ಬಿ.ಸಿ.ರೋಡುನಲ್ಲಿ ಕಳ್ಳತನಕ್ಕೆ ಬೀಳದ ಕಡಿವಾಣ; ಬಸ್ಸೇರುತ್ತಿದ್ದ ಮಹಿಳೆಯ ಚಿನ್ನ ಕಳವು
Team Udayavani, May 23, 2024, 10:43 PM IST
ಬಂಟ್ವಾಳ: ಬಿ.ಸಿ.ರೋಡು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರ್ಸ್, ಮೊಬೈಲ್, ಚಿನ್ನಾಭರಣ ಎಗರಿಸುವ ಪ್ರಕರಣಗಳು ಕಳೆದ ಕೆಲವು ಸಮಯದಿಂದ ನಿರಂತರವಾಗಿದ್ದು, ಗುರುವಾರ ಕೂಡ ಅಂತಹದ್ದೇ ಒಂದು ಪ್ರಕರಣ ನಡೆದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಆದರ್ಶನಗರ ನಿವಾಸಿ ಜಗದೀಶ್ ಅವರ ಪತ್ನಿ ಶಶಿಕಲಾ ಗೋಳ್ತಮಜಲಿನ ನೆಟ್ಲದಲ್ಲಿರುವ ತಾಯಿ ಮನೆಗೆ ಬಂದು ಮತ್ತೆ ಕಲ್ಮಂಜಕ್ಕೆ ಹಿಂದಿರುಗಲು ಬಿ.ಸಿ.ರೋಡಿನಲ್ಲಿ ಧರ್ಮಸ್ಥಳ ಬಸ್ಸನ್ನೇರುತ್ತಿದ್ದಂತೆ ಬ್ಯಾಗಿನ ಪರ್ಸ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಕಳ್ಳರು ಎಗರಿಸಿದ್ದಾರೆ.
ಬಸ್ಸನ್ನೇರುವ ಸಂದರ್ಭದಲ್ಲಿ ಪತಿ ಹಾಗೂ ಮಗು ಕೂಡ ಇದ್ದು, ಮಗುವನ್ನು ಹಿಡಿದು ಪತಿ ಮೊದಲು ಬಸ್ ಹತ್ತಿದ್ದಾರೆ. ಅವರ ಹಿಂದೆ ಶಶಿಕಲಾ ಬಸ್ಸನ್ನೇರುತ್ತಿದ್ದಂತೆ ಎಳೆದಂತಾಯಿತು ಎಂದು ಬ್ಯಾಗ್ ನೋಡಿದಾಗ ಚಿನ್ನಾಭರಣವಿದ್ದ ಪರ್ಸ್ ಕಳವಾಗಿರುವುದು ತಿಳಿದುಬಂದಿದೆ.
ಅಂದಾಜು ತೂಕ 18 ಗ್ರಾಂ. ತೂಕದ 2 ಚಿನ್ನದ ಸರ ಹಾಗೂ ಪೆಂಡೆಂಟ್, 4 ಗ್ರಾಂ. ತೂಕದ ಮಗುವಿನ ಚೈನ್, 6 ಗ್ರಾಂ ತೂಕದ 2 ಬೆಂಡೋಲೆ, 2 ಗ್ರಾಂ.ತೂಕದ ಮಗುವಿನ ಕಿವಿಯೋಲೆ, 8 ಗ್ರಾಂ ತೂಕದ ಬಳೆ, 2 ಗ್ರಾಂ ತೂಕದ ಉಂಗುರ, 6 ಗ್ರಾಂ ತೂಕದ ಕಿವಿಯೋಲೆ ಸೇರಿ ಸುಮಾರು 46 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಹಿಳಾ ಪ್ರಯಾಣಿಕರನ್ನೇ ಹೆಚ್ಚಾಗಿ ಗುರಿ ಮಾಡಿ ಕಳವು ಮಾಡುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಮಾಧ್ಯಮಗಳು ಸಂಬಂಧಪಟ್ಟ ಪೊಲೀಸ್ ಇಲಾಖೆಯನ್ನು ಎಚ್ಚರಿಸಿದರೂ ಈ ತನಕ ಕಳ್ಳತನದ ನಿಯಂತ್ರಣ ಸಾಧ್ಯವಾಗಿಲ್ಲ.
ಈ ಭಾಗದಲ್ಲಿ ಪೊಲೀಸರು ವಿಶೇಷ ನಿಗಾ ಇರಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದು, ಆದರೆ ಪೊಲೀಸರು ಆ ಕಾರ್ಯವನ್ನು ಮಾಡುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.