ಕೆಯ್ಯೂರು: ಹಸುರು ಗ್ರಾಮ ನಿರ್ಮಾಣಕ್ಕೆ ಚಿಂತನೆ
ಸಾಲು ಮರಗಳೊಂದಿಗೆ ಪಾರ್ಕ್ ನಿರ್ಮಾಣದ ಕನಸು ಕಂಡಿರುವ ಶಿಕ್ಷಕ
Team Udayavani, May 4, 2019, 5:05 AM IST
ಕೆಯ್ಯೂರು: ಇಡೀ ಗ್ರಾಮವನ್ನು ಹಚ್ಚ ಹಸುರಾಗಿಸಲು ಕೆಯ್ಯೂರಿನ ಶಿಕ್ಷಕ ಇಬ್ರಾಹಿಂ ಕನಸು ಕಂಡಿದ್ದು, ಇದರ ಸಾಕಾರಕ್ಕೆ ಮುಂದಡಿ ಇರಿಸಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಸಾಲು ಮರ, ಜನನಿಬಿಡ ಪ್ರದೇಶಗಳಲ್ಲಿ ಹಸುರು ಪಾರ್ಕ್ ನಿರ್ಮಾಣ ಹಾಗೂ ಅಂತರ್ಜಲ ಸಂರಕ್ಷಣೆಗೆ ಇಂಗು ಗುಂಡಿ ನಿರ್ಮಾಣ – ಇಬ್ರಾಹಿಂ ಗ್ರಾಮಸ್ಥರ ಮುಂದಿರಿಸಿರುವ ಈ ಕನಸು ಸಾಕಾರಗೊಂಡರೆ 2025ಕ್ಕೆ ಕೆಯ್ಯೂರು ಹಸುರು ಗ್ರಾಮವಾಗಿ ನಳನಳಿಸಲಿದೆ.
ಕೆಯ್ಯೂರು ಗ್ರಾಮಸ್ಥರ ಮಾದರಿ ಗ್ರಾಮದ ಕನಸು ‘ವಿಷನ್ 2025’ ಇದರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಇಬ್ರಾಹಿಂ ವಿವಿಧ ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರ ಸಮಿತಿಗಳು ಹಾಗೂ ಗ್ರಾಮಸ್ಥರ ಸಹಭಾಗಿತ್ವದಿಂದ ‘ಹಸುರು ಕೆಯ್ಯೂರು’ ಸಾಕಾರಗೊಳಿಸುವ ಆಶಯವನ್ನು ಮುಂದಿಟ್ಟಿದ್ದಾರೆ.
ಸಾಲು ಮರ
ಕಟ್ಟತ್ತಾರು ಹಾಗೂ ಅಂಕತ್ತಡ್ಕ ನಡುವೆ ಕೆಯ್ಯೂರು ಗ್ರಾಮದ ವ್ಯಾಪ್ತಿ ಇದೆ. ಈ 3 ಕಿ.ಮೀ. ಉದ್ದದ ರಸ್ತೆ ಎರಡೂ ಕಡೆಗಳಲ್ಲಿ ಸಾಲು ಮರಗಳನ್ನು ನೆಟ್ಟು ಬೆಳೆಸುವ ಗುರಿ ಹೊಂದಲಾಗಿದೆ.
ಪಾರ್ಕ್ ನಿರ್ಮಾಣ
ಕಟ್ಟತ್ತಾರು, ಕೆಯ್ಯೂರು, ಶಾಲೆ ಬಳಿ, ಸಂತೋಷ್‌ನಗರ, ಮಾಡಾವು ಕಟ್ಟೆ, ಅಂಕತ್ತಡ್ಕ ಜಂಕ್ಷನ್‌ಗಳಲ್ಲಿ ಹಸುರು ಹುಲ್ಲಿನ ಪಾರ್ಕ್ ನಿರ್ಮಾಣ ಮಾಡುವುದು. ಪ್ರತಿಯೊಂದು ಅಂಗಡಿ, ಕಟ್ಟಡ ಮಾಲಕರು ತಮ್ಮ ಕಟ್ಟಡದ ಎದುರು ಭಾಗದಲ್ಲಿ ಹಸುರು ಹುಲ್ಲಿನ ಪಾರ್ಕ್ ಮಾಡಿ, ಅದನ್ನು ನಿರ್ವಹಿಸುವುದು ಯೋಜನೆಯ ಭಾಗವಾಗಿದೆ.
ಇಂಗು ಗುಂಡಿ ನಿರ್ಮಿಸಿ
ಅಂತರ್ಜಲ ವೃದ್ಧಿಗೆ ಇಂಗು ಗುಂಡಿ ಅತೀ ಅಗತ್ಯ. ಪ್ರತಿ ಮನೆಯಲ್ಲೂ ಇಂಗು ಗುಂಡಿ ನಿರ್ಮಾಣ ಮಾಡಿ ಅಂರ್ತಜಲ ಮಟ್ಟ ಹೆಚ್ಚಿಸಲು ಆದ್ಯತೆ ನೀಡುವ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಇಬ್ರಾಹಿಂ ಅವರು ಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಶಿವರಾಮ ರೈ ಕಜೆ, ನಿವೃತ್ತ ತಹಶೀಲ್ದಾರ್ ವಿಶ್ವನಾಥ ಪೂಜಾರಿ, ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಬಾಬು ಬಿ., ಉಪಾಧ್ಯಕ್ಷ ರಾಧಾಕೃಷ್ಣ ಗೌಡ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಶರತ್ ಕುಮಾರ್ ಮಾಡಾವು, ಸಿಆರ್‌ಪಿ ಅಬ್ದುಲ್ ಬಶೀರ್, ಕೆಯ್ಯೂರು ಪ್ರೌಢಶಾಲಾ ಮುಖ್ಯಗುರು ವಿನೋದ್ ಕುಮಾರ್ ಕೆ.ಎಸ್., ಆನಂದ ರೈ ದೇವಿನಗರ, ಜಯರಾಮ ಶೆಟ್ಟಿ ಇಳಂತಾಜೆ ಮುಂತಾದವರೂ ಈ ಕನಸಿಗೆ ನೀರೆರೆಯುತ್ತಿದ್ದಾರೆ.
ಬೆಂಬಲ ಇದೆ
ಶಿಕ್ಷಕ ಇಬ್ರಾಹಿಂ ಒಂದು ಒಳ್ಳೆಯ ಕನಸನ್ನು ಗ್ರಾಮದ ಜನರ ಮುಂದಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹಸುರು ಅತೀ ಮುಖ್ಯ. ಈ ಯೋಚನೆ, ಯೋಜನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಸ್ಥಳೀಯರಾದ ದಂಬೆಕಾನ ಸದಾಶಿವ ರೈ ಹೇಳಿದ್ದಾರೆ.
ಸೋಮವಾರಪೇಟೆಯ ಮೇರುಗಲಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಇಬ್ರಾಹಿಂ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ. ಮೇರುಗಲಲೆ ಶಾಲೆಯಲ್ಲಿ ಲ್ಯಾಬ್ ನಿರ್ಮಾಣದ ಮೂಲಕ ರಾಷ್ಟ್ರಮಟ್ಟದಲ್ಲಿ ಅವರು ಸುದ್ದಿಯಾಗಿದ್ದರು. ಪರಿಸರಕ್ಕೆ ಹೆಚ್ಚಿನ ಒತ್ತು ನೀಡುವ ಇವರು ಮರ-ಗಿಡಗಳನ್ನು ಬೆಳೆಸುವಲ್ಲಿ ಅಪಾರ ಕಾಳಜಿ ಹೊಂದಿದ್ದಾರೆ. ಶಾಲಾ ಆವರಣದಲ್ಲೂ ಹಸುರಿಗೆ ಹೆಚ್ಚಿನ ಒತ್ತು ನೀಡಿರುವ ಅವರು, ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಎಳೆಯ ಪ್ರಾಯದಲ್ಲೇ ಮೂಡಿಸಬೇಕಾಗಿದೆ ಎನ್ನುತ್ತಾರೆ.
ಶಿಕ್ಷಕನ ಕನಸು
ಸೋಮವಾರಪೇಟೆಯ ಮೇರುಗಲಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಇಬ್ರಾಹಿಂ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ. ಮೇರುಗಲಲೆ ಶಾಲೆಯಲ್ಲಿ ಲ್ಯಾಬ್ ನಿರ್ಮಾಣದ ಮೂಲಕ ರಾಷ್ಟ್ರಮಟ್ಟದಲ್ಲಿ ಅವರು ಸುದ್ದಿಯಾಗಿದ್ದರು. ಪರಿಸರಕ್ಕೆ ಹೆಚ್ಚಿನ ಒತ್ತು ನೀಡುವ ಇವರು ಮರ-ಗಿಡಗಳನ್ನು ಬೆಳೆಸುವಲ್ಲಿ ಅಪಾರ ಕಾಳಜಿ ಹೊಂದಿದ್ದಾರೆ. ಶಾಲಾ ಆವರಣದಲ್ಲೂ ಹಸುರಿಗೆ ಹೆಚ್ಚಿನ ಒತ್ತು ನೀಡಿರುವ ಅವರು, ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಎಳೆಯ ಪ್ರಾಯದಲ್ಲೇ ಮೂಡಿಸಬೇಕಾಗಿದೆ ಎನ್ನುತ್ತಾರೆ.
ಪ್ರಕೃತಿ ಪರ
ಅರಣ್ಯ ನಾಶ ಸಲ್ಲದು
– ಶಶಿಧರ್ ರಾವ್ ಬೊಳಿಕ್ಕಲ, ಅಧ್ಯಕ್ಷರು, ಕೆಯ್ಯೂರು-ಕೆದಂಬಾಡಿ ಸಿಎ ಬ್ಯಾಂಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.