ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ; ಕೃಷಿಕರಲ್ಲಿ ಆತಂಕ

Team Udayavani, Jun 30, 2024, 1:35 AM IST

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ

ಸುಳ್ಯ: ಎಳೆ ಅಡಿಕೆ ಉದುರುವ ಸಮಸ್ಯೆ ತೀವ್ರಗೊಂಡಿದ್ದು, ಇದು ಈ ಬಾರಿಯ ಫಸಲಿನ ಮೇಲೆ ತೀವ್ರ ಪರಿಣಾಮ ಬೀರಲಿದೆ.

ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲೂ ಈ ಸಮಸ್ಯೆ ತೀವ್ರವಾಗಿದೆ. ಮಳೆ ಆರಂಭಗೊಂಡ ಕೆಲವು ದಿನಗಳ ಬಳಿಕ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಈಗಾಗಲೇ ಶೇ.50ರಷ್ಟು ಎಳೆ ಅಡಿಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಅಡಿಕೆ ಕೃಷಿಗೆ ಯಥೇತ್ಛ ನೀರು ಅಗತ್ಯ. ಈ ಬಾರಿಯ ಬೇಸಗೆಯಲ್ಲಿ ಬಿಸಿಲು ತೀವ್ರವಾಗಿದ್ದು, ಹೆಚ್ಚಿನ ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಇದು ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಬೇಸಗೆಯಲ್ಲಿ ಅಡಿಕೆ ಹಿಂಗಾರ ಕರಟುವ ಸಮಸ್ಯೆ ಕಾಣಿಸಿಕೊಂಡಿತ್ತು.

ಬೇಸಗೆಯಲ್ಲಿ ಬಾರೀ ಪ್ರಮಾಣದಲ್ಲಿ ತಾಪಮಾನ ಹೆಚ್ಚಳಗೊಂಡಿತ್ತು. ಜತೆಗೆ ಮೇ ಅಂತ್ಯದವರೆಗೂ ಸರಿಯಾಗಿ ಮಳೆಯಾ ಗಿರಲಿಲ್ಲ. ಬಳಿಕ ಮಳೆ ಆಗಿದ್ದು, ಆಗ ಎಳೆ ಅಡಿಕೆ ಉದುರಲು ಆರಂಭಗೊಂಡಿತ್ತು.

ಮಳೆ ಬಿದ್ದ ಬಳಿಕ ಅಲ್ಪ ಪ್ರಮಾಣದಲ್ಲಿ ಎಳೆ ಅಡಿಕೆ ಉದು ರುವುದು ಕಡಿಮೆಯಾಗಿತ್ತು. ಅನಂತರ ಮಳೆ ಹಾಗೂ ಬಿಸಿಲ ವಾತಾವರಣದಲ್ಲಿ ಉಷ್ಣತೆ ಏರಿಕೆ ಯಾಗಿ ಹಲವೆಡೆ ಎಳೆ ಅಡಿಕೆ ಉದುರುತ್ತಿರುವುದು ಕಂಡು ಬರುತ್ತಿದೆ. ಮಳೆ ಆರಂಭವಾದ ಕೆಲವು ದಿನಗಳಲ್ಲಿ ಮತ್ತೆ ಬಿಸಿಲಿನ ವಾತಾ ವರಣ ಇರುವು ದರಿಂದ ಶಿಲೀಂಧ್ರಗಳು ಎಳೆ ಅಡಿಕೆ ರಸವನ್ನು ಹೀರುವುದರಿಂದ ಅವು ಉದುರುತ್ತವೆ ಎನ್ನುತ್ತಾರೆ ಕೃಷಿಕರು.

ಈಗಾಗಲೇ ಅಡಿಕೆಗೆ ಔಷಧ ಸಿಂಪಡಣೆ ಆರಂಭಿಸಲಾಗಿದೆ. ಸಾಮಾನ್ಯ ವಾಗಿ ಮೊದಲ ಹಂತದಲ್ಲಿ ಅಡಿಕೆ ಫಸಲು ನಿಲ್ಲಲು ಔಷಧ ಸಿಂಪಡಿಸಲಾಗುತ್ತದೆ. ಕೆಲವರು ಪ್ರತಿ ತಿಂಗಳು ಅಥವಾ 2-3 ತಿಂಗಳಿಗೊಮ್ಮೆ ಔಷಧ ಸಿಂಪಡಿಸುತ್ತಾರೆ. ಎಳೆ ಅಡಿಕೆ ಉದುರುವುದನ್ನು ತಡೆ ಯಲೂ ಔಷಧ ಸಿಂಪಡಿಸುತ್ತಿದ್ದಾರೆ. ಇದರಿಂದ ಕೆಲವೆಡೆ ಮಾತ್ರ ಸಮಸ್ಯೆ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ರೈತರು.

ಕೀಟ ರಸ ಹೀರುವುದರಿಂದ ಎಳೆ ಅಡಿಕೆ ಉದುರುತ್ತದೆ. ಮಳೆಗಾಲ ಸಂದರ್ಭದಲ್ಲಿ ಇದು ಅಲ್ಲಲ್ಲಿ ಕಂಡುಬರುತ್ತದೆ. ಔಷಧ ಸಿಂಪಡಣೆ ಮೂಲಕ ನಿಯಂತ್ರಣ ಸಾಧ್ಯವಿದೆ. ಸ್ಪಷ್ಟವಾಗಿ ಯಾವ ಕಾರಣದಿಂದ ಎಳೆ ಅಡಿಕೆ ಉದುರುತ್ತಿದೆ, ಅದಕ್ಕೆ ಯಾವ ಔಷಧ ಮೂಲಕ ನಿಯಂತ್ರಣ ಸಾಧ್ಯ ಎಂಬುದನ್ನು ಸ್ಥಳಕ್ಕೆ ಭೇಟಿ ನೀಡಿ ಅಥವಾ ಉದುರಿದ ಎಳೆ ಅಡಿಕೆಯನ್ನು ಪರಿಶೀಲಿಸಿ ತಿಳಿಯಬಹುದು.
– ಡಾ| ನಾಗರಾಜ್‌ ವಿಜ್ಞಾನಿ, ಸಿ.ಪಿ.ಸಿ.ಐ. ವಿಟ್ಲ

ಟಾಪ್ ನ್ಯೂಸ್

Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ

Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ

1-amr

Army; ಎಲ್ಲ ಸವಾಲುಗಳಿಗೂ ಸೇನೆ ಸನ್ನದ್ಧ: ಜನರಲ್‌ ದ್ವಿವೇದಿ

Udupi ವಾಯ್ಸ ಆಫ್ ಹೀಲಿಂಗ್ಸ್‌: ಸಾಧಕರಿಗೆ ಸಮ್ಮಾನ

Udupi ವಾಯ್ಸ ಆಫ್ ಹೀಲಿಂಗ್ಸ್‌: ಸಾಧಕರಿಗೆ ಸಮ್ಮಾನ

crime (2)

West Bengal; ಮತ್ತೊಂದು ಗುಂಪು ಹತ್ಯೆ: ವಾರದಲ್ಲಿ ಇದು 4ನೇ ಕೇಸ್‌

Punjalkatte ಪಾಂಡವರಕಲ್ಲು: ಅಂಗನವಾಡಿ ಕೇಂದ್ರಕ್ಕೆ ಶೀಟ್‌ ಅಳವಡಿಕೆಗೆ ನಿರ್ಧಾರ

Punjalkatte ಪಾಂಡವರಕಲ್ಲು: ಅಂಗನವಾಡಿ ಕೇಂದ್ರಕ್ಕೆ ಶೀಟ್‌ ಅಳವಡಿಕೆಗೆ ನಿರ್ಧಾರ

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

Sullia 2 ವರ್ಷಗಳ ಹಿಂದೆ ನಡೆದಿದ್ದ ಕಳವು ಆರೋಪಿ ಬಂಧನ

Sullia 2 ವರ್ಷಗಳ ಹಿಂದೆ ನಡೆದಿದ್ದ ಕಳವು ಆರೋಪಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Punjalkatte ಪಾಂಡವರಕಲ್ಲು: ಅಂಗನವಾಡಿ ಕೇಂದ್ರಕ್ಕೆ ಶೀಟ್‌ ಅಳವಡಿಕೆಗೆ ನಿರ್ಧಾರ

Punjalkatte ಪಾಂಡವರಕಲ್ಲು: ಅಂಗನವಾಡಿ ಕೇಂದ್ರಕ್ಕೆ ಶೀಟ್‌ ಅಳವಡಿಕೆಗೆ ನಿರ್ಧಾರ

Sullia 2 ವರ್ಷಗಳ ಹಿಂದೆ ನಡೆದಿದ್ದ ಕಳವು ಆರೋಪಿ ಬಂಧನ

Sullia 2 ವರ್ಷಗಳ ಹಿಂದೆ ನಡೆದಿದ್ದ ಕಳವು ಆರೋಪಿ ಬಂಧನ

Dharmasthala ಅನ್ನದಾನಕ್ಕೆ ಮತ್ತಷ್ಟು ಮಹತ್ವ : ಡಾ| ವೀರೇಂದ್ರ ಹೆಗ್ಗಡೆ

Dharmasthala ಅನ್ನದಾನಕ್ಕೆ ಮತ್ತಷ್ಟು ಮಹತ್ವ : ಡಾ| ವೀರೇಂದ್ರ ಹೆಗ್ಗಡೆ

Vitla: ಲಿಫ್ಟ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳು

Vitla: ಲಿಫ್ಟ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳು

Theft case ಬಡಗಕಜೆಕಾರು: ನಿರ್ಮಾಣ ಹಂತದ ರುದ್ರ ಭೂಮಿಯಿಂದ ಕಳವು

Theft case ಬಡಗಕಜೆಕಾರು: ನಿರ್ಮಾಣ ಹಂತದ ರುದ್ರ ಭೂಮಿಯಿಂದ ಕಳವು

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

1-wewqewq

Abdul Hamid ಕೃತಿ ಬಿಡುಗಡೆ; ವಿಭಿನ್ನತೆಯ ನಡುವೆಯೂ ದೇಶ ಒಗ್ಗಟ್ಟು: ಭಾಗವತ್‌

arrested

POK ರಾವಲ್‌ಕೋಟ್‌ ಜೈಲಿಂದ 18 ಕೈದಿಗಳು ಪರಾರಿ!

court

Defamation:50 ಲಕ್ಷ ನೀಡಲು ಟಿಎಂಸಿ ಸಂಸದ ಗೋಖಲೆ ಗೆ ಆದೇಶ

Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ

Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ

GAS (2)

Commercial ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 30 ರೂ. ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.