ಕುಸಿದ ಕುಕ್ಕುಜೆ ಸೇತುವೆಗೆ ಒಂದೇ ವಾರದಲ್ಲಿ ತಾತ್ಕಾಲಿಕ ಸಂಪರ್ಕ
Team Udayavani, Jun 8, 2020, 5:02 AM IST
ಬೆಳ್ತಂಗಡಿ: ನಾರಾವಿ ಗ್ರಾಮ ಪಂಚಾಯತ್ಗೆ ಒಳಪಟ್ಟ ಕುತ್ಲೂರು ಗ್ರಾಮದ ಕುಕ್ಕುಜೆ ಎಂಬಲ್ಲಿ ಮೇ 28ರಂದು ಕುಸಿದು ಬಿದ್ದ ಕುಕ್ಕುಜೆ ಸೇತುವೆಗೆ ಒಂದೇ ವಾರದಲ್ಲಿ ತಾತ್ಕಾಲಿಕ ಸಂಪರ್ಕ ರಚಿಸುವ ಮೂಲಕ ಶಾಸಕ ಹರೀಶ್ ಪೂಂಜ ಊರಿನ ಮಂದಿಗೆ ಸಂಪರ್ಕ ಕಲ್ಪಿಸಿದ್ದಾರೆ.
ಸೇತುವೆ ಕುಸಿದಿದ್ದರಿಂದ ಅಳಂಬ ವ್ಯಾಪ್ತಿಯಲ್ಲಿ ವಾಸಿಸುವ 160ಕ್ಕೂ ಅಧಿಕ ಕುಟುಂಗಳ ಜನರಿಗೆ ಸಂಚರಿಸಲು ಸಾಧ್ಯ ವಾಗದೆ ಅತಂತ್ರರಾಗಿದ್ದರು. ಈ ನಿಟ್ಟಿನಲ್ಲಿ ಅಗತ್ಯವಾಗಿ ತಾತ್ಕಾಲಿಕವಾಗಿ ಮೋರಿ ಬಳಸಿ 5 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸು ವುದಾಗಿ ಶಾಸಕರು ಭರವಸೆ ನೀಡಿದ್ದರು. ಅದರಂತೆ ಒಂದೇ ವಾರದಲ್ಲಿ ತಾತ್ಕಾಲಿಕ ಸಂಪರ್ಕ ಬೆಸೆಯಲಾಗಿದೆ. ಮುಂದಿನ ವರ್ಷ 3 ಕೋ.ರೂ. ವೆಚ್ಚದಲ್ಲಿ ಶಾಶ್ವತ ಸಂಪರ್ಕ ಸೇತುವೆ ನಿರ್ಮಾಣವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.