ಮುಖ್ಯರಸ್ತೆಯ ಬದಿಯಲ್ಲೇ ಟಾಯ್ಲೆಟ್ ಬ್ಲಾಕ್!
Team Udayavani, Jul 22, 2018, 3:04 PM IST
ಬೊಳುವಾರು: ಹೊಸದಾಗಿ ನಿರ್ಮಿಸಿದ ಇ – ಟಾಯ್ಲೆಟ್ ಪಕ್ಕದಲ್ಲೇ ಶೌಚಾಲಯ ಗುಂಡಿ ಬ್ಲಾಕ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೊಳುವಾರು ಜಂಕ್ಷನ್‌ನಲ್ಲಿದ್ದ ಸಾರ್ವಜನಿಕ ಶೌಚಾಲಯ ನಿರ್ವಹಣೆಯಿಲ್ಲದೆ ಸೊರಗಿತ್ತು. ಶೌಚಾಲಯದ ಒಳಗೆ ಹೋಗುವುದೇ ಕಷ್ಟ ಎನ್ನುವ ಸ್ಥಿತಿ ಇತ್ತು. ನಗರಸಭೆ ವತಿಯಿಂದ ಇದಕ್ಕೊಂದು ವ್ಯವಸ್ಥೆ ಮಾಡಲಾಯಿತು. ಮಾತ್ರವಲ್ಲ, ಇದರ ಪಕ್ಕದಲ್ಲೇ ಇ – ಟಾಯ್ಲೆಟ್ ಇಡಲಾಗಿದೆ. ಆದರೆ, ಪಕ್ಕದಲ್ಲಿರುವ ಪಿಟ್ ತುಂಬಿ ಹೋಗಿದ್ದು, ದುರ್ನಾತ ಬೀರುತ್ತಿದೆ.
ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಬೊಳುವಾರು ಜಂಕ್ಷನ್ ನಲ್ಲಿ ಇ – ಟಾಯ್ಲೆಟ್ ಇಡಲಾಗಿದೆ. ಪ್ರತಿಯೊಂದಕ್ಕೆ 12 ಲಕ್ಷ ರೂ.ಗಳಂತೆ 21 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಆದರೆ, ಮಳೆ ನೀರು ಹರಿದು ಪಕ್ಕದಲ್ಲಿರುವ ಶೌಚಾಲಯದ ಪಿಟ್ ಸೇರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಮಾಡಿದರೆ, ಈ ಸಮಸ್ಯೆ ಇರುವುದಿಲ್ಲ. ಸದ್ಯದ ಸ್ಥಿತಿಯಲ್ಲಿ ಶೌಚಾಲಯ ಪಿಟ್ ತುಂಬಿ ಹೋಗಿರುವುದರಿಂದ, ಸಾಮಾನ್ಯ ಜನರಿಗೆ ಸಮಸ್ಯೆಯಾಗಿದೆ. ಮಾತ್ರವಲ್ಲ, ಶೌಚಾಲಯವನ್ನು ಬಳಸಲು ಹಿಂದೆ- ಮುಂದೆ ನೋಡುವಂತಾಗಿದೆ. ಶೌಚಾಲಯ ಇದ್ದು, ಬಳಕೆಗೆ ಯೋಗ್ಯವಾಗಿಲ್ಲವಾದರೆ, ಮುಂದೆ ಅಶುಚಿತ್ವ ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ.
ಪರಿಶೀಲಿಸಿ ಕ್ರಮ
ಇ-ಟಾಯ್ಲೆಟನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಇದರ ಪಿಟ್ ತುಂಬಿ ಹೋಗಿಲ್ಲ. ಸಮೀಪದಲ್ಲಿರುವ ಶೌಚಾಲಯದ
ಪಿಟ್ ತುಂಬಿದೆ. ಇದಕ್ಕೆ ಕಾರಣ ಮಳೆ ನೀರು. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ರೂಪಾ ಶೆಟ್ಟಿ ಪೌರಾಯುಕ್ತೆ,
ಪುತ್ತೂರು ನಗರಸಭೆ
ಅಸಹನೀಯ ವಾಸನೆ ಟಾಯ್ಲೆಟ್ ಪಿಟ್ ತುಂಬಿರುವುದರಿಂದ, ಕೆಟ್ಟ ವಾಸನೆ ಬರುತ್ತಿದೆ. ಇದರ ಪಕ್ಕವೇ ರಿಕ್ಷಾ ಸರತಿ ಸಾಲು ಇದೆ. ದಿನವಿಡೀ ಇದೇ ವಾಸನೆಯನ್ನು ಸಹಿಸಿಕೊಂಡು ಕುಳಿತುಕೊಳ್ಳಬೇಕು. ಸಾರ್ವಜನಿಕರು ಮೂಗಿಗೆ ಬಟ್ಟೆ ಕಟ್ಟಿಕೊಂಡು ನಡೆದಾಡುತ್ತಿದ್ದಾರೆ. ಹರಿದು ಹೋಗುವ ಮಳೆನೀರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿದರೆ, ಸಮಸ್ಯೆ ತಪ್ಪುತ್ತದೆ.
- ಇಸ್ಮಾಯಿಲ್ ಬೊಳುವಾರು
ಅಧ್ಯಕ್ಷ, ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ- ಮಾಲಕ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.