“ಮಠದ ಸಾಮಾಜಿಕ ಸೇವೆಯನ್ನು ಅಕ್ಷರ ರೂಪಕ್ಕಿಳಿಸಿದ ಕಾರ್ಯ ಸ್ಮರಣೀಯ’
Team Udayavani, Mar 24, 2020, 12:40 AM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಮಠಕ್ಕೆ ನೂರಾರು ವರ್ಷಗಳ ದೀರ್ಘ ಪರಂಪರೆಯಿದೆ. ಮಠವು ತನ್ನದೇ ಜವಾಬ್ದಾರಿಯೊಂದಿಗೆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಸೇವೆಯೇ ಮಠದ ಉದ್ದೇಶ. ಇದನ್ನು ಗುರುತಿಸಿ ಮಣಿಪಾಲದ “ತರಂಗ’ ವಾರಪತ್ರಿಕೆಯು ತನ್ನ ಓದುಗರಿಗಾಗಿ ಮಠದ ಸಮಾಜಮುಖೀ ಕಾರ್ಯಗಳ ವಿಶೇಷ ಸಂಚಿಕೆಯ ಕೊಡುಗೆ ನೀಡುತ್ತಿದೆ. ಮಠದ ಸಮಾಜಮುಖೀ ಸೇವೆಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಹೊತ್ತಗೆ ರೂಪದಲ್ಲಿ ಹೊರತಂದ “ತರಂಗ’ ಬಳಗದ ಸೇವೆ ಸ್ಮರಣೀಯ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.
ಅವರು ಶ್ರೀ ಸುಬ್ರಹ್ಮಣ್ಯ ಮಠದಲ್ಲಿ “ತರಂಗ’ ವಾರಪತ್ರಿಕೆ ಹೊರತಂದಿರುವ “ಸುಪ್ರಸನ್ನ’ ಪುಸ್ತಕವನ್ನು ಸೋಮವಾರ ಮಠದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರ ನೇತೃತ್ವದಲ್ಲಿ “ತರಂಗ’ ಬಳಗವು ಸಮಾಜಕ್ಕೆ ಉತ್ತಮ ಸೇವೆ ಹಾಗೂ ಕೊಡುಗೆಗಳನ್ನು ನೀಡುತ್ತ ಬಂದಿದೆ. ಅದರಂತೆ ಮಠದ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ “ಸುಪ್ರಸನ್ನ’ ಎಂಬ ಸುಂದರ ಸಂಚಿಕೆಯೊಂದರ ಮೂಲಕ ಓದುಗರಿಗೆ ನೀಡುತ್ತಿರುವುದು ತುಂಬ ಸಂತಸ ತಂದಿದೆ. ಮಠದ ಸೇವೆ, ಸಾಧನೆಗಳು ಸಮಾಜಕ್ಕೆ ಪರಿಚಯಿಸಿರುವುದು ಉನ್ನತ ಪ್ರಯತ್ನವಾಗಿದೆ. ಅದಕ್ಕಾಗಿ ಬಳಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ದೇಶಕ್ಕೆ ಅಂಟಿದ ಸೋಂಕು ದೂರವಾಗಲಿ
ಕೊರೊನಾ ವೈರಸ್‌ನಿಂದ ಇಡೀ ಪ್ರಪಂಚ ತಲ್ಲಣ ಗೊಂಡಿದೆ. ಸಾಮೂಹಿಕ ಸಹಭಾಗಿತ್ವದ ಮೂಲಕ ಸೋಂಕನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು. ಇಂತಹ ಹೊತ್ತಿನಲ್ಲಿ ಸಾತ್ವಿಕ ಗುಣಗಳ ಜ್ಞಾನಕ್ಕೆ ಪೂರಕವಾದ ಮಠದ ಸಂಚಿಕೆಯೂ ಹೊರಬರುತ್ತಿದೆ. ಪುಸ್ತಕ ಓದುವುದರ ಮೂಲಕ ಧಾರ್ಮಿಕ ಪ್ರಜ್ಞೆ ವೃದ್ಧಿಯಾಗಲಿ, ದೇಶಕ್ಕೆ ಅಂಟಿದ ಸೋಂಕು ದೂರವಾಗಲಿ ಎಂದು ಶ್ರೀಪಾದರು ಆಶಯ ವ್ಯಕ್ತಪಡಿಸಿದರು. ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಷ, ಉದ್ಯಮಿ, ಕಲಾವಿದ ಯಜ್ಞೆಶ್ ಆಚಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.