ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಕವಿ, ಸಾಹಿತಿ, ರಾಜ್ಯಗಳ ಹೆಸರು
ನಕ್ಸಲರು ಭೇಟಿಯಿತ್ತ ಗ್ರಾಮ ಹಾಡಿಕಲ್ಲು ಸ.ಹಿ.ಪ್ರಾ. ಶಾಲೆಗಿತ್ತು ಮುಚ್ಚುವ ಭೀತಿ; ಶಿಕ್ಷಕರ ವಿನೂತನ ಪ್ರಯೋಗ
Team Udayavani, Dec 12, 2019, 4:05 AM IST
ಸುಬ್ರಹ್ಮಣ್ಯ: ಹಾಡಿಕಲ್ಲು ಊರಿನ ಹೆಸರು 1 ವರ್ಷದ ಹಿಂದೆ ಎರಡು ವಿಷಯಗಳಿಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿತ್ತು. ಈಗ ಮತ್ತೆ ಈ ಊರು ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಇಲ್ಲಿನ ಸರಕಾರಿ ಕನ್ನಡ ಶಾಲೆ ಖ್ಯಾತ ಕನ್ನಡದ ಸಾಹಿತಿ ಹಾಗೂ ಕವಿಗಳಿಂದ ತುಂಬಿದೆ!
ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಸ.ಹಿ.ಪ್ರಾ. ಶಾಲೆಯ ಮಕ್ಕಳಿಗೆ ಕನ್ನಡದ ರಾಷ್ಟ್ರ ಕವಿ ಹಾಗೂ ಸಾಹಿತಿಗಳ ವಿವಿಧ ಹೆಸರುಗಳನ್ನು ಇಡಲಾಗಿದೆ. ವಿದ್ಯಾಥಿಗಳಿಗೆ ಸಾಹಿತಿಗಳ ಮತ್ತು ಕವಿಗಳ ಹೆಸರಿಡುವ ಮೂಲಕ ಇಲ್ಲಿನ ಶಿಕ್ಷಕರು ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುತ್ತಿದ್ದಾರೆ. ಪುಟಾಣಿಗಳನ್ನು ಸಾಹಿತಿಗಳ ಹೆಸರಲ್ಲಿ ಇತರರು ಕರೆದು ಎಲ್ಲರ ಬಾಯಲ್ಲಿ ಸಾಹಿತಿಗಳ ಹೆಸರು ಹರಿದಾಡಿ ಸಾಹಿತಿ ಮತ್ತು ಸಾಹಿತ್ಯದ ಕುರಿತು ಅಭಿರುಚಿ ಹೆಚ್ಚಿಸುತ್ತದೆ. ಸ್ವತಃ ವಿದ್ಯಾರ್ಥಿಗಳು, ಆಪ್ತರು ಸಾಹಿತಿಗಳ ಹಿನ್ನೆಲೆ, ಹುಟ್ಟೂರು ಇತ್ಯಾದಿ ಅಂಶಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎನ್ನುವುದು ಶಿಕ್ಷಕರ ಉದ್ದೇಶ.
ಅಷ್ಟೆ ಅಲ್ಲ, ವಿದ್ಯಾರ್ಥಿಗಳಿಗೆ ವಿವಿಧ ರಾಜ್ಯಗಳ ಹೆಸರುಗಳನ್ನು ಇರಿಸಲಾಗಿದೆ. ಪ್ರತಿ ದಿನ ಪ್ರಾರ್ಥನೆ ವೇಳೆ ಹೆಸರಿನ ರಾಜ್ಯಗಳ ವಿಶೇಷತೆಗಳನ್ನು ಶಿಕ್ಷಕರು ವಿದ್ಯಾರ್ಥಿಗಳ ಮೂಲಕ ಹೇಳಿಸುತ್ತಿದ್ದಾರೆ. ಕಾಡಿನೊಳಗಿನ ಪುಟ್ಟ ಹಳ್ಳಿ ಸರಕಾರಿ ಶಾಲೆಯಲ್ಲಿ ಸಾಹಿತಿಗಳ, ಕವಿಗಳ ಪರಿಸರ ಪಾಠ, ರಾಜ್ಯಗಳ ವಿಶೇಷತೆಗಳ ಅರಿವಿನ ಅಭಿಯಾನ ನಡೆಸುತ್ತಿರುವ ಶಿಕ್ಷಕ ಪ್ರಸಾದ್ ಅವರ ಕಾರ್ಯ ಮಾದರಿ ಎನಿಸಿದೆ.
ಶಾಲೆ ಉಳಿಸುವ ಪ್ರಯತ್ನ
ಹಾಡಿಕಲ್ಲು ಪೂರ್ಣ ನಾಗರಿಕತೆಗೆ ತೆರೆದುಕೊಂಡಿಲ್ಲದ ಊರಿದು. ಇಂದಿಗೂ ಕಾಲ್ನಡಿಗೆ ಇಲ್ಲವೇ ಖಾಸಗಿ ವಾಹನಗಳ ಮೂಲಕವೇ ಓಡಾಡುತ್ತಿರುವ ಗ್ರಾಮಸ್ಥರು. ಶಾಲೆಯಿದ್ದ ಊರಿಗೆ ಕಳೆದ ವರ್ಷ ಶಂಕಿತ ನಕ್ಸಲರು ಬಂದಿದ್ದರು. ಅದೇ ವರ್ಷ ಶಾಲೆ ಯಲ್ಲಿ ಮಕ್ಕಳಿಲ್ಲದೆ ಮುಚ್ಚುವ ಭೀತಿಯೂ ಎದುರಾಗಿತ್ತು. ಅಂತಹ ಶಾಲೆಯನ್ನು ಉಳಿಸುವ ಪ್ರಯತ್ನಕ್ಕೆ ಗ್ರಾಮಸ್ಥರು ಮುಂದಾ ಗಿದ್ದರು. ಈಗ ಶಿಕ್ಷಕರ ಪ್ರಯೋಗ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಂತೆ ಮಾಡಿದೆ.
ಗೊಂಡಾರಣ್ಯದ ನಡುವಿರುವ ಹಾಡಿಕಲ್ಲಿನಲ್ಲಿ 1978ರಲ್ಲಿ ಸ.ಕಿ.ಪ್ರಾ. ಶಾಲೆ ನಿರ್ಮಾಣಗೊಂಡಿತ್ತು. ರಸ್ತೆ, ವಾಹನ ವ್ಯವಸ್ಥೆ ಇಲ್ಲದೇ ಇರುವಾಗ ಕಾಲ ಬುಡದಲ್ಲೇ ಪ್ರಾಥಮಿಕ ಶಿಕ್ಷಣ ದೊರೆಯಲು ಈ ಶಾಲೆ ಅವಕಾಶ ಮಾಡಿಕೊಟ್ಟಿತ್ತು. ಒಂದರಿಂದ ಐದನೇ ತರಗತಿ ತನಕ ಇರುವ ಈ ಸರಕಾರಿ ಶಾಲೆಯಲ್ಲಿ ಈಗಿರುವ ಮಕ್ಕಳ ಸಂಖ್ಯೆ 7. ಪ್ರತಿಯೊಬ್ಬರಿಗೂ ಕುವೆಂಪು, ದ.ರಾ ಬೇಂದ್ರೆ, ಪಂಪಾ, ಚಂದ್ರಶೇಖರ ಕಂಬಾರ, ಅಪರ್ಣಾ, ತ್ರಿವೇಣಿ ಹೀಗೆ ಸಾಹಿತಿಗಳ ಹೆಸರಿಡಲಾಗಿದೆ. ವಿವಿಧ ರಾಜ್ಯಗಳ ಹೆಸರನ್ನು ಇರಿಸಿ ಕರೆಯಲಾಗುತ್ತಿದೆ. ಓರ್ವ ಖಾಯಂ, ಗೌರವ ಶಿಕ್ಷಕಿ ಸೇರಿ ಇಬ್ಬರು ಶಿಕ್ಷಕರಿದ್ದಾರೆ.
“ಇಲ್ಲ’ಗಳ ಸವಾಲು
ತಾಲೂಕು ಕೇಂದ್ರದಿಂದ ದೂರದಲ್ಲಿ ಕಾಡಿನ ತಪ್ಪಲಿನಲ್ಲಿ ಇರುವ ಊರಿನಲ್ಲಿ ಈ ಶಾಲೆ ಇದೆ. ಇಲ್ಲಿಗೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಸಂಪರ್ಕ ಸೇತುವೆಗಳಿಲ್ಲ. ವಿದ್ಯುತ್, ದೂರವಾಣಿ, ಮೊಬೈಲ್ ಯಾವ ವ್ಯವಸ್ಥೆಗಳೂ ಇಲ್ಲ. ನೆಟ್ ವರ್ಕ್ ಸಿಗಬೇಕಿದ್ದರೆ ಗುಡ್ಡ ಹತ್ತಬೇಕು. ಇಲ್ಲವೇ ಐದು ಮೈಲು ದೂರ ನಡೆದು ಸಿಗ್ನಲ್ ಇರುವಲ್ಲಿಗೆ ಬರಬೇಕು. ಇಂತಹ ಸ್ಥಳದಲ್ಲಿ ಇರುವ ಶಾಲೆ ಇಲ್ಲಿಯವರಿಗೆ ಆಪದಾºಂಧವ. ಪ. ಜಾತಿ, ಪ. ಪಂಗಡ ಸಹಿತ ಇತj ವರ್ಗದವರು ಇಲ್ಲಿದ್ದಾರೆ. ಇಂತಹ ಶಾಲೆಯಲ್ಲಿ ಪಾಠ ಹೇಳಲು ಶಿಕ್ಷಕರು ಒಪ್ಪುವುದೇ ಕಷ್ಟ. ಅಂತದರಲ್ಲಿ ವಿನೂತನ ಪ್ರಯೋಗದ ಮೂಲಕ ಕನ್ನಡ ಹಾಗೂ ಶಾಲೆ ಉಳಿವಿಗೆ ಶಿಕ್ಷಕರ ಪ್ರಯತ್ನ ಶ್ಲಾಘನೀಯ. ಇದೇ ಗ್ರಾಮದಲ್ಲಿ ಈ ಹಿಂದೆ ಶಿಕ್ಷಕರ ಗ್ರಾಮ ವಾಸ್ತವ್ಯದ ಪ್ರಸ್ತಾವವಿತ್ತು. ಇದೇ ಗ್ರಾಮದಲ್ಲಿ ಈ ತಿಂಗಳು ಪತ್ರಕರ್ತರ ಗ್ರಾಮ ವಾಸ್ತವ್ಯವೂ ನಡೆಯುತ್ತಿದೆ.
ಜ್ಞಾನ ಹೆಚ್ಚಳ ಪ್ರಯತ್ನ
ಮಕ್ಕಳು ಸ್ವತಃ ಅನುಭವಿಸಿ, ಅರಿತು ಕೊಳ್ಳುವುದಲ್ಲದೆ ಮಕ್ಕಳ ಹೆಸರನ್ನು ಕರೆಯುವ ವ್ಯಕ್ತಿಯಲ್ಲೂ ಕನ್ನಡ ನಾಡು – ನುಡಿ, ಸಾಹಿತ್ಯ, ಕವಿಗಳ ಬಗ್ಗೆ ಅರಿಯಲು ಕಾರಣವಾಗುತ್ತದೆ. ಜ್ಞಾನವೂ ಹೆಚ್ಚುತ್ತದೆ ಎನ್ನುವ ಉದ್ದೇಶದಿಂದ ಈ ಪ್ರಯತ್ನ ಎನ್ನುತ್ತಾರೆ ಶಿಕ್ಷಕ ಪ್ರಸಾದ್.
ಶ್ಲಾಘನೀಯ
ಅಲ್ಲಿನ ಶಿಕ್ಷಕರು ವೈಯಕ್ತಿಕವಾಗಿ ಕನ್ನಡ ಶಾಲೆ ಉಳಿವಿನ ಪ್ರಯತ್ನ ನಡೆಸುತ್ತಿದ್ದಾರೆ. ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಇಂತಹ ಮನಃಸ್ಥಿತಿಯ ಶಿಕ್ಷಕರ ಕೊಡುಗೆ ಇಂದಿನ ಅಗತ್ಯ. ಇದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಲ್ಲದೆ. ಜ್ಞಾನ ಹೆಚ್ಚಿಸಲು ಕಾರಣವಾಗುತ್ತದೆ.
– ಮಹಾದೇವ ಎಸ್.ಪಿ. ಬಿಇಒ, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
Sulya: ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ; ಜಖಂ
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.