ಚೆಂಡೆ ನಾದ ಪಸರಿಸಲಿರುವ ವನಿತೆಯರು
Team Udayavani, Jul 14, 2019, 5:00 AM IST
ಸುಳ್ಯ : ಕೇರಳ ಚೆಂಡೆಗೆ ತನ್ನದೇ ಆದ ಛಾಪು, ವೈಶಿಷ್ಟé ಇದೆ. ಅದರಲ್ಲೂ ಚೆಂಡೆ ಪ್ರದರ್ಶನದಲ್ಲಿ ಭಾಗವಹಿಸುವವರ ಪೈಕಿ ಪುರುಷರ ಸಂಖ್ಯೆಯೇ ಹೆಚ್ಚು. ಇಲ್ಲೊಂದು ಮಹಿಳಾ ತಂಡ ಚೆಂಡೆಯ ನಾದ ನಿನಾದವನ್ನು ಹತ್ತೂರಿಗೆ ಪಸರಿಸಲು ಉತ್ಸುಕವಾಗಿದೆ. ಬಾಳಿಲ – ಮುಪ್ಪೇರಿಯಾ ದಲ್ಲಿ ತಾಲೂಕಿನ ಪ್ರಥಮ ಮಹಿಳಾ ಸಿಂಗಾರಿ ಮೇಳ ರಂಗಪ್ರವೇಶಕ್ಕೆ ಅಣಿಯಾಗಿದೆ!
ಕೇರಳ ಚೆಂಡೆ ಮೇಳದಲ್ಲಿ ಸಿಂಗಾರಿ ಮೇಳವೂ ಪ್ರಸಿದ್ಧಿ ಹೊಂದಿದೆ. ಧಾರ್ಮಿಕ ಕಾರ್ಯಕ್ರಮದ ಹಸುರು ಹೊರೆಕಾಣಿಕೆ ಮೆರವಣಿಗೆ, ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ವಿಶೇಷ ಆಕರ್ಷಣೆಯಾಗಿ ಮೊದಲಾದ ಸಂದರ್ಭಗಳಲ್ಲಿ ಸಿಂಗಾರಿ ಮೇಳದ ಚೆಂಡೆಯ ಸದ್ದು ಮೊಳಗುತ್ತದೆ. ಕುಣಿತವೂ ಜತೆಗೂಡುತ್ತದೆ. ಕರಾವಳಿ ಭಾಗದ ಸಮಾ ರಂಭಗಳಲ್ಲಿ ಹೆಚ್ಚಾಗಿ ಕೇರಳಿಗರು ಚೆಂಡೆ ಮೇಳ ಪ್ರದರ್ಶಿಸುತ್ತಾರೆ. ಇದೀಗ ಮಹಿಳಾ ತಂಡವೊಂದು ಹತ್ತೂರು ಸುತ್ತಿ ಚೆಂಡೆ ಸದ್ದು ಮೊಳಗಿಸಲು ಸಜ್ಜಾಗಿದೆ.
ಮಹಿಳಾ ತಂಡ
ಒಟ್ಟು 15 ಮಹಿಳೆ ಯರು ಮತ್ತು 13 ವಿದ್ಯಾ ರ್ಥಿನಿಯರು ತಂಡದಲ್ಲಿ ಇದ್ದಾರೆ. ಚೆಂಡೆ, ಡೋಲು, ತಾಳ ಮೂರು ವಿಭಾಗಗಳಲ್ಲಿ ಈ 28 ಮಂದಿ ಪ್ರದರ್ಶನ ನೀಡಲು ತರಬೇತಿ ಪಡೆದಿದ್ದಾರೆ. ಕೇರಳ ಭಾಗದ ಚೆಂಡೆ ಕಲೆಯ ಪರಿಚಯವಿದ್ದ ಮುಳ್ಳೇರಿಯಾದವರಾದ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ಶಿಕ್ಷಕ ಲೋಕೇಶ್ ಬೆಳ್ಳಿಗೆ ಎರಡು ವರ್ಷಗಳ ಹಿಂದೆ ಬಾಳಿಲದಲ್ಲಿ ಪುರುಷರ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ತಂಡ ಸ್ಥಾಪಿಸಿದ್ದರು. ಈ ತಂಡವೀಗ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅದೇ ತಂಡದ ಸದಸ್ಯರು ಮಹಿಳಾ ತಂಡಕ್ಕೆ ತರಬೇತಿ ನೀಡಿದ್ದಾರೆ.
ಯಾರ್ಯಾರು ಇದ್ದಾರೆ..?
ಈ ತಂಡದಲ್ಲಿ 17 ವಯಸ್ಸಿನವರಿಂದ ತೊಡಗಿ 44 ವರ್ಷದ ತನಕದವರು ಇದ್ದಾರೆ. ಬೇರೆ ಬೇರೆ ವೃತ್ತಿ ನಿರತರೂ ತಂಡದ ಸದಸ್ಯರಾಗಿದ್ದಾರೆ. ಚೆೆಂಡೆ ಮತ್ತು ಡೋಲು ವಾದಕರಾಗಿ ತ್ರಿವೇಣಿ ವಿಶ್ವೇಶ್ವರ ಬಾಳಿಲ, ದಿವ್ಯಾ ಪ್ರಭಾಕರ ಮುಪ್ಪೇರ್ಯ, ವನಿತಾ ಸಚಿತ್ ಕಲ್ಮಡ್ಕ, ಕವಿತಾ ಎಣ್ಮೂರು, ರೂಪಾ ಸಾಯಿನಾರಾಯಣ ಕಲ್ಮಡ್ಕ, ಮಮತಾ ಮೂರ್ತಿಕುಮಾರ್ ಅಲೆಕ್ಕಾಡಿ, ಸುನೀತಾ ಜಯಕರ ಎಣ್ಮೂರು, ಸರಿತಾ ಕರುಣಾಕರ ಕಲ್ಮಡ್ಕ, ಲೀಲಾವತಿ ಶಿವಕುಮಾರ್ ಅಲೆಕ್ಕಾಡಿ, ಜಯಶ್ರೀ ಬಾಲಕೃಷ್ಣ ಇಂದ್ರಾಜೆ, ಪುಷ್ಪಾಲತಾ ಮೋಹನ್ ಮುಪ್ಪೇರ್ಯ, ವಿದ್ಯಾರ್ಥಿನಿಯರಾದ ರಕ್ಷಾ ಕಲ್ಮಡ್ಕ, ಅಶ್ವಿನಿ ಕಲ್ಮಡ್ಕ, ಅನುಶ್ರೀ ಕಾಯಾರ, ಸಂಧ್ಯಾ ಮುಪ್ಪೇರ್ಯ ಹಾಗೂ ತಾಳ ವಾದಕರಾಗಿ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಅನ್ವಿತಾ ಬಿ.ಎಂ., ಭವ್ಯಶ್ರೀ ಎಂ., ಲಿಖೀತಾಕುಮಾರಿ ಎಂ, ಹರ್ಷಿತಾ ಕೆ, ಸಜ್ಞ ಬಿ, ನಿಶ್ಮಿತಾ, ಕಾವ್ಯ ಡಿ, ಸ್ವಸ್ತಿಕಾ ಬಿ, ಮೇಘಾ ಎಂ.ಬಿ., ದೀಪಿಕಾ ಪಿ.ಎಸ್., ವಿದ್ಯಾ ಬಿ., ದಿವ್ಯಾ ಬಿ, ವರ್ಷಾ ಬಿ. ಅವರು ತಂಡದಲ್ಲಿದ್ದಾರೆ. ತಂಡ ಸಿದ್ಧಗೊಳಿಸಲು ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಪುರುಷರ ತಂಡದ ರೂವಾರಿ ಲೋಕೇಶ ಬೆಳ್ಳಿಗ್ಗೆ, ಸದಸ್ಯರಾದ ಕರುಣಾಕರ ಮುಪ್ಪೇರ್ಯ, ರವಿಪ್ರಕಾಶ್ ಮುಪ್ಪೇರ್ಯ, ರಘುರಾಮ ಕೋಟೆಬನ, ರಮೇಶ ಮುಪ್ಪೇರ್ಯ, ಚಂದ್ರಹಾಸ ಮಣಿಯಾಣಿ ಅವರು ತರಬೇತಿ ನೀಡಿದರು.
ಮೂರು ತಿಂಗಳು ತರಬೇತಿ
ಮಾ. 31ರಿಂದ ಮೂರು ತಿಂಗಳು ಬಾಳಿಲ ಹೈಸ್ಕೂಲಿನಲ್ಲಿ ತರಬೇತಿ ನಡೆಯಿತು. ಎಪ್ರಿಲ್, ಮೇ ಎರಡು ತಿಂಗಳು ಶನಿವಾರ ಹೊರತುಪಡಿಸಿ ಉಳಿದ ದಿನ ಸಂಜೆ ಹೊತ್ತು ತರಬೇತಿ ನೀಡಲಾಯಿತು. ಆರಂಭದಲ್ಲಿ ಮರದ ತುಂಡು ಬಳಸಿ, ಕಲ್ಲಿಗೆ ಬಡಿದು ತರಬೇತಿ, ಜೂನ್‌ನಲ್ಲಿ ಚೆಂಡೆ ಬಳಸಿ ಅಭ್ಯಾಸ ಮಾಡಿತ್ತು. ಇದೀಗ ವಿದ್ಯೆ ಕಲಿತುರಂಗಪ್ರವೇಶಕ್ಕೆ ತಂಡ ಸಿದ್ದವಾಗಿದೆ.
ಹೊಸ ಪ್ರಯತ್ನ
ಸತತ ಅಭ್ಯಾಸದ ಪರಿಣಾಮ ಚೆಂಡೆ, ಡೋಲು, ತಾಳ ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರಲು ಮಹಿಳಾ ತಂಡ ಸಿದ್ಧವಾಗಿದೆ. ಮಹಿಳಾ ತಂಡ ಕಟ್ಟಲು ಅನೇಕರು ಪ್ರೋತ್ಸಾಹ ನೀಡಿರುವುದು ಸ್ಮರಣೀಯ. ಸಿಂಗಾರಿ ಮೇಳ ಪುರುಷರ ತಂಡದ ಸದಸ್ಯರು ತರಬೇತಿ ನೀಡಿದ್ದಾರೆ. ಸಿಂಗಾರಿ ಮೇಳ ಮಹಿಳಾ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ಅವಕಾಶ ತೆರೆದಿಟ್ಟಿದೆ.
– ಅಶ್ವಿನಿ ಕಲ್ಮಡ್ಕ ಬ್ಯಾಂಕ್ ಉದ್ಯೋಗಿ, ತಂಡದ ಸದಸ್ಯೆ
ಪ್ರಥಮ ಮಹಿಳಾ ತಂಡ
ಬಾಳಿಲ-ಮುಪ್ಪೇರಿಯಾದಲ್ಲಿ ಪುರುಷರ ಸಿಂಗಾರಿ ಮೇಳ ತಂಡ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರು ತರಬೇತಿ ಪಡೆದು ತಂಡ ರಚಿಸುವ ಬಗ್ಗೆ ನನ್ನ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮೂರು ತಿಂಗಳ ನಿರಂತರ ತರಬೇತಿ ಫಲವಾಗಿ ತಂಡ ಸಿದ್ದಗೊಂಡಿದೆ. ಜು. 14 ರಂದು ರಂಗ್ರಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ.
– ಲೋಕೇಶ್ ಬೆಳ್ಳಿಗ್ಗೆ
ಮುಖ್ಯ ತರಬೇತುದಾರ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.