ರಸ್ತೆಯನ್ನೇ ನುಂಗಿ ಹಾಕಿದ ರಬ್ಬರ್‌ ತೋಟದ ಕಳೆನಾಶಕ ಬಳ್ಳಿ


Team Udayavani, Jul 10, 2024, 2:16 PM IST

ರಸ್ತೆಯನ್ನೇ ನುಂಗಿ ಹಾಕಿದ ರಬ್ಬರ್‌ ತೋಟದ ಕಳೆನಾಶಕ ಬಳ್ಳಿ

ಪುಂಜಾಲಕಟ್ಟೆ: ರಸ್ತೆ ಬದಿ ಹಚ್ಚ ಹಸಿರಾದ ಬಳ್ಳಿ ಹಬ್ಬಿದ ದೃಶ್ಯಗಳು ಮನಸ್ಸಿಗೆ ಖುಷಿಕೊಟ್ಟರೂ ಈ ಹಸುರು ಬಳ್ಳಿ ಸಿಕ್ಕಾಪಟ್ಟೆ ಬೆಳೆದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ.

ಬಂಟ್ವಾಳ-ಮೂಡುಬಿದಿರೆ ರಾಜ್ಯ ರಸ್ತೆಯ ಬಂಡಸಾಲೆ-ಸೊರ್ನಾಡು ನಡುವೆ ಎರಡು ರಸ್ತೆ ತಿರುವುಗಳಿದ್ದು ಅವುಗಳ ಆರಂಭದಲ್ಲಿ ಎರಡೂ ಕಡೆಯಿಂದ ರಸ್ತೆ ತಿರುವಿನ ಎಚ್ಚರಿಕೆ ಚಿಹ್ನೆಯ ಸೂಚನ ಫಲಕಗಳನ್ನು ಅಳವಡಿಸಲಾಗಿದೆ. ಆದರೆ ರಸ್ತೆ ಪಕ್ಕದಲ್ಲಿರುವ ರಬ್ಬರ್‌ ತೋಟದ ಮಾಲಕರು ಕಳೆ ಬೆಳೆ ತಡೆಯಲು ಬೆಳೆಸಿರುವ ಈ ಬಳ್ಳಿ ರಸ್ತೆ ಬದಿಯುದ್ದಕ್ಕೂ ಹರಡಿ ಸೂಚನ
ಫಲಕದ ಕಂಬದ ಮೇಲೇರಿ ಸೂಚನ ಫಲಕವನ್ನು ಮರೆ ಮಾಡಿದೆ.

ರಸ್ತೆ ಸಂಚಾರದ ವೇಳೆ ಸುರಕ್ಷತೆಗಾಗಿ ರಸ್ತೆ ತಿರುವುಗಳು, ಉಬ್ಬು-ತಗ್ಗುಗಳು,ರಸ್ತೆ ವಿಭಾಜಕಗಳು ಮೊದಲಾದವುಗಳನ್ನು ವಾಹನ ಚಾಲಕರು ಗಮನಿಸಲು ಇಂತಹ ಸೂಚನ ಫಲಕಗಳನ್ನು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಅಳವಡಿಸುತ್ತಾರೆ. ಇಲ್ಲಿ ಇಂತಹ ಸೂಚನ ಫಲಕವನ್ನು ಅಳವಡಿಸಿದ್ದರೂ ಅವುಗಳು ಮಾತ್ರ ವಾಹನ ಚಾಲಕರ ಕಣ್ಣಿಗೆ ಬೀಳುವಂತಿಲ್ಲ !, ಕಾರಣ
ಇಷ್ಟೇ ರಬ್ಬರ್‌ ತೋಟದಲ್ಲಿ ಬೆಳೆಸಿದ ಕಳೆ ನಾಶಕ ಬಳ್ಳಿಗಳು ಎಲ್ಲೆಡೆಯೂ ಹಬ್ಬಿ ಈ ಫಲಕಗಳನ್ನು ಆವರಿಸಿದೆ. ಜತೆಗೆ ಬಳ್ಳಿಗಳು
ರಸ್ತೆ ಬದಿಯಲ್ಲಿ ಆವರಿಸಿ ಪಾದಚಾರಿಗಳಿಗೆ ನಡೆದಾಡಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸವುದರಿಂದ ವಾಹನಗಳು ಸರಾಗವಾಗಿ ಸಾಗಲು ಅನನುಕೂಲವಾಗುತ್ತಿದೆ.

ಜಿಲ್ಲಾ ರಸ್ತೆ, ಗ್ರಾಮೀಣ ರಸ್ತೆ ಬದಿ ರಬ್ಬರ್‌ ತೋಟ ಇರುವ ಕಡೆ ಸಂಚರಿಸುವಾಗ ಕಂಡುಬರುವ ಈ ಬಳ್ಳಿ ಸಸ್ಯ ಜೀವ ವೈವಿಧ್ಯಗಳಿಗೂ ಅಪಾಯಕಾರಿಯಾಗಿದೆ. ರಬ್ಬರ್‌ ಬೆಳೆಯುವಾಗ ಮೊದಲ ಮೂರು ನಾಲ್ಕು ವರ್ಷ ಮಣ್ಣು ಸವಕಳಿ ತಡೆಗೆ ಅಗತ್ಯವೆಂದು ಬೆಳೆಸಿದ ಈ ಬಳ್ಳಿ ಮರ ಬೆಳೆದ ಅನಂತರ ತೋಟದಿಂದ ಹೊರಬಂದು ಇಡೀ ಸಸ್ಯವರ್ಗಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಈ ಬಳ್ಳಿ ಇರುವಲ್ಲಿ ಅದರದ್ದೇ ಸರ್ವಾಧಿಕಾರ.

ಇದು ಬೇರೆ ಯಾವ ಸಸ್ಯವನ್ನೂ ಬೆಳೆಯಲು ಬಿಡದ ಸಾರ್ವಭೌಮ ಎಂದೇ ಹೇಳಬಹುದು. ಮಳೆಗಾಲದಲ್ಲಂತೂ ಅದು ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬಿ ಅಲ್ಲಿನ ಸಸ್ಯಗಳು, ಮರಗಳ ಮೇಲೆ ಏರಿ ಅದರ ಬೆಳವಣಿಗೆಯನ್ನು ಹತ್ತಿಕ್ಕುವ ಮೂಲಕ ಜೀವವೈವಿಧ್ಯಕ್ಕೆ ಕುತ್ತು ತರುತ್ತದೆ. ಸರಕಾರ, ಅರಣ್ಯ ಇಲಾಖೆ, ಪರಿಸರ ಕಳಕಳಿ ಉಳ್ಳವರು ಇದನ್ನು ಗಂಭೀರ ವಿಷಯವಾಗಿ
ಪರಿಗಣಿಸಬೇಕಾಗಿದೆ.

ರಸ್ತೆ ಬದಿ ಇರುವ ಪೊದೆ, ಗಿಡಗಂಟಿಗಳು, ಮರದ ಗೆಲ್ಲುಗಳನ್ನು ಯಾವಾಗಲಾದರೂ ಒಮ್ಮೆ ಕಡಿದು ಸ್ವಚ್ಛಗೊಳಿಸಲಾಗುತ್ತದೆ.
ಆದರೆ ಈ ಬಳ್ಳಿಗಳನ್ನು ಕಡಿದು ವಾಹನ ಸಂಚಾರವನ್ನು ಸುಗಮಗೊಳಿಸುವ ಗೋಜಿಗೆ ಹೋಗುವುದಿಲ್ಲ. ಆದುದರಿಂದ ತಿರುವುಗಳಲ್ಲಿ ಎದುರುಗಡೆಯಿಂದ ಬರುವ ವಾಹನಗಳು ಸರಿಯಾಗಿ ಕಾಣದೆ ಅಪಘಾತವಾಗುವ ಸಂಭವನೀಯತೆ ಇದೆ. ರಸ್ತೆ ಬದಿಯ ಗಿಡಗಂಟಿಗಳನ್ನು ಕಡಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವಲ್ಲಿ ಸಂಬಂಧಿಸಿದ ಇಲಾಖೆ
ಗಮನಕೊಡಬೇಕಾಗಿದೆ.

ಹಾವು ಬದುಕುವುದೇ ಇಲ್ಲ ಎಂದರೆ…
ರಬ್ಬರ್‌ ತೋಟ ಮಾಡಿದವರಲ್ಲಿ ಈ ಜಾತಿಯ ಬಳ್ಳಿ ಇರುವಾಗ ಅದರಲ್ಲಿ ಟ್ಯಾಪಿಂಗ್‌ ಗಾಗಿ ನಸುಕಿನಲ್ಲಿ ಓಡಾಡುವಾಗ ಹಾವು ಸಿಗಲಾರದೇ ಎಂದರೆ ಇಲ್ಲಿ ಹಾವು ಬದುಕುವುದೇ ಇಲ್ಲ ಎನ್ನುತ್ತಾರೆ!. ಸಸ್ಯ, ಹಾವು, ಪ್ರಾಣಿ,ಪಕ್ಷಿ ಮುಂತಾದ ಜೀವ
ವೈವಿಧ್ಯಗಳ ಬದುಕಿಗೆ ಸಂಚಕಾರವಾದ ಜತೆಗೆ ನೈರ್ಮಲ್ಯಕ್ಕೂ ತೊಂದರೆಯಾದ ಈ ಬಳ್ಳಿಯನ್ನು ಸಾರ್ವಜನಿಕ ಭೂಮಿಯಲ್ಲಿ ಬೆಳೆಯಲು ಬಿಡುವುದು ತಪ್ಪು ಎಂದೂ ಹಲವರು ಹೇಳುತ್ತಿದ್ದಾರೆ.

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.