ಕಾಡಾನೆ ತಡೆಗೆ ಜೇನು ಪೆಟ್ಟಿಗೆ ಪ್ರಯೋಗ ಬಹುತೇಕ ಯಶಸ್ವಿ
Team Udayavani, Jul 24, 2023, 7:43 AM IST
ಸುಳ್ಯ: ಕೃಷಿ ಭೂಮಿ, ಜನವಸತಿ ಪ್ರದೇಶಗಳತ್ತ ಕಾಡಾನೆ ಲಗ್ಗೆ ಇಡುವುದನ್ನು ತಡೆಯಲು ಸುಳ್ಯ ತಾಲೂಕಿನ ಗಡಿ ಗ್ರಾಮ ಮಂಡೆಕೋಲಿನ ಕೃಷಿಕರೊಬ್ಬರು ಅಳವಡಿಸಿದ ಜೇನು ಪೆಟ್ಟಿಗೆ ಪ್ರಯೋಗ ಬಹುತೇಕ ಯಶಸ್ವಿಯಾಗಿದೆ.
ಆನೆ ಕಂದಕ, ಸೋಲಾರ್ ಬೇಲಿ, ಸಿಮೆಂಟ್ ಸ್ಲಾ éಬ್ ಅಳವಡಿಕೆ ಹೀಗೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿದರೂ ಫಲಕಾರಿಯಾಗದಿದ್ದಾಗ ಕಂಡುಕೊಂಡದ್ದೇ ಜೇನು ಪೆಟ್ಟಿಗೆಯ ಸರಳ ಪ್ರಯೋಗ.
ಮಂಡೆಕೋಲು ಗ್ರಾಮದ ದೇವರಗುಂಡದ ಕೃಷಿಕ ಬಾಲಚಂದ್ರ ಡಿ.ಸಿ. ಅವರ ತೋಟಕ್ಕೆ ಹೆಚ್ಚಾಗಿ ಆನೆಗಳು ನುಗ್ಗುತ್ತಿದ್ದ ದಾರಿಯಲ್ಲಿ 30 ಜೇನು ಪೆಟ್ಟಿಗೆಗಳನ್ನು ಸಮಾನ ಅಂತರದಲ್ಲಿ ಇರಿಸಿ ತಂತಿಯಿಂದ ಜೋಡಿಸಲಾಗಿತ್ತು. ಆನೆಗಳು ಬಂದು ಪೆಟ್ಟಿಗೆಯನ್ನು ಅಥವಾ ತಂತಿಯನ್ನು ಸ್ಪರ್ಶಿಸಿದಾಗ ಏಕಕಾಲಕ್ಕೆ ಎಲ್ಲ ಪೆಟ್ಟಿಗಳು ಅಲುಗುವುದರಿಂದ ಜೇನು ನೊಣಗಳು ಹೊರ ಬಂದು ಗುಂಯ್‌ಗಾಟ್ಟುತ್ತವೆ. ಆ ಸದ್ದಿನಿಂದ ಕಿರಿಕಿರಿ ಅನುಭವಿಸುವ ಆನೆಗಳು ಮತ್ತೆ ಅತ್ತ ಸುಳಿಯಲಾರವು ಎಂಬುದು ಈ ಪ್ರಯೋಗದ ಸಿದ್ಧಾಂತ.
ಪೆಟ್ಟಿಗೆ ಕಂಡು ದಾರಿ
ಬದಲಿಸಿದ ಆನೆಗಳು !
ಕಳೆದ ಜನವರಿಯಲ್ಲಿ ಯೋಜನೆ ಅನುಷ್ಠಾನವಾಗಿತ್ತು. 6 ತಿಂಗಳ ಈ ಅವಧಿಯಲ್ಲಿ ಒಮ್ಮೆ ಮಾತ್ರ ಬೇರೆ ದಾರಿಯ ಮೂಲಕ ಆನೆಗಳು ತೋಟಕ್ಕೆ ನುಗ್ಗಿದ್ದವು. ಮರಳಿ ಹೋಗುವಾಗ ಜೇನು ಪೆಟ್ಟಿಗೆ ಇರುವಲ್ಲಿ ಬಂದರೂ ಹತ್ತಿರ ಬಂದಾಕ್ಷಣ ನಿಂತು ನೋಡಿ ಬೇರೆ ದಾರಿ ಹಿಡಿದಿದ್ದವು. ಇದು ಅಲ್ಲಿ ಅಳವಡಿಸಿರುವ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಆ ಬಳಿಕ ಆನೆಗಳು ಅವರ ತೋಟಕ್ಕೆ ಬಂದಿಲ್ಲ.
ಮಳೆಗಾಲದ ಬಳಿಕ
ಇತರೆಡೆ ಅಳವಡಿಕೆ
ಮಳೆಗಾಲದಲ್ಲಿ ಈ ಭಾಗದಲ್ಲಿ ಆನೆಗಳ ಹಾವಳಿ ಅಧಿಕ. ಈ ಮಳೆಗಾಲ ದಲ್ಲಿ ಆನೆ ಹಾವಳಿ ತಡೆಯುವಲ್ಲಿ ಜೇನು ಪೆಟ್ಟಿಗೆ ಪ್ರಯೋಗ ಎಷ್ಟರ ಮಟ್ಟಿಗೆ ಸಹಕಾರಿಯಾಗುತ್ತದೆ ಎಂಬು ದನ್ನು ನೋಡಿಕೊಂಡು ಮುಂದೆ ಇತರ ತೋಟಗಳಲ್ಲೂ ಈ ವಿಧಾನ ಅಳವಡಿಸುವ ಯೋಚನೆ ಸ್ಥಳೀಯರದ್ದು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವತಿಯಿಂದ ದ.ಕ., ಉಡುಪಿ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೇತೃತ್ವದಲ್ಲಿ ಹನಿಮಿಷನ್ ಯೋಜನೆಯಡಿ 35 ಕೃಷಿಕರಿಗೆ ಜೇನು ಕೃಷಿ ತರಬೇತಿ ನೀಡಿ ಜೇನು ಕೃಷಿ ಮಾಡಲು ತಲಾ 10 ಪೆಟ್ಟಿಗೆಗಳನ್ನು ಜೇನು ಕುಟುಂಬ ಸಮೇತ ವಿತರಿಸಲಾಗಿತ್ತು. ಹೀಗೆ ದೊರೆತ ಜೇನು ಪೆಟ್ಟಿಗೆ ಗಳನ್ನು ದೇವರ ಗುಂಡದಲ್ಲಿ ಅಳವಡಿಸ ಲಾಗಿದೆ. ಪೆಟ್ಟಿಗೆಯಲ್ಲಿ ಉತ್ತಮ ಪ್ರಮಾಣದಲ್ಲಿ ಜೇನು ದೊರೆತಿದ್ದು, ಅಲ್ಪ ಆದಾಯವೂ ಕೈಸೇರಿದೆ.
ಪ್ರಥಮ ಪ್ರಯೋಗ
ನಾಗರಹೊಳೆಯಲ್ಲಿ
ನಾಗರಹೊಳೆ ವ್ಯಾಪ್ತಿಯಲ್ಲಿ ಈ ಪ್ರಯೋಗವನ್ನು ಪೊನ್ನಂಪೇಟೆಯ ಫಾರೆಸ್ಟ್ರಿ ಕಾಲೇಜ್ ವತಿಯಿಂದ ನಡೆ ಸಿದ್ದು, ಅಲ್ಲಿ ಕಾಫಿ ತೋಟಕ್ಕೆ ಆನೆಗಳು ಬರುವುದು ಶೇ. 70ರಷ್ಟು ಕಡಿಮೆಯಾಗಿತ್ತು ಎಂದು ಅಧಿಕಾರಿ ಗಳು ಹೇಳಿದ್ದಾರೆ.
ಜೇನು ಪೆಟ್ಟಿಗೆ ಇರಿಸಿದ ಬಳಿಕ ತೋಟಕ್ಕೆ ಆನೆ ಹಾವಳಿ ಕಡಿಮೆಯಾಗಿದೆ. ಒಮ್ಮೆ ಬೇರೆ ದಾರಿಯ ಮೂಲಕ ಬಂದರೂ ಪೆಟ್ಟಿಗೆ ಸಮೀಪ ಬಂದು ಬೇರೆ ದಾರಿ ಹಿಡಿದಿವೆ. ಮಳೆಗಾಲದಲ್ಲಿ ಆನೆ ಹಾವಳಿಯನ್ನು ನೋಡಿಕೊಂಡು ಈ ದಾರಿಯ ಮೂಲಕ ಬಾರದೆ ಇದ್ದರೆ ಆನೆ ಹಾವಳಿ ಇರುವ ಬೇರೆ ಕಡೆಗಳಲ್ಲೂ ಜೇನು ಪೆಟ್ಟಿಗೆ ಇರಿಸುವ ಬಗ್ಗೆ ಯೋಚನೆ ಮಾಡಿದ್ದೇವೆ.
– ಡಿ.ಸಿ. ಬಾಲಚಂದ್ರ ದೇವರಗುಂಡ,ಕೃಷಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.