Sand ಉಳಿಯತ್ತಡ್ಕ ಹೊಳೆಯಿಂದ ಮರಳು ಸಾಗಾಟ: ಆತಂಕ
ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟದ ಎಚ್ಚರಿಕೆ
Team Udayavani, Dec 4, 2023, 11:34 PM IST
ವಿಟ್ಲ: ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಉಳಿಯತ್ತಡ್ಕ ಹೊಳೆಯಿಂದ ಮರಳು ಸಾಗಾಟ ನಡೆಸಲಾಗುತ್ತಿದ್ದು, ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
1968ರಲ್ಲಿ ಉಳಿಯತ್ತಡ್ಕ ಹೊಳೆಗೆ ಕಿಂಡಿ ಅಣೆಕಟ್ಟು ಮತ್ತು ಸ್ಥಳೀಯರಿಗೆ ಸಂಪರ್ಕ ಸೇತುವೆ ನಿರ್ಮಿಸಲಾಗಿತ್ತು. ಇದು ಈ ಭಾಗದ ಕೃಷಿಕರ ತೋಟಕ್ಕೆ ನೀರುಣಿಸುತ್ತಿತ್ತು. ಅಲ್ಲದೇ ಸ್ಥಳೀಯ ಕೃಷಿಕರ ಜಲಮೂಲವೂ ಆಗಿತ್ತು. ಈ ಹೊಳೆಯಲ್ಲಿ ನೀರು ಇರುವ ತನಕ ಈ ಭಾಗದ ಕೃಷಿಕರಿಗೆ ನೀರಿನ ಬರವಿರಲಿಲ್ಲ. ಈ ಕಿಂಡಿ ಅಣೆಕಟ್ಟಿನ ಮೇಲೆ ಸ್ಥಳೀಯ ದೈವದ ಪೈಚಿಲ್ ನೇಮಕ್ಕೆ ಭಂಡಾರ ಸಾಗುತ್ತದೆ. ಕಿಂಡಿ ಅಣೆಕಟ್ಟೆ ಮೇಲೆ ಕೃಷಿಕರು ಹೊಳೆ ದಾಟುತ್ತಾರೆ ಮತ್ತು ಸಾಮಗ್ರಿಗಳನ್ನು ಒಯ್ಯುತ್ತಾರೆ. ಅತ್ಯಂತ ಉಪಯುಕ್ತ ಕಿರು ಸೇತುವೆಯೂ, ನೀರಿನ ಆಶ್ರಯವನ್ನೂ ಹೊಂದಿರುವ ಹೊಳೆಯ ಮರಳನ್ನು ಕಿತ್ತು ಜನಜೀವನ ಅಸ್ತವ್ಯಸ್ತಗೊಳಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ದೂರಲಾಗಿದೆ.
ಸ್ಥಳೀಯರಿಗೆ ಆತಂಕ ಏನು?
ಈ ಕಿಂಡಿ ಅಣೆಕಟ್ಟೆಯ ಬಳಿ ಅಂದರೆ 100 ಮೀಟರ್ ದೂರದಲ್ಲಿ ಜೆಸಿಬಿಯಲ್ಲಿ ಮರಳು ಎತ್ತಲಾಗುತ್ತಿದೆ. ಪ್ರತೀದಿನ ಲಾರಿಗಳಲ್ಲಿ 50 ಲೋಡ್ ಮರಳನ್ನು ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದೆ. ಕರ್ನಾಟಕ-ಕೇರಳ ಗಡಿಭಾಗದಲ್ಲಿ ಈ ಕೃತ್ಯವನ್ನು ಅವ್ಯಾಹತವಾಗಿ ಮಾಡಲಾಗುತ್ತಿದ್ದು, ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದರೂ ಫಲ ಸಿಕ್ಕಿಲ್ಲ. ಅಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡುವ ವೇಳೆ ಜೆಸಿಬಿ, ಲಾರಿಗಳಿರುವುದಿಲ್ಲ ಎಂದು ಹೇಳಲಾಗುತ್ತಿದ್ದು, ಇದು ಪೂರ್ವನಿಯೋಜಿತ ವ್ಯವಸ್ಥೆ ಎಂದು ಟೀಕಿಸುತ್ತಿದ್ದಾರೆ.
ಭಾರೀ ಅನಾಹುತ ಸಾಧ್ಯತೆ
ಸುಮಾರು ಎರಡು ತಿಂಗಳ ಹಿಂದೆ ಈ ಕಾರ್ಯ ಆರಂಭವಾಗಿದ್ದು, ಹೊಳೆಯ ದಡದಲ್ಲಿರುವ ಕೃಷಿಕರಿಗೆ ಆಪತ್ತನ್ನುಂಟು ಮಾಡಿದೆ. ಇದನ್ನು ಅಧಿಕಾರಿಗಳು ಅಥವಾ ಜನಪ್ರತಿನಿಧಿ ಗಳು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಭಾರೀ ಅನಾಹುತ ಉಂಟಾಗಲಿದೆ. ಹತ್ತಿರದಲ್ಲೇ ಮರಳನ್ನು ತೆಗೆಯುವ ಪರಿಣಾಮ ಕಿಂಡಿ ಅಣೆಕಟ್ಟು ಕೊಚ್ಚಿಹೋಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಚಿಂತಿತರಾಗಿದ್ದಾರೆ. ಕೃಷಿಕರ ಜೀವನಕ್ಕೆ ಅಡ್ಡಿಯಾಗುವ ಮರಳು ಸಾಗಾಟವನ್ನು ನಿಲ್ಲಿಸಲು ಸಂಬಂಧ ಪಟ್ಟ ಇಲಾಖಾಧಿಕಾರಿಗಳು, ಜನಪ್ರತಿ ನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮನವಿಗೆ ಸ್ಪಂದಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕೃಷಿಕರು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.