ಪಾಠ ಹೇಳುತ್ತಿದ್ದ ಮೇಷ್ಟ್ರು ಯುದ್ಧ ಪಾಠ ಕಲಿತರು !

Team Udayavani, Mar 7, 2018, 3:09 PM IST

7-March-18.jpg

ಉಪನ್ಯಾಸಕರಾಗಿ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿದರೂ ಅವರಿಗೆ ತೃಪ್ತಿಯಾಗಿರಲಿಲ್ಲ. ತಮ್ಮೊಳಗೆ ನಿರಂತರ ತುಡಿಯುತ್ತಿದ್ದ ದೇಶಸೇವೆಯ ಆಕಾಂಕ್ಷೆಯನ್ನು ತೀರಿಸಿಕೊಳ್ಳಲು ಸೇನೆಗೆ ಸೇರಿದರು. ಈ ಮೂಲಕ ದೇಶಸೇವೆಗೆ ಕಟಿಬದ್ಧರಾದರು. 

ಈಶ್ವರಮಂಗಲ : ಬಾಲ್ಯದಲ್ಲಿ ಸಿಕ್ಕ ಉತ್ತಮ ಮಾರ್ಗದರ್ಶನ, ಆರೆಸ್ಸೆಸ್‌ನ ಶಿಸ್ತಿನ ಪಾಠದಿಂದ ಪ್ರೇರಣೆಗೊಂಡು ಸೇನೆಗೆ ಸೇರಿ ದೇಶಸೇವೆಗೆ ಸಮರ್ಪಿಸಿಕೊಂಡವರು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ವಳಂಕ ನಿವಾಸಿ ಹರಿಕೃಷ್ಣ.

ಕೆ.ವಿ.ದಾಮೋದರ ರಾವ್‌ ಮತ್ತು ಶಶಿಕಲಾ ದಂಪತಿಯ ಪುತ್ರ ಹರಿಕೃಷ್ಣ, ಬರೆಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಜಿರೆ ಎಸ್‌ಡಿಎಂಸಿ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವವಿದ್ಯಾಲಯದಿಂದ ಸಂಸ್ಕೃತ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಳ್ತಂಗಡಿ ಸರಕಾರಿ ಕಾಲೇಜು, ಬಂಟ್ವಾಳ ಎಸ್‌ವಿಎಸ್‌, ಬಸ್ರೂರು ಶ್ರಿ ಶಾರದಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ.

ದೇಶಸೇವೆಯ ತುಡಿತ
ಆರೆಸ್ಸೆಸ್‌ ಶಾಖೆಗೆ ಹೋಗುತ್ತಿದ್ದ ಹರಿಕೃಷ್ಣ ಅವರು, ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದರು. ಆದ್ದರಿಂದ ಸೇನೆಗೆ ಸೇರುವ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರು. ಉಪನ್ಯಾಸಕರಾಗಿದ್ದವರು ಸೇನೆಗೆ ಸೇರಲು ಬಯಸಿ ಮಂಗಳೂರಿನ ಕೂಳೂರಿನಲ್ಲಿ ನಡೆದ ಪರೀಕ್ಷೆಗಳನ್ನು ಎದುರಿಸಿ, ಪ್ರಥಮ ಪ್ರಯತ್ನದಲ್ಲೇ ಸೇನೆಗೆ ಸೇರ್ಪಡೆಯಾದರು. ತರಬೇತಿ ಸಂದರ್ಭದಲ್ಲೇ ಹರಿಕೃಷ್ಣ ಅವರ ಸಾಮರ್ಥ್ಯ ನೋಡಿದ ಮೇಲಧಿಕಾರಿಗಳು ಅವರನ್ನು
ಜಮ್ಮು-ಕಾಶ್ಮೀರದ ಪಟ್ಟಣ್‌ದಲ್ಲಿ ಆರನೇ ಎಂಜಿನಿಯರ್‌ ರೆಜಿಮೆಂಟ್‌ ನಲ್ಲಿ ನಿಯೋಜಿಸಿದರು. ನೇರವಾಗಿ ಜೂನಿಯರ್‌ ಕಮಿಷನ್ಡ್ ಆಫೀಸರ್‌ ಸ್ಥಾನಕ್ಕೆ ಆಯ್ಕೆಯಾದ ಅಗ್ಗಳಿಕೆ ಇವರದ್ದು. 2006ರಿಂದ ಕಾಶ್ಮೀರ, ಕೋಲ್ಕತಾ, ಪಂಜಾಬ್‌ಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಅಸ್ಸಾಂನ ಹಾಥೀಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅವಿಭಕ್ತ ಕುಟುಂಬ
ದಾಮೋದರ್‌ ದಂಪತಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಹರಿಕೃಷ್ಣ. ಅವರ ಪತ್ನಿ ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಪುತ್ರಿಯರಾದ ಹರ್ಷಿತಾ, ಮನ್ವಿತಾ ಎಸ್‌ಡಿಎಂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎರಡನೇ ಪುತ್ರ ಗುರುಪ್ರಸಾದ ಕೆ.ವಿ. ಪುರೋಹಿತರಾಗಿದ್ದು, ಇವರು ಪತ್ನಿ ಪಲ್ಲವಿ, ಪುತ್ರ ಅಪ್ರಮೇಯರೊಂದಿಗಿದ್ದಾರೆ. ಮೂರನೆಯವರಾದ ಪುತ್ರಿ ಪವಿತ್ರಾರವರು ಸುಳ್ಯದ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಳಿಯ ನವೀನ್‌ ಪೌರೋಹಿತ್ಯ ನಡೆಸುತ್ತಿದ್ದಾರೆ. ಇವರಿಗೂ ಇಬ್ಬರು ಮಕ್ಕಳಿದ್ದಾರೆ.

ಮರೆಯದ ನೆನಪುಗಳು
. 2016ರಲ್ಲಿ ಪಠಾಣ್‌ಕೋಟ್‌ ವಾಯುನೆಲೆ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದಾಗ, ನಮ್ಮ ತಂಡ ಅನತಿ ದೂರದಲ್ಲಿತ್ತು. ಈ ವೇಳೆ ಆತಂಕವಾಗಿದ್ದರೂ, ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದೆವು.

„.ಕಾರ್ಯನಿಮಿತ್ತ ಚೀನದ ಗಡಿಪ್ರದೇಶಗಳಾದ ತವಾಂಗ್‌ಗೆ ಭೇಟಿ ನೀಡಿದ್ದೆ. ಇಲ್ಲಿನ ಜದ್ವಂತ್‌ ಘರ್‌ ಯುದ್ಧ ಸ್ಮಾರಕ, ಶೀಲಾಟಾಪ್‌ ನೌರಾಟಾಪ್‌ ರೋಮಾಂಚಕಾರಿ ಹಾಗೂ ಅವಿಸ್ಮರಣೀಯ ಸ್ಥಳಗಳು ಎನ್ನುತ್ತಾರೆ ಹರಿಕೃಷ್ಣ.

ದೇಶಸೇವೆಯಿಂದ ಧನ್ಯ
ರಾಷ್ಟ್ರ ರಕ್ಷಣೆ ಕಾಯಕದಲ್ಲಿ ಸಿಗುವ ಧನ್ಯತೆಯ ಭಾವ ಬೇರೆ ಯಾವ ಉದ್ಯೋಗದಲ್ಲೂ ಸಿಗಲು ಸಾಧ್ಯವಿಲ್ಲ. ಸೈನಿಕನಾಗಿ ಸೇವೆ ಸಲ್ಲಿಸಲು ಎಲ್ಲ ಗುರು-ಹಿರಿಯರ ಆಶೀರ್ವಾದ ಹಾರೈಕೆಯೇ ಕಾರಣ. ಪತ್ನಿಯ ಪ್ರೋತ್ಸಾಹದ ಮಾತುಗಳು ನನ್ನ ಮನೋಬಲ ಹೆಚ್ಚಿಸಿತ್ತು.
– ಹರಿಕೃಷ್ಣ

ದೇಶಸೇವೆಗಿಂತ ಮಿಗಿಲಾದ ಸೇವೆ ಬೇರೊಂದಿಲ್ಲ. ಮಗನ ಸೇವೆಯಿಂದ ನಮಗೆ ತುಂಬಾ ಸಂತೋಷವಾಗಿದೆ. ಮಗನ ಶ್ರೇಯಸ್ಸನ್ನೇ ಬಯಸುತ್ತೇವೆ. ಆತನ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ.
– ಶಶಿಕಲಾ-ದಾಮೋದರ ರಾವ್‌ ಕೆ.ವಿ, ಹೆತ್ತವರು

ದೇಶ ಕಾಯುವ ಸೈನಿಕನ ಪತ್ನಿ ಎಂಬುದಕ್ಕೆ ನನಗೆ ಅತೀವ ಹೆಮ್ಮೆಯಿದೆ. ಶಿಕ್ಷಕಿಯಾಗಿ ನಾನು ಬೋಧನೆ ಮಾಡುವ ವೇಳೆ ವಿದ್ಯಾರ್ಥಿಳಲ್ಲೂ ದೇಶಪ್ರೇಮ ಮೈಗೂಡಿಸಿಕೊಳ್ಳಲು ಹೇಳುತ್ತೇನೆ.
– ಕವಿತಾ ಹರಿಕೃಷ್ಣ, ಪತ್ನಿ

ಮಾಧವ ನಾಯಕ್‌ ಕೆ.

ಟಾಪ್ ನ್ಯೂಸ್

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.