ಉಡುಪಿ ಮಲ್ಲಿಗೆ ಬೆಳೆದು ಆದಾಯ ಗಳಿಸಿದ ಪುತ್ತೂರಿನ ಲೋಬೋ..!

Team Udayavani, May 15, 2021, 10:44 AM IST

mallige-1

ಪುತ್ತೂರು: ಕಳೆದ ವರ್ಷದ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮೇಲಿನ ಟೇರಸ್ ನಲ್ಲಿ ಮಲ್ಲಿಗೆ ಕೃಷಿ ಮಾಡಿ ಈ ಲಾಕ್ ಡೌನ್ ನಲ್ಲಿ ಮಲ್ಲಿಗೆ ಮಾರಾಟ ಮಾಡಿ ಆದಾಯ ಗಳಿಸುತ್ತಿರುವ ಪ್ರಯತ್ನವೊಂದು ನಗರದ ಮೊಟ್ಟೆತ್ತಡ್ಕದ ಮನೆಯೊಂದರಲ್ಲಿ ಗಮನ ಸೆಳೆದಿದೆ.

ನಗರದ ಮೊಟ್ಟೆತ್ತಡ್ಕ ನಿವಾಸಿ ಸಂದೀಪ್ ಲೋಬೋ ಟೆರೇಸ್ ನಲ್ಲಿ ಮಲ್ಲಿಗೆ ಬೆಳೆದವರು. ಇಲ್ಲಿ ದಿನಂಪ್ರತಿ ಅರಳುವ ಮಲ್ಲಿಗೆಯ ಸುಗಂಧ ಹತ್ತೂರಿಗೆ ಹಬ್ಬುತ್ತಿದೆ..!

ಮಲ್ಲಿಗೆ ಕೃಷಿ: ಮೊಟ್ಟೆತ್ತಡ್ಕದ ಐದು ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಸಂದೀಪ್ ಕಳೆದ ಲಾಕ್ಡೌನ್ ಅವಧಿಯಲ್ಲಿ ಮಲ್ಲಿಗೆ ಕೃಷಿ ಮಾಡಿದರೆ ಹೇಗೆ ಎಂಬ ಯೋಚನೆ ಮಾಡಿದರು. ಮನೆ ಮುಂಭಾಗದಲ್ಲಿ ಖಾಲಿ ಜಾಗ ಇಲ್ಲದಿದ್ದರೂ, ಆರ್ ‍ಸಿಸಿ ಮನೆ ಮೇಲ್ಭಾಗದ ಖಾಲಿ ಜಾಗ ಬಳಸಿ ಮಲ್ಲಿಗೆ ಬೆಳೆಸಲು ಮುಂದಾದರು. ಆರ್ ‍ಸಿಸಿ  ಮೇಲ್ಭಾಗದ 1000 ಚದರಡಿ ಜಾಗದಲ್ಲಿ ಗೋಣಿಯೊಂದಕ್ಕೆ 25 ಕೆ.ಜಿ.ಮಣ್ಣು ತುಂಬಿಸಿ ಮಲ್ಲಿಗೆ ಗಿಡ ನಾಟಿ ಮಾಡಿದರು. ಸುಮಾರು 72 ಗೋಣಿ ಚೀಲದಲ್ಲಿ ಮಲ್ಲಿಗೆ ಗಿಡಗಳು ಸೊಂಪಾಗಿ ಬೆಳೆದಿದೆ. ಕಾಲ ಕಾಲಕ್ಕೆ ಸೆಗಣಿ ಗೊಬ್ಬರ, ನೀರು ನೀಡುತ್ತಾರೆ. ಮನೆ ಮಂದಿ ದಿನ ನಿತ್ಯ ಗಿಡದ ಆರೈಕೆ ಮಾಡುತ್ತಾರೆ.

ಕೈ ಹಿಡಿದ ಉಡುಪಿ ಮಲ್ಲಿಗೆ..!

ಇದು ಪರಿಮಳ ಬೀರುವ ಉಡುಪಿ ಮಲ್ಲಿಗೆ. ಸಂದೀಪ್ ಅವರು ನಾಟಿ ಮಾಡಿದ ಆರು ತಿಂಗಳಲ್ಲಿ ಗಿಡದಲ್ಲಿ ಮೊಗ್ಗು ಬಿಟ್ಟು ಕೊಯ್ದು ಮಾರಾಟ ಪ್ರಾರಂಭಿಸಿದ್ದಾರೆ. ದಿನವೊಂದಕ್ಕೆ ಆರರಿಂದ ಏಳು ಚೆಂಡು ನಷ್ಟು ಹೂವು ಸಿಗುತ್ತದೆ. ಬಾಳೆ ಎಲೆಯ ಬಳ್ಳಿಯಿಂದ ಮೊಗ್ಗು ನೇಯ್ದು ಮಾರುಕಟ್ಟೆಗೆ ನೀಡುತ್ತಾರೆ. ಈ ತನಕ ಒಟ್ಟು 32 ಸಾವಿರಕ್ಕೂ ಮಿಕ್ಕಿ ಆದಾಯ ದೊರೆತಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಸಿಕ್ಕಿದೆ ಅನ್ನುತ್ತಾರೆ ಮನೆ ಮಂದಿ.

ಟೇರಸ್ ಕೃಷಿ

ಪೇಟೆಯಲ್ಲಿ ಐದು ಸೆಂಟ್ಸ್ ಜಾಗ ಮನೆ ನಿರ್ಮಾಣಕಷ್ಟೇ ಸಾಲುತ್ತದೆ. ಹಾಗಾಗಿ ಕೃಷಿ ಹೇಗೆ ಮಾಡುವುದು ಎಂದು ತಲೆ ಮೇಲೆ ಕೈ ಹೊತ್ತು ಕೂರುವವರು ಅಧಿಕ. ಆದರೆ ಈಗ ಟೇರಸ್ ಕೃಷಿ ಪದ್ಧತಿ ಆ ಸಮಸ್ಯೆಯನ್ನು ನೀಗಿಸಿದೆ. ಸಂದೀಪ್ ಅವರ ಪ್ರಯತ್ನ ಅದಕ್ಕೊಂದು ಉದಾಹರಣೆ. ಸಂದೀಪ್ ಅವರು ಮನೆ ಟೇರಸ್ನ್ ಖಾಲಿ ಜಾಗವನ್ನು ಬಳಸಿ ಮಲ್ಲಿಗೆ ಕೃಷಿ ಮಾತ್ರವಲ್ಲದೆ ಕಾಲ ಕಾಲಕ್ಕೆ ಮನೆ ಅಡುಗೆಗೆ ಬೇಕಾಗುವ ತರಕಾರಿಯನ್ನು ಬೆಳೆಯುತ್ತಾರೆ. ಜತೆಗೆ ಮನೆಯಲ್ಲಿ ಸಿಗುವ ವೇಸ್ಟ್ ಪದಾರ್ಥಗಳನ್ನು ಸಾವಯವ ಗೊಬ್ಬರವನ್ನಾಗಿಯು ಪರಿವರ್ತಿಸಿ ಬಳಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆಯಂತೆ ಕಳೆದ ಬಾರಿ ಲಾಕ್ ಡೌನ್  ಸಂದರ್ಭದಲ್ಲಿ ಮನೆ ಮೇಲಿನ ಖಾಲಿ ಜಾಗದಲ್ಲಿ ಮಲ್ಲಿಗೆ ಕೃಷಿ ಪ್ರಾರಂಭಿಸಿದೆ. ಪ್ರತಿ ದಿನ ಉಡುಪಿ ಮಾರುಕಟ್ಟೆಯಲ್ಲಿನ ದರ ಆಧರಿಸಿ ಧಾರಣೆ ನಿಗದಿಯಾಗುತ್ತದೆ. ಸೀಸನ್ ಮೇಲೆ ದರ ಹೆಚ್ಚು ಕಡಿಮೆ ನಿರ್ಧರಿತವಾಗುತ್ತದೆ. ಲಾಕ್ ಡೌನ್ ನಲ್ಲಿ ಪ್ರಾರಂಭಿಸಿದ ಮಲ್ಲಿಗೆ ಕೃಷಿಯಲ್ಲಿ ಯಶಸ್ಸು ಸಿಕ್ಕಿದೆ.

ಸಂದೀಪ್ ಲೋಬೋ, ಮೊಟ್ಟೆತ್ತಡ್ಕ

ಟಾಪ್ ನ್ಯೂಸ್

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ಮೃತದೇಹ… ಮಹಿಳೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ಮೃತದೇಹ… ಮಹಿಳೆ ಶಾಕ್ !

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.