ಬಸ್ ನಿಲ್ದಾಣದ ನೀರಿನ ತೊಟ್ಟಿ , ಚರಂಡಿ ನಿರ್ವಹಣೆಯಿಲ್ಲ
Team Udayavani, Jul 17, 2019, 5:00 AM IST
ಬೆಳ್ತಂಗಡಿ: ತಾ|ನ ಗುರುವಾಯನಕೆರೆ ಸುತ್ತಮುತ್ತ ತ್ಯಾಜ್ಯ ರಾಶಿ ಹೆಚ್ಚಾಗುತ್ತಿರುವುದು ಒಂದೆಡೆ ಯಾದರೆ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ನೀಡಿದ ಕೊಡುಗೆಯ ನೀರಿನ ಫಿಲ್ಟರ್ ನಿರ್ವಹಣೆಯಿಲ್ಲದೆ ಮಾರಕ ರೋಗ ಭೀತಿಯಿದೆ.
ಕುವೆಟ್ಟು ಗ್ರಾ.ಪಂ.ನ ಗುರುವಾಯನಕೆರೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಫಿಲ್ಟರ್ 2012ರಲ್ಲಿ ಅಳವಡಿಸಲಾಗಿತ್ತು. ಅನಂತರದ ದಿನಗಳಲ್ಲಿ ಗ್ರಾ.ಪಂ. ವತಿಯಿಂದ ನೀರು ನೀಡಲಾಗುತ್ತಿದ್ದರೂ ನಿರ್ವಹಣೆ ನಿರ್ಲಕ್ಷಿಸಿದ್ದರಿಂದ ನೀರು ಕಟ್ಟಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಬೇಸಿನ್‌ನಿಂದ ಹುಳಗಳು ಹೊರಬರುತ್ತಿದ್ದು, ಗಬ್ಬು ವಾಸನೆಯಿಂದ ಹತ್ತಿರ ನಿಲ್ಲದಂತ ಪರಿಸ್ಥಿತಿಯಿದೆ. ಬಸ್ ನಿಲ್ದಾಣದಲ್ಲಿ ಸೊಳ್ಳೆ ಕಾಟದಿಂದ ರೋಗ ಭೀತಿ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸಂಬಂಧಪಟ್ಟವರು ನೀರಿನ ತೊಟ್ಟಿ ಪರಿಶೀಲಸಿ ಅದನ್ನು ಸರಿಪಡಿಸಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸಾಧ್ಯವಾಗದಿದ್ದಲ್ಲಿ ಅದನ್ನು ಸ್ಥಳದಿಂದ ತೆರವುಗೊಳಿಸುವುದು ಉತ್ತಮ.
ತೆರೆದ ಚರಂಡಿ
ಅಂಗಡಿ ಮುಂಗಟ್ಟು ಮುಂಭಾಗ ರಸ್ತೆ ಬದಿ ತೆರೆದ ಚರಂಡಿಗಳಿಂದಾಗಿ ತ್ಯಾಜ್ಯ ಸೇರಿಕೊಂಡು ಚರಂಡಿ ಕಟ್ಟಿ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಈಗಾಗಲೇ ಸಂಬಂಧಪಟ್ಟ ಇಲಾಖೆಯಿಂದ ಚರಂಡಿ ದುರಸ್ತಿಪಡಿಸಿದ್ದರೂ ಕೆಲವು ಅಂಗಡಿ ಮುಂಗಟ್ಟು ನವರ ನಿರ್ಲಕ್ಷ್ಯದಿಂದ ಅಂಗಡಿ ಮುಂಭಾಗದ ಕಸ ತೆರವುಗೊಳಿಸದಿರುವುದರಿಂದ ಸಮಸ್ಯೆ ತೀವ್ರವಾಗಿದೆ. ಪ್ರತಿ ಅಂಗಡಿ ಮುಂಭಾಗ ಕಸದ ಬುಟ್ಟಿ ಅಳವಡಿಸಿದಲ್ಲಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಲಿದೆ. ಸ್ವತ್ಛತೆ ಯೆಡೆಗೆ ಸಾರ್ವಜನಿಕರೂ ಮಹತ್ವ ನೀಡಬೇಕಿದೆ.
ಚರಂಡಿಗೆ ಬಿದ್ದು ಗಾಯ
ಪೇಟೆಯ ಪಾಂಡುರಂಗ ಮಂದಿರ ಎದುರುಗಡೆ ಚರಂಡಿಗೆ ಜು.15ರಂದು ಸಂಜೆ ಕೊಜಪಾಡಿಯ ನಿವಾಸಿ ಮಹಿಳೆಯೊಬ್ಬರು ಬಿದ್ದು ಕಾಲಿಗೆ ಗಾಯವಾಗಿತ್ತು. ರಸ್ತೆ ಅಂಚಿನಲ್ಲಿ ಬಸ್ ನಿಲುಗಡೆ ಮಾಡುವುದರಿಂದ ನಡೆದಾಡಲು ಸಮಸ್ಯೆಯಾಗಿ ಪರಿಣಮಿಸಿದೆ. ಈ ಸ್ಥಳದಲ್ಲಿ ಚರಂಡಿಗೆ ಹಾಸುಕಲ್ಲು ಅಳವಡಿಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ.
ಶೀಘ್ರ ಕ್ರಮ
ಕಳೆದ ಬಾರಿ ಆಟೋ ಚಾಲಕರು , ಸ್ಥಳೀಯರ ಸಹಾಯದಿಂದ ನೀರಿನ ತೊಟ್ಟಿ ಸ್ವತ್ಛಗೊಳಿಸಲಾಗಿತ್ತು. ಕೆಟ್ಟು ಹೋಗಿರುವ ವಿಚಾರ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಸ್ವತ್ಛಗೊಳಿಸಲಾಗುವುದು. ಅಂಗಡಿ ಮುಂಭಾಗ ತ್ಯಾಜ್ಯ ಎಸೆದಲ್ಲಿ ನೋಟಿಸ್ ನೀಡಿ ತೆರವಿಗೆ ಸೂಚಿಸಲಾಗುವುದು. ಈಗಾಗಲೇ ತ್ಯಾಜ್ಯ ಸಂಗ್ರಹಣೆಗೆ ಒತ್ತು ನೀಡಲಾಗಿದೆ.
– ಅಶೋಕ್ ಕೋಟ್ಯಾನ್, ಕುವೆಟ್ಟು ಗ್ರಾ.ಪಂ. ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.