ಪುತ್ತೂರು: ಅಂಗಡಿಗಳಿಗೆ ನುಗ್ಗಿ ಸಿಗರೇಟು, ಗುಟ್ಕಾ, ಚಿಲ್ಲರೆ ಹಣ ಕದ್ದ ಕಳ್ಳರು
Team Udayavani, Sep 23, 2021, 10:11 AM IST
ಪುತ್ತೂರು: ಉಪ್ಪಿನಂಗಡಿ- ಪುತ್ತೂರು ರಸ್ತೆಯ ಕೃಷ್ಣನಗರ ಚರ್ಚ್ ಬಳಿಯ ಎರಡು ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಸೆ.23 ರಂದು ಬೆಳಕಿಗೆ ಬಂದಿದೆ.
ಕೃಷ್ಣನಗರ ಬಳಿಯ ಗೋಪಾಲ ಎಂಬವರ ಅಂಗಡಿಗೆ ಕಳ್ಳರು ಪಕ್ಕದ ಮರ ಏರಿ ಶೀಟ್ ಜಾರಿಸಿ ಒಳನುಗ್ಗಿ ಅಂಗಡಿಯಲ್ಲಿ ದಾಸ್ತಾನಿದ್ದ 2 ಗೋಣಿ ಸಿಗರೇಟು ಪ್ಯಾಕೇಟ್ ಮತ್ತು ಗುಟ್ಕಾ ಹಾಗು ಡ್ರಾವರ್ ನಲ್ಲಿ ಇದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ. ಪಕ್ಕದ ಲತೀಫ್ ಎಂಬವರ ತರಕಾರಿ ಅಂಗಡಿಯ ರೋಲಿಂಗ್ ಶೆಟರ್ ಮೂಲಕ ಒಳನುಗ್ಗಿದ ಕಳ್ಳರು ಡಬ್ಬದಲ್ಲಿ ಇಟ್ಟಿದ್ದ ರೂ.300 ಅನ್ನು ಕಳವು ಮಾಡಿದ್ದಾರೆ.
ಇದನ್ನೂ ಓದಿ: ಭೀಕರ ಕೊಲೆ : ಹೆಂಡತಿ, ಮಗಳನ್ನೇ ಕೊಂದ ಪಾಪಿ
ಹಿಂದೊಮ್ಮೆ ಕಳವಾಗಿತ್ತು
ಗೋಪಾಲ ಅವರು ಹಲವು ವರ್ಷಗಳ ಹಿಂದೆ ಸಾಲ್ಮರ ಕ್ರಾಸ್ ಬಳಿ ಗೂಡಂಗಡಿಯನ್ನು ಹೊಂದಿದ್ದ ವೇಳೆ ಅವರ ಗೂಡಂಗಡಿ ಬೆಂಕಿಗಾಹುತಿ ಆಗಿತ್ತು. ಅದಾದ ಬಳಿಕ ರಸ್ತೆ ಅಗಲೀಕರಣದಿಂದ ಅವರು ಅಂಗಡಿಯನ್ನು ಕೃಷ್ಣನಗರಕ್ಕೆ ಸ್ಥಳಾಂತರಿಸಿದ್ದರು. ಆ ಬಳಿಕ ಅಂಗಡಿಯಿಂದ ಕಳವಾಗಿತ್ತು. ಇದೀಗ ಎರಡನೇ ಬಾರಿ ಕಳ್ಳತನ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.