ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಹೊಂಡಕ್ಕೆ ಥರ್ಮೊಕೋಲ್ ಬೇಲಿ!
Team Udayavani, Oct 3, 2022, 9:09 AM IST
ಬಂಟ್ವಾಳ : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡಿನಲ್ಲಿ ತುಂಬಾ ಸಮಯದಿಂದ ವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಹೊಂಡವನ್ನು ಕಂಡೂ ಕಾಣದಂತೆ ಕುಳಿತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಅಣಕಿಸುವ ರೀತಿಯಲ್ಲಿ ರವಿವಾರ ಮುಂಜಾನೆ ಅಪರಿಚಿತರಾರೋ ಥರ್ಮೊಕೋಲ್‌ನ ತುಂಡುಗಳನ್ನು ಜೋಡಿಸಿ ಬ್ಯಾರಿಕೇಡ್ ರೂಪದಲ್ಲಿ ಇರಿಸಿದ್ದಾರೆ!
ಬೆಂಗಳೂರು ಭಾಗದಿಂದ ಮಂಗಳೂರು ಭಾಗಕ್ಕೆ ತೆರಳುವ ರಸ್ತೆಯಲ್ಲಿ ಈ ಹೊಂಡವಿದೆ. ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ಏಕಾಏಕಿ ಕಾಣಿಸಿಕೊಳ್ಳುವ ಈ ಹೊಂಡಕ್ಕೆ ಬಿದ್ದು ಹಾನಿಗೀಡಾಗುತ್ತಿವೆ. ಘನ ವಾಹನಗಳು ಬಿದ್ದಾಗ ಜೋರಾದ ಶಬ್ದವೂ ಉಂಟಾಗುತ್ತಿತ್ತು. ಬಿ.ಸಿ.ರೋಡು ಫ್ಲೈಓವರಿಗೆ ಆರಂಭದಲ್ಲೇ ಈ ಹೊಂಡವಿರುವುದು ಮತ್ತು ಬಿ.ಸಿ.ರೋಡು ಪೇಟೆಗೆ ಸಾಗುವ ಸರ್ವೀಸ್ ರಸ್ತೆಯೂ ಇಲ್ಲಿಯೇ ಆರಂಭಗೊಳ್ಳುವುದರಿಂದ ವಾಹನ ಸವಾರರಿಗೆ ಗೊಂದಲವಾಗಿ ಅಪಘಾತಗಳೂ ಸಂಭವಿಸುತ್ತಿವೆ. ಕೆಲವು ತಿಂಗಳ ಹಿಂದೆ ಇಲ್ಲೇ ಅನತಿ ದೂರದಲ್ಲಿದ್ದ ಬಿ.ಸಿ.ರೋಡು ಸರ್ಕಲ್ ಬಳಿಯ ಹೊಂಡಕ್ಕೆ ತೇಪೆ ಹಾಕಲಾಗಿದ್ದು, ಆದರೆ ಈ ಹೊಂಡವನ್ನು ಹಾಗೇ ಬಿಡಲಾಗಿತ್ತು.
ಇದನ್ನು ಕಂಡು ಬೇಸತ್ತ ಯಾರೋ ರವಿವಾರ ಬೆಳ್ಳಂಬೆಳಗ್ಗೆಯೇ ಈ ರೀತಿ ಥರ್ಮೊಕೋಲ್‌ಗಳನ್ನು ಇರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಪ್ರಾಧಿಕಾರ ಈ ಕುರಿತು ಗಮನಹರಿಸಲಿ ಎಂಬ ಆಗ್ರಹಗಳು ಕೂಡ ಕೇಳಿಬಂದಿವೆ.
ಇದನ್ನೂ ಓದಿ : ಗುಂಡ್ಲುಪೇಟೆ: ಜಮೀನಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ 510 ಚೀಲದ ರಸ ಗೊಬ್ಬರ ವಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.