ಜನ-ಜೀವನ ಅಸ್ತವ್ಯಸ್ತಗೊಳಿಸಿದ ಕೊರೊನಾ ಭೀತಿ; ಸರಕಾರದಿಂದ ಮುನ್ನೆಚ್ಚರಿಕೆ


Team Udayavani, Mar 14, 2020, 10:30 PM IST

puttur-covid

ಕೊರೊನಾ ವೈರಸ್‌ ಹರಡುವ ಭೀತಿಯ ಕಾರಣ ಕಟ್ಟೆಚ್ಚರ ವಹಿಸಲು ರಾಜ್ಯ ಸರಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಿವಿಧೆಡೆ ಇದರ ಬಿಸಿ ತಟ್ಟಿರುವುದು ಗೋಚರಿಸಿದೆ. ಪ್ರಮುಖ ಪರಿಣಾಮವಾಗಿ ಶನಿವಾರ ನಗರ ಪ್ರದೇಶಗಳಲ್ಲಿ ಜನರ ಓಡಾಟ ವಿರಳವಾಗಿರುವುದು ಕಂಡುಬಂತು. ಬಸ್ಸು ನಿಲ್ದಾಣಗಳೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ವ್ಯಾಪಾರ ವಹಿವಾಟು ಕೂಡ ತೀವ್ರವಾಗಿ ಕುಸಿದಿದೆ. ರಾಜ್ಯದ ಪ್ರಮುಖ ಶ್ರದ್ಧಾ ಕೇಂದ್ರವಾದ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಶನಿವಾರ ಭಕ್ತರ ಸಂಖ್ಯೆ ವಿರಳವಾಗಿತ್ತು.

ವಾರದ ಕಾಲ ಸರಕಾರಿ ಕಾರ್ಯಕ್ರಮ ಇಲ್ಲ
ಪುತ್ತೂರು: ಶಾಲಾ ಕಾಲೇಜುಗಳಿಗೆ ರಜೆ ನೀಡಿದ ಪರಿಣಾಮ ಕೆಲವು ಶಾಲಾ -ಕಾಲೇಜುಗಳಲ್ಲಿ ಬೆರಳೆಣಿಕೆಯ ಮಕ್ಕಳು ಮಾತ್ರ ಬೆಳಗ್ಗೆ ಓಡಾಡುತ್ತಿದ್ದರು. ವಾರ ಮುಕ್ತಾಯದ ಶನಿವಾರವಾದರೂ ನಗರದಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ, ವ್ಯವಹಾರವೂ ಕುಸಿದಿತ್ತು. ಬಸ್ಸು ನಿಲ್ದಾಣದಲ್ಲೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುವಂತಿತ್ತು. ವಾರದ ಕಾಲ ಸರಕಾರಿ ಕಾರ್ಯಕ್ರಮಗಳನ್ನು ನಡೆಸದೆ ಇರಲು ಇಲಾಖೆಗಳು ನಿರ್ಧರಿಸಿವೆ. ಖಾಸಗಿಯಾಗಿ ನಡೆಯುವ ಒಂದಷ್ಟು ಕಾರ್ಯಕ್ರಮಗಳನ್ನು ರದ್ದುಪಡಿಸಿದರೆ ಕೆಲವು ಕಾರ್ಯಕ್ರಮಗಳು ಸರಳ ರೀತಿಯಲ್ಲಿ ನಡೆದಿವೆ. ಮದುವೆ ಸಹಿತ ಇತರ ಸಮಾರಂಭಗಳನ್ನು ಸರಳವಾಗಿ ನಡೆಸಲು ಸೂಚನೆ ನೀಡಲಾಗಿದೆ.

ಚಿತ್ರ ಪ್ರದರ್ಶನಕ್ಕೆ ತಡೆ
ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಸರಕಾರ ಸಿನೆಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ರದ್ದು ಮಾಡಿದ್ದರೂ ಚಲನಚಿತ್ರ ಮಂಡಳಿಯ ಸೂಚನೆ ಬಾರದಿರುವ ಕಾರಣ ನೀಡಿ ಪುತ್ತೂರಿನ ಏಕೈಕ ಚಿತ್ರ ಮಂದಿರದಲ್ಲಿ ಶನಿವಾರ ಬೆಳಗ್ಗಿನ ಚಿತ್ರ ಪ್ರದರ್ಶನ ನಡೆಸಲಾಗಿತ್ತು.
ಈ ವಿಚಾರ ತಿಳಿದ ಪುತ್ತೂರು ತಹಶೀಲ್ದಾರ್‌ ರಮೇಶ್‌ ಬಾಬು ಅವರು ತತ್‌ಕ್ಷಣ ಪ್ರದರ್ಶನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಹಣ ತೆತ್ತು ಸಿನೆಮಾ ಮಂದಿರದಲ್ಲಿ ಕುಳಿತಿದ್ದ ಪ್ರೇಕ್ಷಕರ ವರ್ಗಕ್ಕೆ ತೊಂದರೆಯಾಗದಂತೆ ಒಂದು ದೇಖಾವೆ ಪ್ರದರ್ಶನಗೊಂಡು ಬಳಿಕ ಸ್ಥಗಿತಗೊಳಿಸಲಾಯಿತು.

3 ಕಡೆ ವಿಶೇಷ ವಾರ್ಡ್‌
ಕೊರೊನಾ ವೈರಸ್‌ ಶಂಕಿತರು ಪತ್ತೆಯಾದಲ್ಲಿ ತ್ವರಿತ ಕ್ರಮದ ದೃಷ್ಟಿಯಿಂದ ತಾಲೂಕಿನ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 10 ಬೆಡ್‌, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ 3 ಬೆಡ್‌ ಹಾಗೂ ಕಡಬ ಸಮುದಾಯ ಆಸ್ಪತ್ರೆಯಲ್ಲಿ 2 ಬೆಡ್‌ಗಳ ಐಸೋಲೇಶನ್‌ (ವಿಶೇಷ) ವಾರ್ಡ್‌ಗಳನ್ನು ಸಿದ್ಧಗೊಳಿಸಲಾಗಿದೆ.

ಸರಕಾರಿ ಆಸ್ಪತ್ರೆ ಸನ್ನದ್ಧ
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 5 ಬೆಡ್‌ನ‌ ಮಹಿಳಾ ಹಾಗೂ 5 ಬೆಡ್‌ನ‌ ಪುರುಷರ ವಿಶೇಷ ವಾರ್ಡ್‌ಗಳನ್ನು ತೆರೆಯಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಜನ ಸೇರುವ ಸ್ಥಳವಾಗಿರುವುದರಿಂದ ಆತಂಕ ಹಾಗೂ ಪರೀಕ್ಷೆಯ ಆತಂಕದಿಂದ ಸಣ್ಣಪುಟ್ಟ ರೋಗಿಗಳು ಆಸ್ಪತ್ರೆಗೆ ಬರುವುದನ್ನು ಕಡಿಮೆ ಮಾಡಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಹಿನ್ನೆಲೆ ಪರಿಶೀಲನೆ
ಶಂಕಿತ ರೋಗಿಗಳು ಪತ್ತೆಯಾದಲ್ಲಿ ಮುಖ್ಯವಾಗಿ ಅವರ ಹಿನ್ನೆಲೆ, ಪ್ರಯಾಣಿಸಿರುವ ಜಾಗ ಮೊದಲಾದ ಮಾಹಿತಿ ಪಡೆಯಲಾಗುತ್ತದೆ. ಗಂಟಲು ದ್ರವವನ್ನು ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿ, ಅಲ್ಲಿಂದ ಹಾಸನದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆ ಸಿದ್ಧಗೊಂಡಿದ್ದು, ಈವರೆಗೆ ಯಾವುದೇ ಶಂಕಿತ ರೋಗಿಗಳು ಪತ್ತೆಯಾಗಿಲ್ಲ ಎಂದು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಆಶಾ ಪುತ್ತೂರಾಯ ತಿಳಿಸಿದ್ದಾರೆ.

ಎಲ್ಲೆಡೆ ಜಾಗೃತಿ
ಆರೋಗ್ಯ ಇಲಾಖೆಯಿಂದ ಆರೋಗ್ಯ ಸಹಾಯಕಿಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಂಡು ನಗರ ಸಹಿತ ಗ್ರಾಮಾಂತರ ಭಾಗಗಳಲ್ಲಿ ಕೊರೊನಾ ವೈರಸ್‌ ಕುರಿತ ಜಾಗೃತಿ ಕರಪತ್ರಗಳನ್ನು ಹಂಚಲಾಗುತ್ತಿದೆ. ವಿದೇಶದಿಂದ ಇತ್ತೀಚೆಗೆ ಆಗಮಿಸಿದವರ ಮಾಹಿತಿಯನ್ನು ಕಲೆ ಹಾಕುವ ಜವಾಬ್ದಾರಿಯನ್ನೂ ವಹಿಸಲಾಗಿದೆ.

ಸೋಮವಾರ ಸಂತೆ ಇಲ್ಲ
ಪುತ್ತೂರು ಸೋಮವಾರ ಸಂತೆಯಲ್ಲಿ ಹೆಚ್ಚಿನ ಜನ ಸೇರುವುದರಿಂದ ಈ ವಾರದ ಸಂತೆಯನ್ನು ಸ್ಥಳಾಂತರಿಸುವಂತೆ ಪುತ್ತೂರು ಸಹಾಯಕ ಆಯುಕ್ತರು ಸೂಚಿಸಿದ್ದಾರೆ. ಆದರೆ ಬೇರೆ ಸ್ಥಳದ ಅಭಾವ ಇರುವುದರಿಂದ ವಾರದ ಸಂತೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂತೆ ವರ್ತಕರು ತಿಳಿಸಿದ್ದಾರೆ. ಎಪಿಎಂಸಿ ಸಹಿತ ಬೇರೆ ಸ್ಥಳದ ಅಭಾವ ಇರುವುದರಿಂದ ಸೋಮವಾರದ ಸಂತೆ ಸ್ಥಗಿತಗೊಳಿಸುವ ಕುರಿತು ಹೊರ ಜಿಲ್ಲೆಗಳಿಂದ ಬರುವ ವರ್ತಕರಿಗೂ ಮಾಹಿತಿ ನೀಡಲಾಗಿದೆ ಎಂದು ಸಂಘದ ಬಿ.ಕೆ. ಹಮೀದ್‌ ತಿಳಿಸಿದ್ದಾರೆ.

ಕಡಬ: ಜುಮಾ ಮಸೀದಿ ಉರೂಸ್‌ ಮುಂದೂಡಿಕೆ
ಕಡಬ : ಸುಮಾರು 800 ವರ್ಷಗಳ ಇತಿಹಾಸ ಇರುವ ಕಡಬದ ಕೇಂದ್ರ ಜುಮಾ ಮಸೀದಿಯಲ್ಲಿ ಮಾ. 16ರಿಂದ 19ರ ತನಕ ನಡೆಯಬೇಕಾಗಿದ್ದ ಉರೂಸ್‌ ಸಮಾರಂಭವನ್ನು ಕೊರೊನಾ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಮುಂದೂಡಲಾಗಿದೆ ಎಂದು ರಾಜ್ಯ ಮುಸ್ಲಿಂ ಜಮಾಅತ್‌ ಕಮಿಟಿಯ ಕಡಬ ತಾಲೂಕು ಅಧ್ಯಕ್ಷ ಸಯ್ಯದ್‌ ಮೀರಾ ಸಾಹೇಬ್‌ ತಿಳಿಸಿದ್ದಾರೆ.

ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತ ನಾಡಿದರು. ನಮ್ಮ ಜಮಾಅತಿನಲ್ಲಿ ಇತಿಹಾಸ ಪ್ರಸಿದ್ಧ ಶೈಖುನಾ ಅಬ್ದುಲ್‌ಖಾದಿರ್‌ ಷಾ (ಖ.ಸಿ.) ಮತ್ತು ಶುಹದಾಗಳ ಹೆಸರಿನಲ್ಲಿ 3 ವರ್ಷಗಳಿಗೊಮ್ಮೆ ನಡೆಸುತ್ತಿರುವ ಉರೂಸ್‌ ಸಮಾರಂಭಕ್ಕಾಗಿ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿತ್ತು. ಧಾರ್ಮಿಕ ವಿದ್ವಾಂಸರನ್ನು ಹಾಗೂ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ಜಿಲ್ಲಾಡಳಿತ ನಿರ್ದೇಶನ ನೀಡಿರುವುದರಿಂದ ನಾವು ಸಮಾರಂಭವನ್ನು ಮುಂದೂಡಿದ್ದೇವೆ. ಕೊರೊನಾ ಸಮಸ್ಯೆ ಬಗೆಹರಿದ ಮೇಲೆ ಉರೂಸ್‌ ನಡೆಸುವ ದಿನಾಂಕ ಪ್ರಕಟಿಸಲಾಗುವುದು ಎಂದರು. ಸುನ್ನೀ ಮ್ಯಾನೇಜ್‌ಮೆಂಟ್‌ ಕಡಬ ವಲಯದ ಅಧ್ಯಕ್ಷ ಖಾದರ್‌ ಸಾಹೇಬ್‌ ಕಲ್ಲುಗುಡ್ಡೆ, ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಫೈಝಲ್‌ ಎಸ್‌.ಇ.ಎಸ್‌., ಉಪಾಧ್ಯಕ್ಷ ಆದಂ ಕುಂಡೋಳಿ, ಜತೆ ಕಾರ್ಯದರ್ಶಿ ಇಬ್ರಾಹಿಂ ಕೋಡಿಬೈಲು, ಶುಕೂರ್‌ ಸಾಹೇಬ್‌ ಅಡ್ಡಗದ್ದೆ ಉಪಸ್ಥಿತರಿದ್ದರು.

ಎಣ್ಮೂರು: ವಿಶೇಷ ಪ್ರಾರ್ಥನೆ
ಬೆಳ್ಳಾರೆ: ತುಳುನಾಡಿನ ಐತಿಹಾಸಿಕ ಕಾರಣಿಕ ಕ್ಷೇತ್ರ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ಸಂಕ್ರಮಣ ಪ್ರಯುಕ್ತ ವಿಶೇಷ ತಂಬಿಲ ಸೇವೆ, ದರ್ಶನ ಸೇವೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಎಪ್ರಿಲ್‌ನಲ್ಲಿ ಬೈದ್ಯರುಗಳ ನೇಮ ನಡೆಯಲಿರುವುದರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಆನುವಂಶಿಕ ಆಡಳಿತಗಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಎನ್‌.ಜಿ. ಲೋಕನಾಥ ರೈ, ಸುಜಿತ್‌ ರೈ ಪಟ್ಟೆ, ಕುಳೈತೋಡಿ ಜಗನ್ನಾಥ ರೈ ಉಪಸ್ಥಿತರಿದ್ದರು. ಕೊರೊನಾ ವೈರಸ್‌ನಿಂದ ಭಕ್ತರನ್ನು ಕಾಪಾಡುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ ರದ್ದು
ಶ್ರೀ ಪೆರ್ಣೆ ಮುಚ್ಚಿಲೋಟು ಭಗವತೀ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮ ಕಲಶ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಹಸುರುವಾಣಿ ಮೆರವಣಿಗೆಗೆ ಸಿಂಗಾರಿ ಮೇಳ, ಕುಣಿತ ಭಜನೆ ಮತ್ತು ಇತರ ಘೋಷಗಳನ್ನು ಬಳಸದಂತೆ, ಮೆರವಣಿಗೆ ಕ್ಷೇತ್ರದ ಹತ್ತಿರದ ದ್ವಾರದಿಂದ ಬಂದು ಪ್ರದಕ್ಷಿಣೆ ಹಾಕುವುದೆಂದೂ, ಭಜನೆಯೊಂದಿಗೆ ಸರಳವಾಗಿ ಎಲ್ಲ ಧಾರ್ಮಿಕ ವಿಧಿ, ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ನಡೆಸುವುದೆಂದೂ ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ.

ಸಭೆ, ಸಾಂಸ್ಕೃತಿಕ ವೈವಿಧ್ಯ ರದ್ದು
ಪುತ್ತೂರು: ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಾಲಯದ ಜಾತ್ರೆ ಅಂಗವಾಗಿ ಮಾ. 15 ಹಾಗೂ 16ರಂದು ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭೆಯನ್ನು ರದ್ದುಗೊಳಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರೆ ಸಮಿತಿ ಅಧ್ಯಕ್ಷ ಸುಂದರ ಗೌಡ ನಡುಬೈಲು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಹೇಶ್ಚಂದ್ರ ಸಾಲ್ಯಾನ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

accident

Vitla: ರಿಕ್ಷಾ- ಬೈಕ್‌ ಢಿಕ್ಕಿ; ಮೂವರಿಗೆ ಗಾಯ

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.