Vitla ಪೊಲೀಸರಿಂದ ಕಳ್ಳರಿಬ್ಬರ ಬಂಧನ; 2.85 ಲಕ್ಷ ರೂ. ಸೊತ್ತುಗಳ ವಶ
Team Udayavani, Oct 31, 2024, 7:30 AM IST
ವಿಟ್ಲ: ಮಾಣಿ ಜಂಕ್ಷನ್‌ನಲ್ಲಿ ವಿಟ್ಲ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿ ಸಿದ್ದು, ಈ ಆರೋಪಿಗಳು ವಿಟ್ಲ ಠಾಣೆ ವ್ಯಾಪ್ತಿಯ ಮಿತ್ತೂರು, ಕೊಡಾಜೆ ಮನೆ ಕಳವು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕಳವುಗೈದ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಉಳ್ಳಾಲ ತಾಲೂಕು ಬೋಳಿಯಾರು ಗ್ರಾಮ ಧರ್ಮನಗರ ನಿವಾಸಿ ಮಹಮ್ಮದ್ ರಿಯಾಜ್(38) ಮತ್ತು ಉಳ್ಳಾಲ ತಾಲೂಕು ಹಳೆ ಕೋಟೆ ಮನೆ ನಿವಾಸಿ ಮೊಹಮ್ಮದ್ ಇಂತಿಯಾಜ್(38) ಬಂಧಿತ ಆರೋಪಿಗಳು.
ಆರೋಪಿ ಮಹಮ್ಮದ್ ರಿಯಾಜ್ ಮೇಲೆ ಕೇರಳ ರಾಜ್ಯದ ಕುಂಬಳೆ ಹಾಗೂ ಮಂಗಳೂರು ನಗರ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿವೆ.
ಪ್ರಕರಣದ ತನಿಖೆ ನಡೆಸಿ ರೂ 1,35,000 ರೂ ಮೌಲ್ಯದ ಗ್ಯಾಸ್ ಸಿಲಿಂಡರ್ ಹಾಗೂ ಮನೆ ಸಾಮಗ್ರಿಗಳು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಅಟೊ ರಿಕ್ಷಾ -01 (ಅಂದಾಜು ಮೌಲ್ಯ 1,50,000 ರೂ.) ವನ್ನು ವಶಪಡಿಸಿಕೊಳ್ಳಲಾಗಿದೆ.
ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 2,85,000 ರೂ ಆಗಬಹುದು.
ದ.ಕ ಜಿಲ್ಲಾ ಪೊಲೀಸ್ ಅಧಿಧೀಕ್ಷಕಯತೀಶ್ ಎನ್. ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್. ಅವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಎಸ್. ವಿಜಯ ಪ್ರಸಾದ್ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್.ಈ. ಅವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ವಿದ್ಯಾ ಕೆ.ಜೆ., ರತ್ನಕುಮಾರ್, ಕೌಶಿಕ್, ಸಿಬಂ ದಿಗಳಾದ ಉದಯ ರೈ, ರಾಧಾಕೃಷ್ಣ , ರಕ್ಷಿತ್ ರೈ, ಶ್ರೀಧರ ಸಿ.ಎಸ್., ಕೃಷ್ಣ ನಾಯ್ಕ, ಗದಿಗೆಪ್ಪ ಕಲ್ಲೂರ, ಶಂಕರ ಶಂಶಿ, ಮನೋಜ್, ಸತೀಶ್, ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.