ಭೂಗತ ಕೇಬಲ್ ಅಳವಡಿಕೆ ಚಿಂತನೆ
Team Udayavani, May 11, 2022, 9:27 AM IST
ಪುತ್ತೂರು: ವಿದ್ಯುತ್ ತಂತಿ ಮುಕ್ತ ನಗರ ನಿರ್ಮಾಣ ಕನಸು ಪುತ್ತೂರು, ಮೇ 10: ವಿದ್ಯುತ್ ತಂತಿ ಮುಕ್ತ ಪುತ್ತೂರು ನಗರವನ್ನು ರೂಪಿಸುವ ಪ್ರಯತ್ನಕ್ಕೆ ಪೂರಕ ಎಂಬಂತೆ ಈಗಾಗಲೇ 8 ಕಿ.ಮೀ. ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲಾಗಿದ್ದು ಇಡೀ ನಗರಕ್ಕೆ ವಿಸ್ತರಿಸುವ ಚಿಂತನೆ ನಡೆದಿದೆ.
ವಿದ್ಯುತ್ ಕಂಬದ ಮೇಲೆ ತಂತಿ ಹಾಕಿ ವಿದ್ಯುತ್ ಸರಬರಾಜು ಮಾಡುವ ಬದಲು ನೆಲದೊಳಗೆ ಕೇಬಲ್ ಅಳವಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ನಗರವಿಡೀ ಅನು ಷ್ಠಾನಕ್ಕೆ ಹಣ ವಿನಿಯೋಗ ಮತ್ತು ಯೋಜನೆಯ ರೂಪುರೇಷೆ ಸಿದ್ಧ ಗೊಳಿಸುವಂತೆ ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬನ್ನೂರಿನಿಂದ-ಕೇಪುಳು ತನಕ ಒಂದು ಲೈನ್, ಬನ್ನೂರಿನಿಂದ ಕೋಟೇಚಾ ಹಾಲ್ ತನಕ ಎರಡು ಲೈನ್, ಬನ್ನೂರಿನಿಂದ ರೈಲ್ವೇ ಬ್ರಿಡ್ಜ್ ತನಕ 2 ಲೈನ್, ಬನ್ನೂರಿನಿಂದ ಕೆ.ಎಂ. ಸ್ಟೋರ್ ತನಕ 1 ಲೈನ್ ಕೇಬಲ್ ಅಳವಡಿಸಲಾಗಿದೆ. ಉಳಿದ ಕಡೆಗಳಲ್ಲಿ ಆರ್‌ಡಿಎಸ್ ಯೋಜನೆ ಸೇರಿದಂತೆ ಬೇರೆ-ಬೇರೆ ಯೋಜ ನೆಗಳ ಮೂಲಕ ಕೇಬಲ್ ಅಳವಡಿಸುವ ಚಿಂತನೆ ಯನ್ನು ಮೆಸ್ಕಾಂ ಹೊಂದಿದೆ. ಈ ಕೇಬಲ್ ಜಾಲಗಳು ಒಂದು ವಿದ್ಯುತ್ ಕೇಂದ್ರ ದಿಂದ ಇನ್ನೊಂದು ಕೇಂದ್ರ ದವರೆಗೆ ಅಳವಡಿಸು ವುದಾಗಿದೆ. ನಗರದ ಮುಖ್ಯ ರಸ್ತೆಯ ಸನಿಹದಲ್ಲಿರುವ ವಿದ್ಯುತ್ ಕಂಬದ ಬದಲು ಅಂಡರ್ ಗ್ರೌಂಡ್‌ನಲ್ಲಿ ವಿದ್ಯುತ್ ಪೂರೈಕೆ ಆಗಲಿ ದ್ದು ಪಟ್ಟಣ ವ್ಯಾಪ್ತಿ ಕೊನೆಗೊಂಡ ಅನಂತರ ಅಲ್ಲಿಂದ ಪುನಃ ಕಂಬಗಳ ಮೂಲಕ ವಿದ್ಯುತ್ ಕೃಷಿ, ಮನೆ, ವಾಣಿಜ್ಯ ಕಟ್ಟಡಗಳಿಗೆ ಪೂರೈಕೆ ಆಗಲಿದೆ.
ಕಂಬ ರಹಿತ ವಿದ್ಯುತ್ ಪೂರೈಕೆ ಪುತ್ತೂರು ನಗರವನ್ನು ವಿದ್ಯುತ್ ತಂತಿ ಮುಕ್ತ ನಗರವಾಗಿ ರೂಪಿಸುವ ಸಲು ವಾಗಿ ಅಂಡರ್ ಗ್ರೌಂಡ್ ಕೇಬಲ್ ಅಳ ವಡಿಕೆಗೆ ಒತ್ತು ನೀಡಲಾಗಿದೆ. ಇದಕ್ಕಾಗಿ 20 ಕೋ.ರೂ. ಅನುದಾನ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ. ಇಡೀ ನಗರದಲ್ಲಿ ವಿದ್ಯುತ್ ಕಂಬ ರಹಿತವಾದ ವಿದ್ಯುತ್ ಪೂರೈಕೆ ಜಾಲ ವಿಸ್ತರಿಸಲು ಕ್ರಮ ಕೈಗೊಳ್ಳ ಲಾಗುವುದು. – ಸಂಜೀವ ಮಠಂದೂರು, ಶಾಸಕರು, ಪುತ್ತೂರು.
8 ಕಿ.ಮೀ. ಪೂರ್ಣ ನಗರದಲ್ಲಿ 8 ಕಿ.ಮೀ.ದೂರದ ತನಕ ಭೂಗತ ಕೇಬಲ್ ಅಳವಡಿಕೆ ಆಗಿದ್ದು, ಇದಕ್ಕೆ 3.5 ಕೋ.ರೂ. ಖರ್ಚು ಮಾಡಲಾಗಿದೆ. ಕೇಬಲ್ ಅಳ ವಡಿಸಿರುವ ಪ್ರದೇಶದಲ್ಲಿ 3 ವರ್ಷಗಳ ತನಕ ಸಾಧಕ-ಬಾಧಕ ಪರಿಶೀಲಿಸುವ ನಿಟ್ಟಿನಲ್ಲಿ ವಿದ್ಯುತ್ ಕಂಬ ತೆರವು ಮಾಡಿಲ್ಲ. ಇಡೀ ನಗರದಲ್ಲಿ ಈ ಯೋಜನೆ ವಿಸ್ತರಿಸಲು ನೂರಾರು ಕೋ.ರೂ. ಆವಶ್ಯಕತೆ ಇದೆ. – ರಾಮಚಂದ್ರ ಎ., ಸ. ಕಾರ್ಯ ನಿರ್ವಾಹಕ ಎಂಜಿನಿಯರ್ ಮೆಸ್ಕಾಂ ನಗರ ಉಪವಿಭಾಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.