ಪರಿಸರದ ಹೈನುಗಾರರ ಆರ್ಥಿಕತೆ ವೃದ್ಧಿಗೆ ಸಹಕಾರಿಯಾದ ಸಂಘ

ಪಿಲಾತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ

Team Udayavani, Feb 18, 2020, 4:57 AM IST

ben-27

ಪ್ರಾರಂಭದಲ್ಲಿ 100 ಲೀ. ಹಾಲು ಸಂಗ್ರಹಣೆಯಾಗುತ್ತಿದ್ದರೂ ಬಳಿಕ ಅಭಿವೃದ್ಧಿಗೊಂಡು ಪ್ರಸ್ತುತ 800 ಲೀ.ಗೂ ಹೆಚ್ಚು ಹಾಲು ಸಂಗ್ರಹಣೆ ಮಾಡುತ್ತಿದೆ. ಕೆಎಂಎಫ್‌ ನಂದಿನಿ ಹಾಲು ಮಾರುಕಟ್ಟೆ ವಿಸ್ತರಿಸುವಲ್ಲಿ ಸಂಘವು ಪ್ರಥಮ ಮಾರುಕಟ್ಟೆ ಅಭಿಯಾನ ನಡೆಸಿದೆ.

ಬಂಟ್ವಾಳ ತಾ|ನ ಪಿಲಾತಬೆಟ್ಟು ಗ್ರಾಮದ ಮೂರ್ಜೆಯಲ್ಲಿರುವ ಪಿಲಾತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ತನ್ನ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಪರಿಸರದ ಹೈನುಗಾರ ರರಿಗೆ ಆಸರೆಯಾಗಿದೆ. ಪ್ರಸ್ತುತ ಸಂತೋಷ್‌ ಕುಮಾರ್‌ ಶೆಟ್ಟಿ ಕುಂಟಜಾಲು ಅಧ್ಯಕ್ಷರಾಗಿ, ಜಯಲಕ್ಷ್ಮೀ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಂಘ ಪುಂಜಾಲಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ ಎಂಬ ಹೆಸರಿನಲ್ಲಿ 1974ರ ಜನವರಿಯಲ್ಲಿ ದಿ| ಕೆ. ಪುರಂದರ ಭಟ್‌ ಸಾರಥ್ಯದಲ್ಲಿ ಅಂದಿನ ಎಂ.ಎಲ್‌.ಸಿ. ಬಂಟ್ವಾ ಳದ ದಿ| ನಾರಾಯಣ ನಾಯಕ್‌ ಅವರಿಂದ ಉದ್ಘಾಟನೆಗೊಂಡಿತು. ಕೆನರಾ ಮಿಲ್ಕ್ ಯೂನಿಯನ್‌ನ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುತ್ತಮುತ್ತಲಿನ 14 ಗ್ರಾಮಗಳ ವ್ಯಾಪ್ತಿಯಲ್ಲಿ 1 ಸಾವಿರ ಲೀ.ನ ಗಡಿ ದಾಟಿ ಹಾಲು ಸಂಗ್ರಹಿ ಸುತ್ತಿತ್ತು. ಹಲವು ಏಳು-ಬೀಳುಗಳನ್ನು ಕಂಡ ಸಂಘದಲ್ಲಿ 1981ರಲ್ಲಿ ಹಾಲು ಸಂಗ್ರಹಣೆ ಸ್ಥಗಿತ ಗೊಂಡಿತ್ತು. ಪುನಃ 1984-85ರಲ್ಲಿ ಗುಂಡಿದಡ್ಡ ಕೇಶವ ಪ್ರಭು ಅವರ ಅಧ್ಯಕ್ಷತೆಯಲ್ಲಿ ಅಮೂಲ್‌ ಅಮುಲ್‌ ಮಾದರಿಯ ಉಪನಿಯಮಗಳನ್ನು ಅಳವಡಿಸಿಕೊಂಡು ಪಿಲಾತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ಎಂಬ ಹೆಸರಿನಲ್ಲಿ ಪಿಲಾತಬೆಟ್ಟು ಗ್ರಾಮದ ಮೂರ್ಜೆಯಲ್ಲಿ ಕಾರ್ಯಾರಂಭ ಮಾಡಿತು. ಪ್ರಥಮ ಹಂತದಲ್ಲಿ ಸಂಘವು ನಷ್ಟ ಕಂಡರೂ ಮುಂದೆ 1986- 87ರಲ್ಲಿ ದಿ| ಕೆ. ಪುರಂದರ ಭಟ್‌ ಅವರ ಅಧ್ಯಕ್ಷತೆ ಯಲ್ಲಿ ಸಂಘ ಪ್ರಗತಿ ಹೊಂದಿ ಲಾಭದತ್ತ ಮುಖಮಾಡಿತು. ಪ್ರಾರಂಭದಲ್ಲಿ 100 ಲೀ. ಹಾಲು ಸಂಗ್ರಹಣೆಯಾಗುತ್ತಿದ್ದರೂ ಬಳಿಕ ಅಭಿವೃದ್ಧಿಗೊಂಡು ಪ್ರಸ್ತುತ 800 ಲೀ.ಗೂ ಹೆಚ್ಚು ಹಾಲು ಸಂಗ್ರಹಣೆ ಮಾಡುತ್ತಿದೆ. ಕೆಎಂಎಫ್‌ ನಂದಿನಿ ಹಾಲು ಮಾರುಕಟ್ಟೆ ವಿಸ್ತರಿಸುವಲ್ಲಿ ಸಂಘವು ಪ್ರಥಮ ಮಾರುಕಟ್ಟೆ ಅಭಿಯಾನ ನಡೆಸಿ ವ್ಯಾಪ್ತಿಯಲ್ಲಿ ನಂದಿನಿ ಪ್ಯಾಕೆಟ್‌ ಹಾಲು ಸರಬರಾಜು ಮಾಡಿ ಗ್ರಾಹಕರನ್ನು ಆಕರ್ಷಿಸಿದೆ.

ತರಬೇತಿ, ಸವಲತ್ತು
ಸಂಘವು ಪ್ರತಿ ವರ್ಷ ಹಾಲು ಉತ್ಪಾದಕರಿಗೆ ಬೋನಸ್‌ ಹಾಗೂ ಪ್ರೋತ್ಸಾಹಕರ ಬಹುಮಾನ ನೀಡುವ ಜತೆಗೆ ತರಬೇತಿ ಪ್ರವಾಸಗಳನ್ನು ಆಯೋಜಿಸಿದೆ. ಒಕ್ಕೂಟದ ಸಹಯೋಗದಿಂದ ಸದಸ್ಯ ರೈತರಿಗೆ ಅನಿಲ ಸ್ಥಾವರ, ಹಾಲು ಕರೆಯುವ ಯಂತ್ರ, ಹಟ್ಟಿಗೆ ರಬ್ಬರ್‌ ಮ್ಯಾಟ್‌, ಹಸುರು ಹುಲ್ಲು ಬೆಳೆಸಲು ಸಹಾಯಧನ ನೀಡಿ ಪ್ರೋತ್ಸಾಹಿಸುತ್ತದೆ. ಸಂಘದಲ್ಲಿ ಪಶುಗಳ ಕೃತಕ ಗರ್ಭಧಾರಣೆ ಸೌಲಭ್ಯವಿದ್ದು, ವ್ಯಾಪ್ತಿಯಲ್ಲದೇ ಹೊರಗಿನ ಗ್ರಾಮಗಳಿಗೂ ಚಿಕಿತ್ಸಾ ಸೇವೆ ನೀಡುತ್ತಿದೆ.

ಮಾಜಿ ಅಧ್ಯಕ್ಷರು
ಜಿ.ಕೆ. ಕೇಶವ ಪ್ರಭು, ಕೆ. ಪುರಂದರ ಭಟ್‌, ಕೆ. ಗೋವಿಂದ ಭಟ್‌, ದೇವಪ್ಪ ಶೆಟ್ಟಿ ಕುಂಟಜಾಲ್‌, ಯು.ಎಸ್‌. ಚಂದ್ರಶೇಖರ್‌ ಭಟ್‌, ಎಂ.ಡಿ. ಗಣೇಶ್‌, ದೇವಪ್ಪ ಶೆಟ್ಟಿ ಕುಂಟಜಾಲ್‌, ಶ್ರೀಧರ ಶೆಟ್ಟಿ ಭಂಡಾರದಬೆಟ್ಟು, ವಿಟ್ಟಲ ಶೆಟ್ಟಿ, ನಾರಾಯಣ ಶೆಟ್ಟಿ ಕುಮಂಗಿಲ.

ಮಾಜಿ ಕಾರ್ಯದರ್ಶಿಗಳು
ಶೀನ ಶೆಟ್ಟಿ, ದೇವಪ್ಪ ಶೆಟ್ಟಿ, ಅಣ್ಣು ಡಿ., ಮೋಹನ್‌ ಆಚಾರ್ಯ, ಪ್ರದೀಪ್‌ ಕುಮಾರ್‌ ಶೆಟ್ಟಿ.

ಕೃಷಿಯೊಂದಿಗೆ ಉಪ ಕಸುಬಾಗಿ ಹೈನುಗಾರಿಕೆಯನ್ನು ನಡೆಸ ಬಹುದು. ಸಮರ್ಪಕ ಮಾರ್ಗ ದರ್ಶನ, ಮಾಹಿತಿಗಳಿಂದ ಹೈನು ಗಾರಿಕೆಯಿಂದ ಆರ್ಥಿಕವಾಗಿ ಯಶಸ್ಸು ಗಳಿಸಬಹುದು. ಯುವ ಜನತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರಸ್ತುತ ಸಂಘದ ಪರಿಸರದಲ್ಲಿ ಹೈನುಗಾರ ರಿಗೆ ಉತ್ತಮ ಹಾಲು ದೊರಕಿ ಸಲು ಬೇಕಾದ ಮಾಹಿತಿ, ನೆರವು ನೀಡಲಾಗುತ್ತಿದೆ.
– ಸಂತೋಷ್‌ ಕುಮಾರ್‌ ಶೆಟ್ಟಿ ಕುಂಟಜಾಲ್‌, ಅಧ್ಯಕ್ಷರು

ಪ್ರಶಸ್ತಿ, ಸಾಧನೆಗಳು
ಸಂಘಕ್ಕೆ ಒಕ್ಕೂಟದ ರಜತ ಮಹೋತ್ಸವ ಸಂದರ್ಭದಲ್ಲಿ ತಾಲೂಕಿನ ಉತ್ತಮ ಸಂಘವೆಂಬ ಪ್ರಶಸ್ತಿ ಬಂದಿದೆ. ಸಂಘದ ನಿರ್ದೇಶಕರೂ ಆಗಿರುವ ಕ್ಸೇವಿಯರ್‌ ಅವರಿಗೆ ಉತ್ತಮ ಹೈನುಗಾರ ಪ್ರಶಸ್ತಿ ಲಭಿಸಿದೆ. 1992ರಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿದ ಸಂಘವು ಶುದ್ಧ ಹಾಲು ಉತ್ಪಾದನೆಯ ದೃಷ್ಟಿಯಿಂದ ಪ್ರಥಮವಾಗಿ ಎಲ್ಲ ಹಾಲು ಉತ್ಪಾದಕರಿಗೆ ಸ್ಟೀಲ್‌ ಕ್ಯಾನ್‌ ಹಂಚಿದ ಹೆಗ್ಗಳಿಕೆ ಹೊಂದಿದೆ. ಸಂಘದ ವ್ಯಾಪ್ತಿಯಲ್ಲಿ ಇತರ ಸಂಘಗಳ ಸ್ಥಾಪನೆಗೂ ಕಾರಣೀಭೂತವಾಗಿದೆ.

– ರತ್ನದೇವ್‌ ಪುಂಜಾಲಕಟ್ಟೆ

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

1-dr

Veerendra Heggade 77ನೇ ವರ್ಷಕ್ಕೆ ಪಾದಾರ್ಪಣೆ: ಗಣ್ಯರಿಂದ ಶುಭ ಹಾರೈಕೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.