Vitla Theft: ಗ್ರಾಹಕರ ಸೋಗಿನಲ್ಲಿ ಬಂದು ಮೊಬೈಲ್ ಎಗರಿಸಿದ ಕಳ್ಳ
Team Udayavani, Dec 11, 2023, 12:33 PM IST
![5-vitla](https://www.udayavani.com/wp-content/uploads/2023/12/5-vitla-1-620x372.jpg)
![5-vitla](https://www.udayavani.com/wp-content/uploads/2023/12/5-vitla-1-620x372.jpg)
ವಿಟ್ಲ: ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ವೈನ್ ಶಾಪ್ ನಲ್ಲಿದ್ದ ಮೊಬೈಲ್ ಎಗರಿಸಿದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಮದ್ಯದಂಗಡಿಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಟ್ಲ ಬಸ್ ನಿಲ್ದಾಣದ ಬಳಿಯಿರುವ ಮದ್ಯದಂಗಡಿಗೆ ವ್ಯಕ್ತಿಯೊಬ್ಬ ಬಂದಿದ್ದು ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿದ್ದ. ಆತ ಟೇಬಲ್ ನಲ್ಲಿದ್ದ ರಾಜೇಶ್ ಅವರ ಮೊಬೈಲ್ ಅನ್ನು ಚಾಲಾಕಿತನದಿಂದ ಎಗರಿಸಿದ್ದಾನೆ.
ಈ ಕಳ್ಳತನದ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.