ಆಸೆಯ ತ್ಯಾಗವೇ ಆನಂದದ ಉಗಮ: ಒಡಿಯೂರು ಶ್ರೀ
ಒಡಿಯೂರು: ಶ್ರೀ ಹನುಮಗಂಗಾ ಪುಷ್ಕರಿಣಿ ಸಮರ್ಪಣೆ; ಧಾರ್ಮಿಕ ಸಭೆ
Team Udayavani, Oct 3, 2019, 3:29 AM IST
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ಹನುಮಗಂಗಾ ಪುಷ್ಕರಿಣಿಯನ್ನು ಲೋಕಾರ್ಪಣೆಗೊಳಿಸಿದರು.
ವಿಟ್ಲ: ಕಲೆಯ ಆರಾಧನೆ ದೇವರ ಆರಾಧನೆಯಾಗಿದೆ. ಕಲಾವಿದರನ್ನು ಗೌರವಿ ಸುವುದೆಂದರೆ ದೇವರಿಗೆ ಪ್ರೀತಿ. ಕಷ್ಟ-ಸುಖ ಶಾಶ್ವತವಲ್ಲ. ಆಸೆಯ ತ್ಯಾಗವೇ ಆನಂದದ ಉಗಮವಾಗಿದೆ. ನವರಾತ್ರಿಯಲ್ಲಿ ಸನಾ ತನ ಮತ್ತು ನೂತನ ಸಮ್ಮಿಳಿತವಾಗಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಶ್ರೀ ಲಲಿತಾ ಪಂಚಮಿ ಮಹೋತ್ಸವ, ಶ್ರೀ ಚಂಡಿಕಾಯಾಗ, ಶ್ರೀ ಹನುಮಗಂಗಾ ಪುಷ್ಕರಿಣಿ ಸಮರ್ಪಣೆ ಕಾರ್ಯಕ್ರಮದ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಸಾಧ್ವಿ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಚಿಕ್ಕಮಗಳೂರು ಬಸವನಹಳ್ಳಿ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ನಂದಿನಿ ಶೆಟ್ಟಿ, ಮುಂಬಯಿಯ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಗುರುದೇವಾನುಗ್ರಹ ಪುರಸ್ಕಾರ
ವಿದುಷಿ ಸಾವಿತ್ರಿ ಈಶ್ವರ ಭಟ್ ಅಮೈ, ಚಿತ್ರನಟ-ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ, ತುಳು ನಾಟಕ ರಚನೆಕಾರ- ನಿರ್ದೇಶಕ- ನಿರ್ಮಾಪಕ ಕೃಷ್ಣ ಜಿ. ಮಂಜೇಶ್ವರ, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ, ಅಬ್ಬಕ್ಕ ಟಿ.ವಿ.ಯ ಆಡಳಿತ ನಿರ್ದೇಶಕ ಶಶಿಧರ ಪೊಯ್ಯತ್ತ ಬೈಲ್, ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರನ್ನು ಸ್ವಾಮೀಜಿಯವರು ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಗೌರವಿಸಿದರು. ಶ್ರೀ ಹನುಮಗಂಗಾ ಪುಷ್ಕರಣಿಯ ಪ್ರಾಯೋಜಕರಾದ ಮುಂಬಯಿಯ ಉದ್ಯಮಿ ವಾಮಯ್ಯ ಬಿ. ಶೆಟ್ಟಿ-ರೇವತಿ ವಾಮಯ್ಯ ಶೆಟ್ಟಿ ದಂಪತಿ, ತಾಂತ್ರಿಕ ನಿರ್ವಹಣೆ ಮಾಡಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಶೋಕ್ ಕುಮಾರ್ ಎ. ಅವರನ್ನು ಸ್ವಾಮೀಜಿ ಗೌರವಿಸಿದರು.
ಒಡಿಯೂರು ಶ್ರೀಯವರ ಮಾರ್ಗ ದರ್ಶನದಲ್ಲಿ ಶ್ರೀ ಸಂಸ್ಥಾನದಲ್ಲಿ ನಿರ್ಮಾಣಗೊಂಡ “ಶ್ರೀ ಹನುಮಗಂಗಾ ಪುಷ್ಕರಿಣಿಯನ್ನು ಬೆಳಗ್ಗೆ ಲೋಕಾರ್ಪಣೆ ಗೊಳಿಸಲಾಯಿತು. ಮಧ್ಯಾಹ್ನ ಶ್ರೀ ಚಂಡಿಕಾ ಮಹಾಯಾಗದ ಪೂರ್ಣಾಹುತಿ, ಮಹಾಪೂಜೆ, ಮಹಾಸಂತರ್ಪಣೆ, ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ “ಚಂದ್ರಾವಳಿ ವಿಲಾಸ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಸಂಜೆ ಸಾರ್ವಜನಿಕ ಶ್ರೀ ಸ್ವಯಂವರ ಪಾರ್ವತೀ ಪೂಜೆ, ಅಷ್ಟಾವಧಾನ ಸೇವೆ, ರಾತ್ರಿ ಭದ್ರಕಾಳಿಗೆ ವಿಶೇಷ ಪೂಜೆ ನಡೆಯಿತು.
ಪ್ರಮೀಳಾ ಬಾಕ್ರಬೈಲ್ ಹಾಗೂ ಶೋಭಾ ಬಾಕ್ರಬೈಲ್ ಅವರಿಗೆ ನೆರೆ ಪರಿಹಾರ ವಿತರಿಸಲಾಯಿತು.
ರೇಣುಕಾ ಎಸ್. ಶೆಟ್ಟಿ ಆಶಯಗೀತೆ ಹಾಡಿ, ಯಶವಂತ ವಿಟ್ಲ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ವಂದಿಸಿದರು. ಸಾಯೀಶ್ವರಿ ಪಟ್ಲ, ಒಡಿಯೂರು ಶ್ರೀ ವಿ.ಸೌ.ಸ. ನಿ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ನಿತ್ಯಾನಂದ ಶೆಟ್ಟಿ ಮನವಳಿಕೆ, ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಟಿ., ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾ| ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ಒಡಿಯೂರು ಶ್ರೀ ಗುರುದೇವ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಪ್ರೌಢಶಾಲಾ ಶಿಕ್ಷಕಿ ಸವಿತಾ ಅವರು ಶ್ರೀ ಗುರುದೇವಾನುಗ್ರಹ ಪುರಸ್ಕೃತರ ಪರಿಚಯ ಮಾಡಿದರು.
ಮೊಬೈಲ್ ಕೈಯಲ್ಲಿ, ಮಗು ರಿಕ್ಷಾದಲ್ಲಿ !
ಇಂದು ಹೆತ್ತವರಿಗೆ ಮಕ್ಕಳಿಗಿಂತ ಮೊಬೈಲ್ ಹೆಚ್ಚು ಪ್ರಿಯವಾಗಿದೆ. ರಾತ್ರಿ-ಹಗಲು ಮೊಬೈಲಿನಲ್ಲೇ ಸಮಯ ಕಳೆಯುತ್ತಾರೆ. ಮಕ್ಕಳಿಗೆ ಸಮಯ ನೀಡುತ್ತಿಲ್ಲ. ಇತ್ತೀಚೆಗೆ ಮಗುವಿನೊಂದಿಗೆ ರಿಕ್ಷಾದಲ್ಲಿ ತೆರಳಿದ್ದ ಮಹಿಳೆ ರಿಕ್ಷಾದಿಂದಿಳಿದು ಮೊಬೈಲಲ್ಲಿ ಮಾತನಾಡುತ್ತ ಹೋಗಿದ್ದರು. ಮಗು ರಿಕ್ಷಾದಲ್ಲೇ ಬಾಕಿಯಾಗಿತ್ತು. ರಿಕ್ಷಾ ಚಾಲಕ ಮಗುವನ್ನು ಆಕೆಯ ಕೈಯಲ್ಲಿಟ್ಟು ಹೋದುದರಿಂದ ಅನಾಹುತ ಸಂಭವಿಸಲಿಲ್ಲ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.
ಅಖಂಡ ಭಾರತ
ಸಂತನಿಗೂ ಸಮಾಜದ ಋಣವಿದೆ. ಸನಾತನ ಸಂಸ್ಕೃತಿಯನ್ನು ಉಳಿಸಿದಾಗ ದೇಶ ಬೆಳಗಬಹುದು. ಅದಕ್ಕಾಗಿ ನಾವೆಲ್ಲರೂ ಸಂಸ್ಕೃತಿಯ ವಾರಸುದಾರರಾಗಬೇಕು. ಬದುಕು ಕಲೆಯಾಗಬೇಕು. ಕೌಶಲದಿಂದ ತುಂಬಿರಬೇಕು. ಅಖಂಡ ಭಾರತವನ್ನು ಕಾಣುವಂತಾಗಬೇಕು.
-ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಸಂಸ್ಥಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.