Forest Department ಸಿಬಂದಿ ಅಟ್ಟಿದಂತೆ ಊರಿಂದೂರಿಗೆ ಓಡುವ ಕಾಡಾನೆ!
ವಾರದ ಹಿಂದೆ ಇದ್ದದ್ದು ಒಂದು; ಈಗ ಜತೆಯಾಗಿದೆ ಇನ್ನೊಂದು!
Team Udayavani, Jun 11, 2024, 11:28 PM IST
ಪುತ್ತೂರು: ವಾರದ ಹಿಂದೆ ಕೇರಳದ ಪರಪ್ಪೆ ಅರಣ್ಯ ದಿಂದ ಕೊಳ್ತಿಗೆ ಗ್ರಾಮದ ರಬ್ಬರ್ ತೋಟಕ್ಕೆ ಕಾಲಿಟ್ಟಿದ್ದ ಆನೆಯು ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸುತ್ತಿದ್ದು, ಮಂಗಳವಾರ ಬೆಳ್ಳಿಪ್ಪಾಡಿ ಗ್ರಾಮ ದಲ್ಲಿ ಕಾಣಿಸಿಕೊಂಡಿದೆ.
ಕೊಳ್ತಿಗೆ ಗ್ರಾಮದ ರಬ್ಬರ್ ತೋಟದಲ್ಲಿ ಗದ್ದಲ ಎಬ್ಬಿಸಿದ ಕಾಡಾನೆಯನ್ನು ಅರಣ್ಯ ಇಲಾಖೆ
ಅಲ್ಲಿಂದ ಅಟ್ಟುವಲ್ಲಿ ಯಶಸ್ವಿಯಾ ಗಿತ್ತು. ಬಳಿಕ ಸವಣೂರು ಗ್ರಾಮದ ಪಾಲ್ತಾಡಿ, ಕುಮಾರಮಂಗಲ, ಪುಣcಪ್ಪಾಡಿ ಪ್ರದೇಶದಲ್ಲಿ ಕಾಣಿಸಿ ಕೊಂಡು ತೋಟದ ಬೆಳೆಗಳನ್ನು ಹಾನಿ ಮಾಡಿತ್ತು. ಬಳಿಕ ಕೆಯ್ಯೂರು ಗ್ರಾಮದ ತೆಗ್ಗು, ಓಲೆಮುಂಡೋವು ಪರಿಸರದಲ್ಲಿ ಕೃಷಿ ಹಾನಿ ಮಾಡಿತ್ತು. ಅರಣ್ಯ ಇಲಾಖೆ ಸಿಬಂದಿ ಅಲ್ಲಿಂದಲೂ ಅಟ್ಟಿದ್ದರು. ಅನಂತರ ಸವಣೂರು ಗ್ರಾಮದ ಪುಣcಪ್ಪಾಡಿಯಲ್ಲಿ , ನರಿಮೊಗರು ಗ್ರಾಮದ ವೀರಮಂಗಲ, ಶಾಂತಿಗೋಡಿನ ಗೇರು ಅಭಿವೃದ್ಧಿ ಮತ್ತು ಸಂಶೋಧನ ಕೇಂದ್ರದ ಗೇರು ತೋಪಿನೊಳಗೆ ಒಂದು ರಾತ್ರಿ ಕಳೆದಿದೆ.
ಹಾಲಿ, ಮಾಜಿ ಶಾಸಕರ ಭೇಟಿ: ಶಾಸಕ ಅಶೋಕ್ ಕುಮಾರ್‌ರೈ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ತೀವ್ರಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.
ಒಂದರ ಜತೆಗೆ ಇನ್ನೊಂದು!
ಜೂ. 11ರ ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿಯ ತೋಟದಲ್ಲಿ 2 ಆನೆಗಳು ಕಂಡು ಬಂದಿವೆ. ಇನ್ನೊಂದು ಆನೆ ಯಾವ ಭಾಗದಿಂದ ಸೇರಿಕೊಂಡಿದೆ ಅನ್ನುವ ಬಗ್ಗೆ ಇಲಾಖೆ ಪರಿಶೀಲನೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು
Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.