ಜಿಲ್ಲೆಯ ರೈಲು ನಿಲ್ದಾಣಗಳು ಅಭಿವೃದ್ಧಿಯತ್ತ
Team Udayavani, Jun 9, 2019, 6:00 AM IST
ಬಂಟ್ವಾಳ: ಜೋಡುಮಾರ್ಗ ರೈಲು ನಿಲ್ದಾಣ ಪ್ಲಾಟ್‌ಫಾರ್ಮ್ ಅಭಿವೃದ್ಧಿ ಕಾಮಗಾರಿ ಶೇ. 60ರಷ್ಟು ಮುಕ್ತಾಯ ಆಗಿದೆ. ಪ್ಲಾಟ್‌ಫಾರ್ಮ್ ಒಂದಕ್ಕೆ 1.57 ಕೋಟಿ ರೂ. ಮತ್ತು ಪ್ಲಾಟ್‌ಫಾರಂ ಎರಡಕ್ಕೆ 2.60 ಕೋಟಿ ರೂ. ಅನುದಾನ ಸಹಿತ ಜಿಲ್ಲೆಯ ಹತ್ತಾರು ರೈಲ್ವೆ ನಿಲ್ದಾಣಗಳು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಸಾರ್ವಜನಿಕರ ಬೇಡಿಕೆಯಂತೆ ಜೂ. 8ರಂದು ಬಿ.ಸಿ. ರೋಡ್ ನಗರದ ಜೋಡುಮಾರ್ಗ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ನಡೆಸಿ ಮಾತನಾಡಿದರು. ನಿಲ್ದಾಣದಿಂದ ಹತ್ತಿರದ ನಗರ ಸಂಪರ್ಕದ ಫೂಟ್‌ಬ್ರಿಡ್ಜ್ ಅವಕಾಶ ಕೊಡಬೇಕೆಂಬ ಬೇಡಿಕೆ ಯಂತೆ 78 ಲಕ್ಷ ರೂ. ಕಾಮಗಾರಿ ಆರಂಭವಾ ಗಿದೆ. ಸ್ಥಳೀಯ ಸಮಸ್ಯೆ ಪರಿಶೀಲಿಸಿ ಕ್ರಮ ಕೈಗೊಳ್ಳ ಲಾಗುತ್ತಿದೆ. ಅಭಿವೃದ್ಧಿ ಸಂದರ್ಭ ಸ್ವಾಭಾವಿಕವಾಗಿ ಹೊಸ ಸಮಸ್ಯೆ ಗಳು ಕಾಣುತ್ತವೆ ಎಂದರು.
ಬಂಟ್ವಾಳ ತಾ| ಕೇಂದ್ರ ಜೋಡು ಮಾರ್ಗ ರೈಲು ನಿಲ್ದಾಣಕ್ಕೆ 5.56 ಕೋ.ರೂ. ನೀಡಿದ್ದಕ್ಕೆ ಕೇಂದ್ರ ಸರಕಾರಕ್ಕೆ ಹಾಗೂ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಡಾ| ವಸಂತ ಬಾಳಿಗಾ, ಮೆಲ್ಕಾರ್ ಶ್ರೀನಿವಾಸ್ ಸಹಿತ ಇತರರು ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಸದರಿಗೆ ಮನವಿ ಮಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ. ಭಟ್, ರಮಾನಾಥ ರಾಯಿ, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಪುರುಷೋತ್ತಮ ಶೆಟ್ಟಿ, ಸ್ಥಳೀಯರಾದ ಫ್ರಾನ್ಸಿಸ್, ರೈಲ್ವೇ ಸೆಕ್ಷನ್ ಎಂಜಿನಿಯರ್ ಕೆ.ಪಿ. ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.
ಬೇಡಿಕೆಗಳು
ಪ್ಲಾಟ್‌ಫಾರ್ಮ್ಗೆ ಮೇಲ್ಛಾವಣಿ, ವಿದ್ಯುದ್ದೀಪ, ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಶುದ್ಧೀಕರಿಸಿದ ಕುಡಿಯುವ ನೀರು, ಅಂಗವಿಕಲರಿಗೆ ವಿಶೇಷ ಶೌಚಗೃಹ, ಹೊಸ ಶೌಚಾಲಯ ಕಾಂಪ್ಲೆಕ್ಸ್ ರಚನೆ, ಪ್ಲಾಟ್‌ಫಾರ್ಮ್ ಸುತ್ತಲೂ ಆವರಣಗೋಡೆ ನಿರ್ಮಾಣ, ಪ್ಲಾಟ್‌ಫಾರ್ಮ್ ನಲ್ಲಿ ಬೆಂಚು, ರೈಲ್ವೇ ಭದ್ರತಾ ವ್ಯವಸ್ಥೆ ಗಟ್ಟಿಗೊಳಿಸುವುದು, ಬಿಡ್ಜ್ ಹಳಿಯಲ್ಲಿ ಕಿತ್ತು ಹೋಗಿರುವ ಶೀಟ್‌ಗಳನ್ನು ಮತ್ತೆ ಹಾಕಿಸುವುದು.ತತ್ಕಾಲ್ ಬುಕ್ಕಿಂಗ್ ಸಂದರ್ಭ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು. ರೈಲ್ವೇ ನಿಲ್ದಾಣದಲ್ಲಿ ಸಮರ್ಪಕವಾಗಿ ಸಿಸಿ ಕೆಮರಾ ಅಳವಡಿಸುವುದು.
ಕಾಮಗಾರಿಗಳಿಗೆ ವೇಗ
ಕಾಮಗಾರಿಗಳಿಗೆ ವೇಗ ನೀಡಬೇಕು. ಸಮಸ್ಯೆ ಪರಿಹಾರ, ಬೇಡಿಕೆಗಳನ್ನು ಪೂರೈಸುವುದು. ಮುಂದಿನ ಆರು ತಿಂಗಳಲ್ಲಿ ಇಲ್ಲಿನ ಕಾಮಗಾರಿ ಮುಕ್ತಾಯ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆೆ. ಜನ ಸಂಚಾರಕ್ಕೆ ತೊಂದರೆ ಆಗದಂತೆ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಕಾಣಬೇಕು.
– ನಳಿನ್ ಕುಮಾರ್ ಕಟೀಲು, ಸಂಸದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.