಡೆಗಳಿರುವ ಬೋಳು ಗುಡ್ಡೆಯನ್ನು ಜೆಸಿಬಿ ಮೂಲಕ ತಟ್ಟು ಮಾಡುವ ಸಮಯ ಅವರ ಹಂಬಲಕ್ಕೆ ತಣ್ಣೀರು ಎರಚಿದವರು ಹಲವರು. ಆದರೆ ಪರಿಶ್ರಮವಿದ್ದರೆ ಎಂತಹ ಬೋಳುಗುಡ್ಡೆಯಲ್ಲಿಯೂ ಕೃಷಿ ಸಾಧ್ಯ ಎಂಬುದನ್ನು ಅವರೀಗ ತೋರಿಸಿದ್ದಾರೆ.

ಬೋಳುಗುಡ್ಡೆಯಲ್ಲಿ ಉತ್ತಮ ಇಳುವರಿ ಹಾಗೂ ಕೃಷಿಯಲ್ಲಿ ಯಶಸ್ವಿಯಾಗಲು ಮುಖ್ಯ ಕಾರಣ ಜೀವಾಮೃತ ಬಳಕೆ ಎನ್ನುತ್ತಾರೆ ಅವರು. ಲಾಕ್‌ಡೌನ್‌ ಬಳಿಕ ಶಾಲೆ ಆರಂಭ ವಾಗದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳು ವಂತಾಯಿತು. ಈಜುಕೊಳ ನಿರ್ಮಿಸಿರುವ ಇವರು ಮಕ್ಕಳಿಗೆ ಈಜು ತರಬೇತಿಯನ್ನೂ ನೀಡುತ್ತಿದ್ದಾರೆ. ಜತೆಗೆ ತುಳು ಭಾಷೆಯ ಕಲಿಕೆಗೆ ವಿಶೇಷ ಒತ್ತು ಕೂಡ ನೀಡಿದ್ದಾರೆ.

ಸಭಾ ಕಾರ್ಯಕ್ರಮಗಳಲ್ಲಿ ಉಪನ್ಯಾಸಕಾರರಾಗಿ, ಸಂಪನ್ಮೂಲ ವ್ಯಕ್ತಿ ಯಾಗಿಯೂ ತೊಡಗಿಸಿಕೊಂಡಿದ್ದಾರೆ. ಕೃಷಿ ಕಾರ್ಯದಲ್ಲಿ ಸ್ವತಃ ಇಳಿದು ಕೆಲಸ ಮಾಡಿದಾಗ ಅನುಭವ ಹಾಗೂ ಯಶಸ್ಸು ದೊರೆಯುತ್ತದೆ. ಕೃಷಿಯಲ್ಲಿ ಯಶಸ್ವಿ ಯಾಗಲು ಹೈನುಗಾರಿಕೆಯೂ ಮುಖ್ಯ ಎನ್ನುತ್ತಾರೆ ಅವರು.

ಅಡಿಕೆ ಗಿಡ ಮಾಡಲು ಬೇಕಾದ ಬೀಜದ ಅಡಿಕೆಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗಿರಿಶಂಕರ ಸುಲಾಯ ಅವರು ಪ್ರಧಾನಿ ಅವರ ಆತ್ಮನಿರ್ಭರ ಭಾರತ ಕಲ್ಪನೆಯ ಯಶಸ್ಸಿಗೆ ಎಲ್ಲರೂ ಸ್ವತಃ ಕೃಷಿ ಹಾಗೂ ಇತರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುತ್ತಾರೆ.

ಮಳೆ ನೀರು ಕೊಯ್ಲು ಪದ್ಧತಿಯನ್ನು ಪಾಲಿ ಹೌಸ್‌ಗೆ ಅಳವಡಿಸಿರುವುದ ರಿಂದ ಕೃಷಿ ಹೊಂಡದಲ್ಲಿ ನೀರನ್ನು ಶೇಖರಿಸಿ ಕೃಷಿಯನ್ನು ಕಡಿಮೆ ವೆಚ್ಚದಲ್ಲಿ ಮಾಡುತ್ತಾ ಬೇಸಗೆ, ಮಳೆ ಮತ್ತು ಚಳಿಗಾಲಗಳಿಗೆ ಅನುಗುಣವಾಗಿ ಸಮತೋಲನ ವಾತಾವರಣ ಕಲ್ಪಿಸಿಕೊಳ್ಳುವ ಮೂಲಕ ಉತ್ತಮ ಫ‌ಸಲು ಪಡೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಹೈನುಗಾರಿಕೆಯನ್ನು ಬಿಡದ ಇವರು ಹಸುವಿನ ಹಾಲು ಉತ್ಪಾದಿಸಿ ಅವುಗಳ ಸಗಣಿಯಿಂದ ತಯಾರಿಸುವ ಸಾವಯವ ಗೊಬ್ಬರವನ್ನು ಕೃಷಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಆರಂಭಿಸಿದಾಗ ವ್ಯವಸಾಯವನ್ನು ಲಾಭದಾಯವಾಗಿ ಸಿಕೊಳ್ಳುವ ವಿಚಾರಗಳ ಮಾಹಿತಿ ಕಲೆ ಹಾಕಿ ಮಾಡಿರುವ ಪ್ರಯೋಗ ಅವರ ಭೂಮಿಯನ್ನು ಹಸಿರನ್ನಾಗಿಸಿದೆ.

ಕೊಟ್ಟಿಗೆ ಗೊಬ್ಬರ, ಹನಿ ನೀರಾವರಿ
ಭೂಮಿಯ ಫ‌ಲವತ್ತತೆಯನ್ನು ಕಾಪಾಡಲು ರಾಸಾಯನಿಕದ ಜತೆಗೆ ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸಿ ಬೆಳೆಗೆ ಅನುಕೂಲವಾಗುವ ವಾತಾವರಣ ನಿರ್ಮಿಸುವ ಮೂಲಕ ರೋಗಗಳ ನಿಯಂತ್ರಣಕ್ಕೂ ಮುಂಜಾಗ್ರತಾ ಕ್ರಮ ಕೈಗೊಂಡಿರುವುದು ಕೃಷಿಯಲ್ಲಿನ ಲಾಭಕ್ಕೆ ಕಾರಣವಾಗಿದೆ. ಹನಿ ನೀರಾವರಿ ಕೊಳವೆಗಳ ಮೂಲಕ ಗಿಡದ ಬೇರಿಗೆ ನೇರವಾಗಿ ನೀರು ಹರಿಸುವುದರಿಂದ ಗೊಬ್ಬರ ಹಾಳಾಗುವುದಾಗಲಿ, ಕ್ಷಮತೆ ಕ್ಷೀಣಿಸುವುದಾಗಲಿ ಆಗದೆ ಗೊಬ್ಬರದ ಸಂಪೂರ್ಣ ಸಾರಾಂಶ ಗಿಡಗಳಿಗೆ ಲಭಿಸುತ್ತಿದೆ.

ಕೃಷಿ ಹೊಂಡ, ಮಳೆನೀರು ಕೊಯ್ಲು, ಜೀವಾಮೃತ ಬಳಕೆ, ಹನಿ ನೀರಾವರಿ ಪದ್ಧತಿಯಿಂದ ನೀರಿನ ಮಿತವ್ಯಯ ಸಾಧಿಸಿ ಸುಧಾರಿತ ತಳಿ, ಆಧುನಿಕ ವ್ಯವಸಾಯದ ಬಗ್ಗೆ ತರಬೇತಿ ನೀಡುವ ನಿಸ್ವಾರ್ಥ ಸೇವೆಗೂ ಇವರು ಮುನ್ನುಡಿ ಇಟ್ಟಿದ್ದಾರೆ. ಮನೆಯ ಅಂಗಳದಲ್ಲಿ ಗದ್ದೆ ಮಾಡಿದ್ದಾರೆ. ಇವರು ಗೇರು ಕೃಷಿಯನ್ನೂ ಮಾಡುತ್ತಿದ್ದಾರೆ.

ಕೃಷಿಯಲ್ಲಿ ವಿಶೇಷ ಆಸಕ್ತಿ
ನನ್ನ ಹಿರಿಯರು ಕೃಷಿ ಹಿನ್ನೆಲೆ ಹೊಂದಿದವರು. ಆದ್ದರಿಂದ ಶಿಕ್ಷಕನಾದರೂ ನನಗೆ ಕೃಷಿ ಕ್ಷೇತ್ರದ ಮೇಲೆ ವಿಶೇಷ ಆಸಕ್ತಿ. ಹಾಗಾಗಿ ಮನೆಯ ಪಕ್ಕದಲ್ಲಿನ ಕಲ್ಲಿನ ರಾಶಿಯಂತಿದ್ದ ಗುಡ್ಡವನ್ನು ಅಗೆದು ಅಡಿಕೆ ಕೃಷಿ ಮಾಡಿದ್ದೇನೆ. ಗೋ ಆಧಾರಿತ ಜೀವಾಮೃತ ಬಳಕೆ ಮಾಡಿದ್ದರಿಂದ ಉತ್ತಮ ಫ‌ಸಲು ಬಂದಿದೆ. ಅಡಿಕೆಯ ಜತೆಗೆ ತೆಂಗು, ಕಾಳು ಮೆಣಸು, ಗೇರು ಕೃಷಿ, ಸಣ್ಣ ಗದ್ದೆಯನ್ನೂ ಮಾಡಿದ್ದೇನೆ.
-ಗಿರಿಶಂಕರ ಸುಲಾಯ, ಕೃಷಿಕ

ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.