ಗ್ರಾಮಸ್ಥರಿಂದಲೇ ಕಾಲುಸಂಕ ನಿರ್ಮಾಣ

ಸರಕಾರಿ ಸವಲತ್ತಿಗಾಗಿ ಕಾದು ಬೇಸತ್ತ ಕುಪ್ಪೆಟ್ಟಿಯ ಬಾಯತ್ತಾರು ನಿವಾಸಿಗಳು

Team Udayavani, Jul 23, 2019, 5:00 AM IST

i-7

ಉಪ್ಪಿನಂಗಡಿ: ಸರಕಾರಿ ಸವಲತ್ತಿಗಾಗಿ ಕಾದು ಸುಸ್ತಾಗಿ ಗ್ರಾಮಸ್ಥರೇ ಹಣ ಒಟ್ಟುಗೂಡಿಸಿ ಕಾಲುಸಂಕ ನಿರ್ಮಿಸಿದ ಘಟನೆ ಕುಪ್ಪೆಟ್ಟಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಕುಪ್ಪೆಟ್ಟಿ ಸಮೀಪ ರಾಜ್ಯ ಹೆದ್ದಾರಿಯ ಸನಿಹದಲ್ಲೇ ಬಾಯಿತ್ತಾರು ಎಂಬಲ್ಲಿ ತೋಡು ದಾಟಲು ಕಾಲುಸಂಕ ನಿರ್ಮಾಣ ಮಾಡುವಂತೆ ಸ್ಥಳೀಯರು ಸಾಕಷ್ಟು ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿರಲಿಲ್ಲ. ಮಳೆಗಾಲದಲ್ಲಿ ಈ ತೋಡು ದಾಟುವುದೇ ದೊಡ್ಡ ಸಾಹಸದ ಕೆಲಸ.

ದೇವರೇ ಗತಿ!
ಸುಮಾರು 50ಕ್ಕೂ ಮಿಕ್ಕ ಕುಟುಂಬಗಳು ವಾಸವಾಗಿದ್ದು, ಶಾಲೆಗೆ ಹೋಗುವ ಮಕ್ಕಳೂ ಇಲ್ಲಿದ್ದಾರೆ. ರಾತ್ರಿ ವೇಳೆ ದಿಢೀರ್‌ ಅನಾ ರೋಗ್ಯ ಉಂಟಾದರೆ ದೇವರೇ ಗತಿ ಎನ್ನುವ ಸ್ಥಿತಿ ಇತ್ತು. ಪ್ರತಿ ವರ್ಷವೂ ಸ್ಥಳೀಯರು ತಮ್ಮ ತೋಟಗಳಲ್ಲಿ ಸಿಗುವ ಅಡಿಕೆ ದಬ್ಬೆ ಇತ್ಯಾದಿಗಳನ್ನು ಬಳಸಿಕೊಂಡು ಕಾಲುಸಂಕ ನಿರ್ಮಿಸುತ್ತಿದ್ದರು. ಜೋರು ಮಳೆಯಾದರೆ ಅದು ಕೊಚ್ಚಿಕೊಂಡು ಹೋಗುತ್ತಿತ್ತು. ಹೀಗಾಗಿ, ಇಲ್ಲೊಂದು ಕಾಲುಸಂಕ ನಿರ್ಮಿಸುವಂತೆ ಕ್ಷೇತ್ರದ ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಸ್ಥಳೀಯರು ಮನವಿ ಮಾಡಿದ್ದರು. ಮತ ಯಾಚನೆಗೆ ಬಂದಾಗಲೂ ಬೇಡಿಕೆ ಸಲ್ಲಿಸಿದ್ದರು. ಆದರೆ, ಅವರು ನೀಡಿರುವ ಭರವಸೆ ಈಡೇರಿಲ್ಲ.

ಹಲವು ಅವಘಡಗಳು
ಈ ಬಾರಿಯ ಮಳೆಗಾಲದಲ್ಲಿ ಶಾಲೆ ಯಿಂದ ಮನೆಗೆ ಮರಳುತ್ತಿದ್ದ ಪುಟ್ಟ ಮಗುವೊಂದು ತೋಡಿನ ನೀರಿನಲ್ಲಿ ಮೃತಪಟ್ಟಿದೆ. ಮಹಿಳೆಯೊಬ್ಬರು ತೋಡು ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದರು. ದಾರಿ ಹೋಕರ ಸಮಯಪ್ರಜ್ಞೆಯಿಂದ ಅವರು ಬಚಾವಾದರು. ಇಂತಹ ಹಲವು ಘಟನೆಗಳು ನಡೆದಿವೆ. ಹತ್ತು ವರ್ಷಗಳ ಹಿಂದೆ ಆಗಿನ ಶಾಸಕ ವಸಂತ ಬಂಗೇರ ಅವರು ಈ ಕಾಲು ಸಂಕಕ್ಕೆ 4 ಲಕ್ಷ ರೂ. ಮಂಜೂರು ಮಾಡಿದ್ದರು. ಆದರೆ, ಕೆಲವರು ಶಾಸಕರ ಮೇಲೆ ಒತ್ತಡ ಹೇರಿ, ಇಲ್ಲಿಂದ ಸುಮಾರು 100 ಮೀ. ದೂರದಲ್ಲಿರುವ ಕಾಲು ಸಂಕದ ವಿಸ್ತರಣೆಗೆ ಈ ಅನುದಾನವನ್ನು ಬಳಸಿಕೊಂಡರು. ಇದರಿಂದ ಆಗುವ ಸಮಸ್ಯೆಗಳನ್ನೂ ಅವರಿಂದ ಮರೆ ಮಾಚಿದರು ಎಂಬ ಆರೋಪವಿದೆ. ಬಾಯತ್ತಾರು ಪರಿಸರದಲ್ಲಿ ಬಹುತೇಕರು ಕೃಷಿಕರಾಗಿದ್ದು, ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದರೂ ಕೊನೆ ಗಳಿಗೆಯಲ್ಲಿ ಅವರ ಮನವೊಲಿಸಲಾಗಿತ್ತು.

ಆತಂಕದ ಛಾಯೆ
ಗತಕಾಲದಿಂದಲೂ ಕಾಲು ಸಂಕಕ್ಕೆ ಮನವಿ ನೀಡುತ್ತಲೇ ಇದ್ದೇವೆ. ಮಳೆಗಾಲ ಬಂತೆಂದರೆ ಸಾಕು, ಆತಂಕದ ಛಾಯೆ ಮೂಡುತ್ತದೆ. ಶಾಲಾ ಕಾಲೇಜಿಗೆ ತೆರಳುವ ಮಕ್ಕಳು ಮನೆ ಸೇರುವ ತನಕ ಹೆತ್ತಮ್ಮ ಕಾಯುವುದೇ ಕಾಯಕ. ಈ ತೋಡು ನೇತ್ರಾವತಿ ನದಿಯನ್ನು ಸೇರುತ್ತದೆ. ಪ್ರತಿ ಬಾರಿ ಅವಘಡಗಳು ಸಂಭವಿಸಿದಾಗ ಜನಪ್ರತಿನಿಧಿಗಳ ಭರವಸೆ ಮೇಲೆದ್ದು ಬರುತ್ತದೆ. ಮತ್ತೆ ನನೆಗುದಿಗೆ ಬೀಳುತ್ತದೆ.
-ಅಬ್ಟಾಸ್‌ ಬಾಯತ್ತಾರು, ಗ್ರಾಮಸ್ಥ

 ಅನುದಾನ ಬರಲಿಲ್ಲ
ಗ್ರಾ.ಪಂ. ವ್ಯಾಪ್ತಿಯ ಕುಪ್ಪೆಟ್ಟಿ ಬಾಯತ್ತಾರು ನಿವಾಸಿಗಳ ಬಹುದಿನಗಳ ಬೇಡಿಕೆ ಕುರಿತು ಮನವರಿಕೆಯಾಗಿದೆ. ಇಲ್ಲಿ ಕಾಲು ಸಂಕ ರಚಿಸಲು ಗ್ರಾ.ಪಂ. ಅನುದಾನ ಕೊರತೆ ಇದೆ. ಪ್ರತಿ ವರ್ಷವೂ ಗ್ರಾ.ಪಂ.ನಿಂದ 5,000 ರೂ. ನೀಡುತ್ತಿದ್ದು, ಉಳಿದ ಹಣವನ್ನು ಸ್ಥಳೀಯರೇ ಒಟ್ಟುಗೂಡಿಸಿ ಕಾಲುಸಂಕ ಮಾಡಿಕೊಳ್ಳುತ್ತಿದ್ದಾರೆ. ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ. ಈ ಬಾರಿ ಕಾಲುಸಂಕ ರಚನೆಗೆ ಅನುದಾನ ಬಾರದ ಕಾರಣ, ಅದಕ್ಕೆ ಅಳವಡಿಸುವ ರೋಪ್‌ ಪಂಚಾಯತ್‌ನಲ್ಲೇ ಉಳಿದುಕೊಂಡಿದೆ.
-ಜಯವಿಕ್ರಮ ಕಲ್ಲಾಪು, ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರು

– ಎಂ.ಎಸ್‌. ಭಟ್‌

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.