“ಭಜನೆಯಿಂದ ಮಾನವ ಧರ್ಮದ ನಿರ್ಮಾಣ’
ಭಜನ ತರಬೇತಿ ಶಿಬಿರ, ಸಂಸ್ಕೃತಿ ಸಂವರ್ಧನ ಕಾರ್ಯಾಗಾರ
Team Udayavani, Sep 19, 2019, 5:00 AM IST
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಭಜನ ತರಬೇತಿ ಜರಗಿತು.
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮ ಸ್ಥಳದಲ್ಲಿ ಕಳೆದ 20 ವರ್ಷಗಳಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ವತಿಯಿಂದ ಭಜನ ತರಬೇತಿ ಶಿಬಿರ ಹಾಗೂ ಕಾರ್ಯಾಗಾರ ಆರಂಭಗೊಂಡು ಪ್ರಸಕ್ತ 21ನೇ ವರ್ಷದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ತರಬೇತಿಗಳು ಜರಗುತ್ತಿವೆ.
ಕಮ್ಮಟದ ಎರಡನೇ ದಿನದಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾ ಹರ್ಷೇದ್ರ ಕುಮಾರ್, ಸೋನಿಯಾ ಯಶೋವರ್ಮ ಉಪಸ್ಥಿತರಿದ್ದು, ಮಾರ್ಗ ದರ್ಶನ ನೀಡಿದರು. ಗ್ರಾಮೀಣ ಅಭಿವೃದ್ಧಿ ಹಾಗೂ ಭಜನ ಮಂಡಳಿಗಳು ಎಂಬ ವಿಷಯದ ಕುರಿತು ಭಜನ ತರಬೇತಿ ಕಮ್ಮಟದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಉಪನ್ಯಾಸ ನೀಡಿ, ಮಾನವ ಧರ್ಮದ ನಿರ್ಮಾಣ ಭಜನೆಯಿಂದ ಸಾಧ್ಯ. ಒಳ್ಳೆಯ ವ್ಯಕ್ತಿತ್ವ, ಕುಟುಂಬ, ಸಮಾಜ ನಿರ್ಮಾಣ ಮೂಲಕ ಉತ್ತಮ ದೇಶ ನಿರ್ಮಾಣ ಸಾಧ್ಯ. ಮನುಷ್ಯನಿಗೆ ಅಂತಃ ಪ್ರೇರಣೆ ಇರಬೇಕು. ಸಕಾರಾತ್ಮಕ, ಧನಾತ್ಮಕ ಯೋಚನೆ ಮತ್ತು ಯೋಜನೆಗಳಿರಬೇಕು. ನಮ್ಮ ಬದುಕಿಗೆ ಪ್ರೇರಕ ಆರ್ಥಿಕತೆ ಇರಬೇಕು. ಉತ್ತಮ ಧೋರಣೆಗಳಿಂದ ಮನುಷ್ಯ ಉನ್ನತಿ ಹೊಂದುತ್ತಾನೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಉಷಾ ಹೆಬ್ಟಾರ್, ಮನೋರಮಾ ತೋಳ್ಪಡಿತ್ತಾಯ, ಅನಸೂಯಾ ಪಾಠಕ್ ಭಕ್ತಿಗೀತೆಗಳನ್ನು ಅಭ್ಯಾಸ ಮಾಡಿಸಿದರು. ರಮೇಶ್ ಕಲ್ಮಾಡಿ, ಶಂಕರ್, ಚೈತ್ರಾ ಕುಣಿತ ಭಜನೆಗೆ ತರಬೇತಿ ನೀಡಿದರು. ಕ್ಷೇತ್ರ ಪರಿಚಯದ ಕುರಿತು ಕಮ್ಮಟ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಮಮತಾ ರಾವ್ ಮಾಹಿತಿ ನೀಡಿದರು. ಮಂಡಳಿ ಬಿ. ಸೀತಾರಾಮ ತೋಳ್ಪಡಿತ್ತಾಯ, ವೀರು ಶೆಟ್ಟಿ, ಭುಜಬಲಿ, ಭವಾನಿ, ನಾಗೇಂದ್ರ ಅಡಿಗ, ಶಶಿಧರ್ ಉಪಾಧ್ಯಾಯ, ದಿವಾಕರ್ ಭಟ್, ಸುನೀತಾ, ಸತೀಶ್ ಪೈ, ಜಯರಾಮ ನೆಲ್ಲಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.
ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ
ಗಳಾದ ಪ್ರದೀಪ್, ದಿನೇಶ್, ರಾಜೇಶ್, ಗೋಪಾಲ್, ಪದ್ಮರೇಖಾ, ಚೈತ್ರಾ ಅವರು ಕಾರ್ಯಕ್ರಮಕ್ಕೆ ಸಹಕರಿಸಿದರು.
ಸಮಾಜ ಸೇವೆ
ನಾವು ಅಹಂಕಾರವನ್ನು ಬಿಡಬೇಕಾಗಿದೆ. ತ್ಯಾಗ ಮನೋಭಾವನೆ, ಹೃದಯವಂತಿಕೆ ಬೆಳೆಸಬೇಕಾಗಿದೆ. ತ್ಯಾಗದಿಂದ ಸಮಾಜ ಸೇವೆ ಮಾಡಿದಾಗ ದೇಶ ನಿರ್ಮಾಣ ಸಾಧ್ಯ
– ಡಾ| ಎಲ್.ಎಚ್. ಮಂಜುನಾಥ್
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.